ನನ್ನವ್ವ ಸಾಂಸ್ಕೃತಿಕ ಕಲಾ ತಂಡ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಕಾರದೊಂದಿಗೆ ವಡ್ಗಲ್ ರಂಗನಾಥಸ್ವಾಮಿ ಕಥಾ ಪ್ರಸಂಗ ಕಾಯ೯ಕ್ರಮವು ಮಳವಳ್ಳಿ ತಾಲ್ಲೂಕಿನ ಹೊನಗನಹಳ್ಳಿಯಲ್ಲಿ ನಡೆಯಿತು.
ಅಂತರಾಷ್ಟ್ರೀಯ ಜಾನಪದ ಕಲಾವಿದ ಮೈಸೂರು ಗುರುರಾಜ್ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ . ಪ್ರತಿಯೊಂದು ಗ್ರಾಮದಲ್ಲಿಯೂ ಇಂತಹ ಜಾನಪದ ಕಲೆಗಳ ಪ್ರದಶ೯ನ ಹೆಚ್ಚಾಗಿ ನಡೆಯಬೇಕೆಂದು ಹೇಳಿದರು.

ಜನರಿಂದ ಹುಟ್ಟಿಕೊಂಡ ಹಲವು ಪದಗಳೇ ಇಂದು ಪ್ರಸಿದ್ಧ ಹಾಡುಗಳಾಗಿವೆ. ಆದರೆ ನೆಲಮೂಲ ಸಂಸ್ಕೃತಿ ಅದು ಗ್ರಾಮೀಣ ಭಾಗದ ನಿಜವಾದ ಆಸ್ತಿ ಆಸ್ತಿಯನ್ನ ಇಂದು ಪಾಶ್ಚಿಮಾತ್ಯ ಹಲವು ಕಲಾವಿದರು ತಮ್ಮನ್ನ ತಾವು ಗುರುತಿಸಿಕೊಳ್ಳುವ ಹಣ ಮಾಡುವ ಉದ್ದೇಶದಿಂದ ಮೂಲ ಜನಪದರು ಕಟ್ಟಿದ ಮೂಲ ಕಲೆಯನ್ನೇ ತಿರುಚಿ ಕೆಲವು ಹಾಡುಗಳನ್ನು ಮನಬಂದಂತೆ ಆಡುತ್ತಿರುವುದನ್ನ ನಾವೆಲ್ಲರೂ ಗಮನಿಸಿದ್ದೇವೆ.
ಇಂದಿನ ಮತ್ತು ಮುಂಬರುವ ಯುವಜನತೆಗೆ ನಾವು ಕೊಡುವ ಸಂದೇಶವಾದರೂ ಏನು ಯುವ ಜನತೆಗೆ ನಿಜವಾದ ಮೂಲ ಜನಪದ ಸಂಸ್ಕೃತಿಯನ್ನು ಪರಿಚಯಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಹಾಗಾಗಿ ನೆಲಮೂಲ ಸಂಸ್ಕೃತಿಯನ್ನು ನಾವು ಹಾಗೆ ಉಳಿಸಿ ಇಂದಿನ ಪೀಳಿಗೆಗೆ ಪರಿಚಯಿಸಬೇಕಾದದ್ದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅದಕ್ಕಾಗಿ ಈ ರೀತಿಯ ಕಾರ್ಯಕ್ರಮಗಳು ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಹೆಚ್ಚು ನಡೆಯುವುದರಿಂದ ಯುವ ಜನತೆಗೆ ನಮ್ಮ ಮೂಲ ಜನಪದ ಸಂಸ್ಕೃತಿಯಿಂದ ಅವರಿಗೆ ಬದುಕಿನ ಪ್ರತಿಯೊಂದು ಅರ್ಥವನ್ನು ತಿಳಿಸಬಹುದು. ಜೊತೆಗೆ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಸಂಘ ಸಂಸ್ಥೆ ಟ್ರಸ್ಟ್ ಗಳು ಹಮ್ಮಿಕೊಳ್ಳುವುದರಿಂದಲೂ ಕೂಡ ನಮ್ಮ ನೆಲ ಮೂಲ ಸಂಸ್ಕೃತಿ ಎಂದೆಂದೂ ಜೀವಂತವಾಗಿ ಇರುತ್ತದೆ.
ಇಂದು ಎಷ್ಟು ಗ್ರಾಮೀಣ ಭಾಗದ ಕಲೆಗಳು ಕಣ್ಮರೆಯಾಗುತ್ತಿವೆ, ಹೊಸ ಕಲೆಗಳು ಹುಟ್ಟಿಕೊಂಡಷ್ಟೇ ಮೂಲ ಕಲೆಗಳು ಪ್ರಚಲಿತದಲ್ಲಿ ಇರಬೇಕೆನ್ನುವುದು ನನ್ನ ಬಯಕೆ. ನೆಲಮೂಲ ಸಂಸ್ಕೃತಿ ಕಲೆ ಕನ್ನಡ ಭಾಷೆ ಹೆದ್ದಾಗಿ ಅದನ್ನ ಪ್ರತಿಯೊಬ್ಬರೂ ಗೌರವಿಸಿ ಪ್ರೀತಿಸಿ ಪ್ರೋತ್ಸಾಹಿಸಿ ಬೆಳೆಸಬೇಕಾದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಕಾರ್ಯಕ್ರಮದಲ್ಲಿ ಕೊಳತ್ತೂರು ಮಹದೇವಸ್ವಾಮಿ, ಪೂರಿಗಾಲಿ ಮಹದೇವ್, ಕೊಳತ್ತೂರು ನಾಗೇಶ್, ಹೊರಳಹಳ್ಳಿ ರಮೇಶ್, ಪೂರಿಗಾಲಿ ಮಹದೇವಸ್ವಾಮಿ, ಕಿರುಗುಂದ ರಾಜೇಂದ್ರ ಪ್ರಸಾದ್, ಕಲಿಯೂರು ರಾಜು, ಹೊನಗನಹಳ್ಳಿ ಜವರಯ್ಯ, ನನ್ನವ್ವ ಮಹಾದೇವ ವೇದಿಕೆಯಲ್ಲಿ ವಡ್ಗಲ್ ರಂಗನಾಥ ಸ್ವಾಮಿ ಕಥ ಕಾರ್ಯಕ್ರಮವನ್ನು ಜಾನಪದ ಮತ್ತು ತಂಬೂರಿ ಶೈಲಿಯಲ್ಲಿ ಉತ್ತಮವಾಗಿ ಹಾಡಿದ್ದನ್ನು ಕೇಳಿ ಬಹಳ ಈ ಕಾರ್ಯಕ್ರಮ ಸಂತೋಷವನ್ನು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಉಪಾಧ್ಯಕ್ಷರಾದ ಜಿ ಮರಲ್ಲಿ ರಂಗಸ್ವಾಮಿ, ಮತ್ತು ಗಣೇಶ್, ಹಿರಿಯ ತಮಟೆ ಕಲಾವಿದರಾದ ಚಿಕ್ಕಮಾದಯ್ಯ, ಕೀಬೋರ್ಡ್ ಶ್ರೀನಿವಾಸ್ ಮೂರ್ತಿ,ತಬಲಾ ರಮೇಶ್, ಪಕ್ಕ ವಾದ್ಯಮೂರ್ತಿ ಇದ್ದರು




