Thursday, September 19, 2024

ಪ್ರಾಯೋಗಿಕ ಆವೃತ್ತಿ

ಪಂಚೇಂದ್ರಿಯಗಳ ಗೆಲುವೆ ಮದ್ಯವರ್ಜನಕ್ಕಿರುವ ಮದ್ದು : ಡಾ: ವಿರೇಂದ್ರ ಹೆಗ್ಡೆ

ಮದ್ಯವ್ಯಸನಿಗಳು ಮೂಲತಃ ಕೆಟ್ಟವರಲ್ಲ, ಅವರ ದುಶ್ಚಟಗಳು ಅವರನ್ನು ಕೆಟ್ವವರನ್ನಾಗಿ ಬಿಂಬಿಸಿದೆ.ಪಂಚೇಂದ್ರಿಯಗಳ ಮೇಲೆ ಹತೋಟಿ ಸಾಧಿಸಿ ಗೆಲ್ಲುವುದೆ ಮದ್ಯವರ್ಜನಕ್ಕಿರುವ ಮದ್ದು ಎಂದು ಡಾ ವಿರೇಂದ್ರ ಹೆಗ್ಡೆ ಸಲಹೆ ನೀಡಿದರು.

ಮದ್ದೂರು ಪಟ್ಣಣದ ಪದ್ಮವತಿ ಕಲ್ಯಾಣ ಮಂಟಪದಲ್ಲಿ ದರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಡೆಸುತಿರುವ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಶಿಭಿರಾರ್ಥಿಗಳಿಗೆ ಆಶೀರ್ವಚನ ನೀಡಿ ಮಾತನಾಡಿದರು.

ಮೊದಲಿಗೆ ಖುಷಿಗೊ, ಕುತೂಹಲಕ್ಕೊ ಸಹವಾಸ ದೋಷದಿಂದಲೊ ಮದ್ಯ ಸೇವಿಸುವ ವ್ಯಕ್ತಿಯನ್ನು ನಂತರ ಮದ್ಯಪಾನವೇ ಕೈ ವಶ ಮಾಡಿಕ್ಕೊಳ್ಳಲಿದೆ ಎಂದ ಅವರು, ಶಿಭಿರದಲ್ಲಿ ಭಾಗವಹಿಸಿದವರು ಊರಿಗೆ ತೆರಳಿದ ಮೇಲೆ ಸಂಯಮ ಬೆಳೆಸಿಕ್ಕೊಳ್ಳಬೇಕು, ಸಹಪಾಠಿಗಳ ಮೂದಲಿಕೆ ಟೀಕೆ ಟಿಪ್ಪಣಿಗಳನ್ನು ತಾಳ್ಮೆಯಿಂದ ಸಹಿಸಿಕ್ಕೊಂಡು ದುಶ್ಚಟದಿಂದ ಮುಕ್ತರಾಗಬೇಕು ಎಂದು ಕಿವಿಮಾತು ಹೇಳಿದರು.

ಎಂಟು ದಿನಗಳ ಕಾಲ ನಡೆಯುವ ಈ ಶಿಭಿರದಲ್ಲಿ ಮಾತ್ರೆ ಔಷಧಿಗಳ ಬಳಕೆ ಇಲ್ಲದೆ ಮಂತ್ರ ತಂತ್ರಗಳ ಮೊರೆ ಹೋಗದೆ ಕೇವಲ ಮನಪರಿವರ್ತನೆಯಿಂದ ಮಾತ್ರ ಮದ್ಯಪಾನ ಬಿಡಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದನ್ನು ನಿರಂತರಗೊಳಿಸಿ ಕುಟುಂಬದ ಹಾಗು ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದರು

ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಕದಲೂರು ರಾಮಕೃಷ್ಣ, ಎಸ್ ಪಿ ಸ್ವಾಮಿ, ಮಹೇಶ್, ಎಮ್ ಪಿ ಲಿಂಗೇಗೌಡ, ಮುರುಳಿ, ಜಿಲ್ಲಾ ಸಂಯೋಜಕಿ ಚೇತನ, ತಾ ಸಂಯೊಜಕ ಯೊಗೀಶ್ ಮತ್ತಿತರರು. ಇದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!