ಪೆಟ್ರೋಲ್ ಬೆಂಜೀನ್ ಸಾಗಾಣಿಕೆ ಎಲ್. ಪಿ.ಜಿ, ಇತ್ಯಾದಿ ಸಾಗಾಣಿಕೆ ಹಾಗೂ ಬಳಸುವ ಸಂದರ್ಭದಲ್ಲಿ ಬೆಂಕಿ ಅವಗಡಗಳು ಆಕಸ್ಮಿಕವಾಗಿ ಸಂಭವಿಸುತ್ತದೆ ಇದನ್ನು ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮ ಅವಶ್ಯಕ ಎಂದು ಅಪರ ಜಿಲ್ಲಾಧಿಕಾರಿ ವಿ.ಆರ್ ಶೈಲಜ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಎಂ.ಆರ್.ಪಿ.ಎಲ್ ನ ಸಹಯೋಗದೊಂದಿಗೆ ನಡೆದ ಬೆಂಜೀನ್ ಸಾಗಾಣಿಕೆ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮದ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಂಜೀನ್ ಹಾಗೂ ಇತರೆ ಹಾನಿಕಾರಕ ಅನಿಲಗಳು ಸೋರಿಕೆಯಾದ ಸಂದರ್ಭದಲ್ಲಿ ಜೀವಹಾನಿ ಪರಿಸರ ಹಾನಿ ಉಂಟಾಗಬಹುದು ಇದನ್ನು ತಡೆಯಲು ಬೇಕಿರುವ ಪರಿಕರಗಳನ್ನು ಸಿದ್ಧವಾಗಿಟ್ಟಿಕೊಳ್ಳಬೇಕು ಎಂದರು.
ಇದೇ ವೇಳೆಯಲ್ಲಿ ಎಂ.ಆರ್.ಪಿ. ಎಲ್.ನ ಗೋಪಿನಾಥ್ ರವರು ಮಾತನಾಡಿ ಬೆಂಜೀನ್ ಹೆಚ್ಚು ಕಾರ್ಸಿನೋಜೆನಿಕ್ ಆಗಿದೆ. ಇದನ್ನು ದೀರ್ಘ ಕಾಲದವರೆಗೆ ಸಂಪರ್ಕ ಮಾಡಿದರೆ ರಕ್ತದ ಕ್ಯಾನ್ಸರ್ ಬರುವ ಅವಕಾಶವಿದೆ. ಇದು ಹೆಚ್ಚು ಬಾಷ್ಪ ಶೀಲವಾಗಿದೆ ಮತ್ತು ಹೆಚ್ಚು ಸುಡುವ ಗುಣಗಳನ್ನು ಹೊಂದಿದೆ.
ಶಾಖ ಜ್ವಾಲೆ ಆಮ್ಲಜನಕದೊಡನೆ ಸಂಪರ್ಕಗೊಂಡರೆ ತೀವ್ರವಾದ ಬೆಂಕಿ ಅವಘಡ ಸಂಭವಿಸಬಹುದು. ಆನುವಂಶಿಕ ರೋಗಗಳನ್ನು ಉಂಟುಮಾಡಬಹುದು. ಗಂಭೀರ ಕಣ್ಣಿನ ಕಿರಿಕಿರಿಯನ್ನು ಉಂಟುಮಾಡುತ್ತದೆ ಎಂದರು.
ಯಾವುದೇ ಸಣ್ಣ ಬೆಂಕಿಯ ಸಂದರ್ಭಲ್ಲಿ ಫೋಮ್ ಹೊಂದಿದ ಬೆಂಕಿ ನಂದಿಸುವ ಸಾಧನ ಮ್ತು ಡಿಸಿಎಫ್ ಸಹಾಯದಿಂದ ಬೆಂಕಿಯನ್ನು ನಂದಿಸುವುದು. ಬೆಂಕಿಯ ವಿರುದ್ಧ ಹೋರಾಡುವಾಗ ಲಂಬ ದಿಕ್ಕಿನಲ್ಲಿ ನಿಂತಿಕೊಳ್ಳಿ, ಪ್ರಮುಖ ಬೆಂಕಿಯ ಸಂದರ್ಭದಲ್ಲಿ ಫೋಮ್ ಹೊಂದಿದ ಬೆಂಕಿ, ನಂದಿಸುವ ಸಾಧನವನ್ನು ಉಪಯೋಗಿಸಿ ಎಂದರು.
ಇದೇ ವೇಳೆ ಜಿಲ್ಲಾಧಿಕಾರಿಗಳ ಕಚೇರಿಯ ಹಿರಿಯ ಸಹಾಯಕರಾದ ಸ್ವಾಮಿಗೌಡ, ಜಿಲ್ಲಾ ವಾರ್ತಾಧಿಕಾರಿ ಎಸ್. ಹೆಚ್ ನಿರ್ಮಲ, ವಿಪತ್ತು ನಿರ್ವಹಣಾ ಪರಿಣಿತರಾದ ಪುನೀತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.