Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಗತ್ತಿನಲ್ಲೇ ಮೊಟ್ಟಮೊದಲು ಕ್ಷಿಪಣಿ ಉಡಾಯಿಸಿದ ಅಪ್ರತಿಮ ಸೇನಾನಿ ಟಿಪ್ಪು

ಟಿಪ್ಪು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ. ಟಿಪ್ಪುನಿನ ಗ್ರಂಥಾಲಯಗಳಲ್ಲಿ ದೇಶ-ವಿದೇಶಗಳಿಂದ ತಂದಿದ್ದ ಅಮೂಲ್ಯ ಪುಸ್ತಕಗಳನ್ನು ಸಂಗ್ರಹಿಸಿಡಲಾಗಿತ್ತು. ಆತ ಹುತಾತ್ಮನಾದ ನಂತರ ಬ್ರಿಟಿಷರು ಅವುಗಳನ್ನು ಬೆಂಕಿಯಾಕಿ ಸುಟ್ಟರು.

ಆ ಕಾಲದಲ್ಲೇ ಮುಂದುವರೆದ ದೇಶಗಳು ತಯಾರು ಮಾಡಲು ಸಾಧ್ಯವಾಗದಿದ್ದ. ಮಿಶ್ರಲೋಹವನ್ನು ಕಬ್ಬಿಣ ಮತ್ತು ಉಕ್ಕನ್ನು ಬಳಸಿ ತಯಾರು ಮಾಡಿದ್ದ. ಇವು ಬ್ರಿಟಿಷರಿಂತ ಉನ್ನತ ಮಟ್ಟದಲ್ಲಿದ್ದವು ಎಂಬುದು ಇತಿಹಾಸ.

ಅಲ್ಲದೆ ಪಿರಂಗಿಗಳಿಂತ ಉನ್ನತವಾದ ಕ್ಷಿಪಣಿ ತಂತ್ರಜ್ಞಾನವನ್ನು ಮೊಟ್ಟ ಮೊದಲ ಬಾರಿಗೆ ಪ್ರಪಂಚಕ್ಕೆ ಪರಿಚಯಿಸಿದ್ದ. ಈ ಕ್ಷಿಪಣಿಗಳು ನಿರ್ದಿಷ್ಟ ಗುರಿ ತಲುಪಿ ಶತ್ರುಗಳಿಗೆ ಆಘಾತವನ್ನುಂಟು ಮಾಡಿ, ಸಾಕಷ್ಟು ಸಾವು ನೋವಿಗೆ ಕಾರಣವಾಗಿದ್ದವು, ಈಗಲೂ ಗೂಗಲ್ ನಲ್ಲಿ ಹುಡುಕಿದರೆ ಕ್ಷಿಪಣಿ ತಂತ್ರಜ್ಞಾನದೊಂದಿಗೆ ಟಿಪ್ಪುವಿನ ಹೆಸರು ಅಜರಾಮರವಾಗಿದೆ.

ಅಲ್ಲದೆ ಶ್ರೀರಂಗಪಟ್ಟಣದ ಟಿಪ್ಪುನ ಅರಮನೆಯ ಕೂಗಳತೇ ದೂರದಲ್ಲಿ ರಂಗನಾಥಸ್ವಾಮಿಯ ದೇವಾಲಯವಿತ್ತು, ಒಂದು ಸಂದರ್ಭದಲ್ಲಿ ದಿವಾನ್ ಪೂರ್ಣಯ್ಯ ಅವರೊಂದಿಗೆ ಟಿಪ್ಪು, ”ದೇವಾಲಯದ ಗಂಟೆ ನಿರ್ದಿಷ್ಟ ಸಮಯದಕ್ಕೆ ಶಬ್ದ ಮಾಡದಿದ್ದರೆ ನನಗೇನೂ ತಳಮಳ ಉಂಟಾಗುತ್ತದೆ” ಎಂದು ನಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದರು.

ಶೃಂಗೇರಿ ಶಾರದೆಯ ದೇವಾಲಯದ ಮೇಲೆ ಮರಾಠರು ದಂಡೆತ್ತಿ ಬಂದಾಗ, ಆ ದೇವಾಲಯವನ್ನು ರಕ್ಷಣೆ ಮಾಡಿ, ಮರಾಠರನ್ನು ಹಿಮ್ಮೆಟ್ಟಿಸಿದ್ದ ಇದೇ ಟಿಪ್ಪು ಎಂಬುದು ಬಹಳ ಜನಕ್ಕೆ ಗೊತ್ತಿಲ್ಲ. ಈ ಕಾರಣಕ್ಕಾಗಿ ಇಂದಿಗೂ ಶೃಂಗೇರಿಯ ದೇವಾಲಯಗಲ್ಲಿ ಟಿಪ್ಪುವಿನ ಹೆಸರಿನಲ್ಲಿ ಸಲಾಂ ಅರತಿ ನಡೆಯುತ್ತದೆ. ಇದಲ್ಲದೇ ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಹಕೀಂ ಅರತಿ ನಡೆಯುತ್ತದೆ ಎಂದರೆ ಟಿಪ್ಪು, ಎಂತಹ ಧರ್ಮ ಸಹಿಷ್ಟುವಾಗಿದ್ದ ಎಂಬುದು ತಿಳಿಯುತ್ತದೆ. ಆದರೆ ಇಂತಹ ಟಿಪ್ಪುವಿನ ಚರಿತ್ರೆಯನ್ನು ತಿರುಚುವ ಕೆಲಸ ಮಾಡುತ್ತಿರುವುದು ಆತನೊಬ್ಬ ಮುಸ್ಲಿಂ ರಾಜನಾಗಿದ್ದ ಎಂಬ ಉದ್ದೇಶಕ್ಕಾಗಿ, ಅದೇ ಆತನೊಬ್ಬ ಹಿಂದೂವಾಗಿದ್ದರೆ ಪ್ರಪಂಚದ ಇತಿಹಾಸದಲ್ಲಿ ಇನ್ನಷ್ಟು ದೊಡ್ಡ ಸ್ಥಾನಮಾನ ಸಿಗುತ್ತಿತ್ತೇನೂ.

ಇತ್ತೀಚೆಗೆ ಬೆಂಗಳೂರು-ಮೈಸೂರು ನಡುವೆ ಸಂಚರಿಸುತ್ತದ್ದ ಟಿಪ್ಪು ಎಕ್ಸ್ ಪ್ರೆಸ್ ನ ಹೆಸರನ್ನು ”ಒಡೆಯರ್ ಎಕ್ಸ್ ಪ್ರೆಸ್” ಎಂದು ಬದಲಾಯಿಸಿದ್ದು, ಆತ ಮುಸ್ಲಿಂ ರಾಜ ಎಂಬ ಕಾರಣಕ್ಕಾಗಿಯೇ ಹೊರತು ಬೇರೆನೂ ಅಲ್ಲ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!