Sunday, May 19, 2024

ಪ್ರಾಯೋಗಿಕ ಆವೃತ್ತಿ

ಪ್ರಜ್ವಲ್ ರೇವಣ್ಣ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರಶ್ನೆಯೇ ಇಲ್ಲ: ಚಲುವರಾಯಸ್ವಾಮಿ

ಹಾಸನದಲ್ಲಿ ನಡೆದಿರುವ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕೃಷಿ ಸಚಿವ  ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಎಸ್’ಐಟಿ ರಚನೆಯನ್ನು ಬಿಜೆಪಿಯವರೇ ಸ್ವಾಗತ ಮಾಡಿದ್ದಾರೆ. ಇದನ್ನ ನಾವು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಶ್ನೆಯೆ ಇಲ್ಲ. ಮಹಿಳಾ ಆಯೋಗದ ದೂರಿನ ಮೇಲೆ ಎಸ್ ಐಟಿ ರಚನೆಯಾಗಿದೆ, ಆ ಕೇಸ್ ನ್ನ ಮುಂದುವರೆಸಲಾಗುತ್ತಿದೆ, ನಿನ್ನೆ ಹೆಚ್.ಡಿ.ರೇವಣ್ಣನ ಕಸ್ಡಡಿಗೆ ಬಂಧನವಾಗಿದೆ, ಪ್ರಜ್ವಲ್ ಇವತ್ತು ಅಥವಾ ನಾಳೆ ಬರುವ ಸಾಧ್ಯತೆ ಇದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪ್ರಜ್ವಲ್ ಕೇಸು ಕೋರ್ಟ್ ನಲ್ಲಿ ನಡೆಯುತ್ತಿದೆ. ಎಸ್ ಐಟಿ ಅದ್ರ ಬಗ್ಗೆ ಗಮನ ಹರಿಸುತ್ತೆ, ನಾನು ಹೆಚ್ಚು ಪ್ರಸ್ತಾಪ ಮಾಡೋದಿಲ್ಲ ಎಂದ ಅವರು, ಬಹುಶ ಇಷ್ಟು ಒಪನ್ ಆಗಿ ರಾಜಕಾರಣ ಬೆರಸದೇ ಕಾನೂನು ಬದ್ದವನಾಗಿ ಮಾಡುವಂತದದ್ದು ನಾನು ಎಲ್ಲಿಯೂ ನೋಡಿಲ್ಲ… ಮುಖ್ಯಮಂತ್ರಿಯಾಗಿರಲಿ, ಡಿಸಿಎಂ ಆಗ್ಲಿ ನಾವಾಗ್ಲಿ.. ರಾಜಕೀಯ ಬೆರಸುವುದಿಲ್ಲ ಅದರ ಅವಶ್ಯಕತೆ ನಮ್ಗೆ ಇಲ್ಲ,  ನಾವು ರಾಜಕೀಯ ಮಾಡೋದು ಇಲ್ಲ… ಕೋರ್ಟ್ ಮತ್ತು ತನಿಖೆ ಸಂಸ್ಥೆ ಇವರೆಡರ ಮಧ್ಯೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.

ಕೆಆರ್ ನಗರ ಶಾಸಕರೇ ದೂರು ನೀಡಲು ಕುಮ್ಮಕ್ಕು ನೀಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆ ಯಮ್ಮ ಬಂದಿರೋದು ಸತ್ಯ ಅಲ್ವೇನ್ರಿ, ಇದರಲ್ಲಿ ರಾಜಕೀಯ ಖಂಡಿತ ಇಲ್ಲ ಅದ್ರ ಅವಶ್ಯಕತೆಯೂ ನಮ್ಗೆ ಇಲ್ಲ. ಅವರನ್ನ ಬಂಧಿಸಿದಾಗ ಮಾಜಿ ಪ್ರಧಾನಿಗಳ ಮಗ ಹಾಗಾಗಿ ಅವರಿಗೆ ಸಹಜವಾಗಿ ನೋವಾಗಿರುತ್ತೆ…
ಯಾರೇ ತಪ್ಪು ಮಾಡಿದ್ರು ಕಾನೂನು ಕ್ರಮ ಎದುರಿಸಲೇಬೇಕು. ನಾವಲ್ಲ ಅವರ ಮನರಯವರೇ ಮುಖ್ಯಮಂತ್ರಿಯಾದ್ರು ಇದನ್ನ ಎದುರಿಸಲೆಬೇಕು. ಇದರ ಬಗ್ಗೆ ಹೆಚ್ಚು ಪ್ರಸ್ತಾಪ ಮಾಡೋದಕ್ಕಿಂತ ಕಾನೂನು ಗಮನಿಸೋಣ. ನಮ್ಗೂ ಇದು ಖುಷಿ ಪಡುವ ವಿಚಾರವಲ್ಲ..ನಮ್ಗೂ ಬೇಸರವಾಗಿದೆ ಹೇಳಿದರು.

ಭ್ರೂಣಹತ್ಯೆಗೆ ಕುಮ್ಮಕ್ಕು ಬೇಡ

ಮಂಡ್ಯದಲ್ಲಿ ಮತ್ತೇ ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದಿರುವುದು ಬೇಸರ ತರಿಸಿದೆ, ಸಾರ್ವಜನಿಕರಲ್ಲಿ ಕೈ ಮುಗಿದು ಮನವಿ ಮಾಡುತ್ತೇನೆ, ಇಂತಹ ಕೃತ್ಯಗಳಲ್ಲಿ ಯಾರು ಭಾಗಿಯಾಗಬಾರದು ಎಂದರು.

ನಾವು ಎಷ್ಟೇ ಕಠಿಣ ಕ್ರಮ ವಹಿಸಿದ್ರೂ ರಿಪೀಟ್ ಆಗ್ತಾ ಇದ್ದಾವೆ. ಸಾರ್ವಜನಿಕರು ಇಂಥಹದ್ದಕ್ಕೆ ಕುಮ್ಮಕ್ಕು ಕೊಡಬಾರದು. ಸರ್ಕಾರದ ಮಟ್ಟದಲ್ಲಿ ಕಠಿಣ ಕಾನೂನು ತರಬೇಕಿದೆ. ಈ ಬಗ್ಗೆ ಸಿಎಂ ಜೊತೆ ಕೂಡ ಚರ್ಚೆ ಮಾಡಿದ್ದೇನೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!