Thursday, November 19, 2026

ಪ್ರಾಯೋಗಿಕ ಆವೃತ್ತಿ

ಪ್ರವಾಹ ಭೀತಿ ಲೆಕ್ಕಿಸದೆ ಶವ ಸಂಸ್ಕಾರ ಮಾಡಿದ ಗ್ರಾಮಸ್ಥರು

ಎದೆಮಟ್ಟ ಹರಿಯುತ್ತಿರುವ ನೀರಿನಲ್ಲಿಯೇ ಸಾಗುತ್ತಾ, ಪ್ರವಾಹ ಭೀತಿ ಲೆಕ್ಕಿಸದೆ ನೀರಿನಲ್ಲೇ ಶವ ಸಾಗಿಸಿ ಅಂತ್ಯಸಂಸ್ಕಾರ ನಡೆಸಿರುವ ದಾರುಣ ಘಟನೆ ನಡೆದಿದೆ.

ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಸುಲೋಚನ ಎಂಬ ಮಹಿಳೆ ಮೃತಪಟ್ಟಿದ್ದು, ಅವರ ಶವಸಂಸ್ಕಾರ ನಡೆಸಲು ಸ್ಮಶಾನಕ್ಕೆ ಪ್ರವಾಹದ ದಾರಿಯಲ್ಲಿ ಸಾಗಬೇಕಿತ್ತು.

ಗ್ರಾಮಸ್ಥರಿಗೆ ಬೇರೆ ದಾರಿ ಇಲ್ಲದೆ ಅಪಾಯದ ನಡುವೆಯೂ ಪ್ರವಾಹದ ನೀರಿನಲ್ಲಿ ಶವ ಸಾಗಿಸಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ.ಈ ಘಟನೆ ನೋಡಿದರೆ ಆತಂಕವಾಗುತ್ತದೆ.ಒಂದು ವೇಳೆ ನೀರಿನ ಸೆಳೆತಕ್ಕೆ ಒಬ್ಬ ಸಿಲುಕಿದರೂ ಜೀವವನ್ನೇ ಪಣಕ್ಕಿಡಬೇಕಾದ ಪರಿಸ್ಥಿತಿ ಬರುತ್ತದೆ. ತಾಲ್ಲೂಕು ಆಡಳಿತ ಇಂತಹ ಪ್ರದೇಶಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ‌

ಕಾವೇರಿ ನದಿಯಲ್ಲಿ ಪ್ರವಾಹ ಹೆಚ್ಚಾಗಿ ನದಿಪಾತ್ರದ ಗ್ರಾಮಗಳ ಬಹುತೇಕ ಸ್ಮಶಾನಗಳು ಮುಳುಗಡೆಯಾಗಿ ಶವಸಂಸ್ಕಾರಕ್ಕೆ ಸ್ಥಳೀಯ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ