ಮಳವಳ್ಳಿ ಪಟ್ಟಣದಲ್ಲಿ ನೂತನವಾಗಿ ಪ್ರಥಮ ದರ್ಜೆ ಕಾಲೇಜು ನಿರ್ಮಿಸಲು ಶಾಸಕ ಪಿಎಂ ನರೇಂದ್ರಸ್ವಾಮಿ ಅವರು ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರ ಮುಂಭಾಗದಲ್ಲಿ ಇರುವ ಜೂನಿಯರ್ ಕಾಲೇಜ್ ಆವರಣದಲ್ಲಿ ಪ್ರಥಮ ದರ್ಜೆ ಕಾಲೇಜು ನಿರ್ಮಿಸಲು ಈಗಾಗಲೇ 34 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಲೇಜನ್ನು ನಿರ್ಮಿಸಲು ಸ್ಥಳ ಪರಿಶೀಲನೆ ಮಾಡಿದರು. ಜೂನಿಯರ್ ಪ್ರೌಢಶಾಲೆ ಕಟ್ಟಡ ಶಿಥಿಲಗೊಂಡಿತು. ತುರ್ತಾಗಿ ಜೂನಿಯರ್ ಪ್ರೌಢಶಾಲೆಯನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಮಳವಳ್ಳಿ ಪಟ್ಟಣದ ಅನಂತ ರಾಂ ಸರ್ಕಲ್ ನಲ್ಲಿ ಕೆಟ್ಟು ನಿಂತಿದ್ದ ಸಿಗ್ನಲ್ ಕಂಬಗಳನ್ನು ತೆರವು ಮಾಡಿ ನಗರದಲ್ಲಿರುವ ಪೊಲೀಸ್ ಕಿಯಾಸ್ಕ್ ಅಳವಡಿಸಿ ನಾಲ್ಕು ದಿಕ್ಕುಗಳಲ್ಲೂ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗುವುದು ಎಂದು ಹೇಳಿದರು.
ಇದೇ ವೇಳೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಕೃಷ್ಣಪ್ಪ, ತಹಶೀಲ್ದಾರ್ ಡಾ.ಲೋಕೇಶ್, ಸರ್ಕಲ್ ಇನ್ಸ್ಪೆಕ್ಟರ್ ರವಿಕುಮಾರ್, ಲೋಕೋಪಯೋಗಿ ಇಲಾಖೆ ಎಇಇ ಹರೀಶ್ ಸೇರಿದಂತೆ ಇತರರು ಇದ್ದರು.





Namaste sir,
Henge Hejjala MALAVALLI, KOLLEGALA TO CHAMARAJNAGARA . new railway line Bagge nu Gamanaharisi….