ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ, ನಾಗಯ್ಯನಹುಂಡಿ, ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ “ಹೆಗ್ಗೂರದಮ್ಮ” ದೇವಸ್ಥಾನದ ಜೀರ್ಣೋದ್ಧಾರಕ್ಕೆ ಯುವ ಮುಖಂಡ ಎಸ್.ಸಚ್ಚಿದಾನಂದ ಆರ್ಥಿಕ ನೆರವು ನೀಡಿದರು.
ಇಂದು ಗ್ರಾಮಕ್ಕೆ ಭೇಟಿ ನೀಡಿದ ಅವರು, ದೇವಾಲಯಗಳು ಭಕ್ತಿಯ ಕೇಂದ್ರವಾಗಿದ್ದು, ಜನರಿಗೆ ನೆಮ್ಮದಿ ನೀಡುವ ತಾಣವಾಗಿದೆ ಎಂದರು.
ಗ್ರಾಮಸ್ಥರ ಕೋರಿಕೆಯಂತೆ ದೇವಾಲಯ ಜೀರ್ಣೋದ್ಧಾರಕ್ಕೆ ಹಣಕಾಸಿನ ನೆರವು ನೀಡುತ್ತಿದ್ದು, ಶೀಘ್ರವಾಗಿ ಕಾಮಗಾರಿ ಪೂರ್ಣಗೊಂಡು ಜನರಿಗೆ ದೇವರ ದರ್ಶನ ಸಿಗುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಸಚ್ಚಿದಾನಂದ ಅವರಿಗೆ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಸ್ವಾಮಿ, ದೇವರಾಜು, ನಾರಾಯಣ, ಮಹೇಶ್, ಮನೋಜ್ ಮತ್ತಿತರರಿದ್ದರು.