Wednesday, April 17, 2024

ಪ್ರಾಯೋಗಿಕ ಆವೃತ್ತಿ

ಫುಟ್ಬಾಲ್ ಆಟಗಾರ ಮಂಡ್ಯದ ವಿಶ್ವಾಸ್ ನಿಧನ

ವಿದ್ಯುತ್ ಶಾಕ್‌ನಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಡ್ಯ ನಗರದ ಗುತ್ತಲು ಬಡಾವಣೆ ನಿವಾಸಿ, ರಾಷ್ಟ್ರೀಯ ಫುಟ್‌ಬಾಲ್ ಆಟಗಾರ ವಿಶ್ವಾಸ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ.

ಗುತ್ತಲು ಬಡಾವಣೆಯ ನಿವಾಸಿ ನರಸಿಂಹಮೂರ್ತಿ ಮತ್ತು ಶ್ಯಾಮಲಾ ದಂಪತಿ ಮಗ ವಿಶ್ವಾಸ್, ನಗರದ ಪಿಇಎಸ್ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ.

ಓದಿನ ಜತೆಗೆ ಫುಟ್ಬಾಲ್ ಕ್ರೀಡೆಯಲ್ಲಿಯೂ ತೊಡಗಿಸಿಕೊಂಡಿದ್ದ ಪ್ರತಿಭಾವಂತ ಆಟಗಾರ ವಿಶ್ವಾಸ್ ಜು.1ರಂದು ಮನೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಕ್‌ಗೆ ಒಳಗಾಗಿದ್ದ.ಆತನನ್ನು ಚಿಕಿತ್ಸೆಗಾಗಿ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ವಿದ್ಯುತ್ ದುರಂತಕ್ಕೆ ಒಳಗಾಗಿರುವ ವಿಶ್ವಾಸ್ ದೇಹದ ಶೇ.80ರಷ್ಟು ಭಾಗ ಹಾನಿಗೊಳಗಾಗಿದ್ದು, ಕೋಮಾ ಸ್ಥಿತಿಯಲ್ಲಿದ್ದು, ಚಿಕಿತ್ಸೆಗೆ ದಿನವೊಂದಕ್ಕೆ ಲಕ್ಚಾಂತರ ರೂ. ವೆಚ್ಚವಾಗುತ್ತಿತ್ತು.

ಚಿಕಿತ್ಸೆಗಾಗಿ ಕಾಲೇಜಿನ ವಿದ್ಯಾರ್ಥಿಗಳು ಹಣ ಸಂಗ್ರಹಿಸಿದ್ದರು. ಜನಸಾಮಾನ್ಯರು, ಜನಪ್ರತಿನಿಧಿಗಳು ಚಿಕಿತ್ಸೆಗೆ ಹಣ ನೀಡಿದ್ದರು. ಆದರೂ ವಿಶ್ವಾಸ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದು ಆತನ ಕುಟುಂಬಕ್ಕೆ, ಸ್ನೇಹಿತರೂ ಸೇರಿದಂತೆ ಮಂಡ್ಯ ಜನತೆಗೆ ಆಘಾತ ತಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!