Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಲೇಜು ವಿದ್ಯಾರ್ಥಿನಿಯರಿಗೆ ಪ್ರಥಮ ಚಿಕಿತ್ಸೆ ಕುರಿತ ಪ್ರಾತ್ಯಕ್ಷಿಕೆ

ಮಂಡ್ಯ ಜಿಲ್ಲಾಡಳಿತ ಹಾಗೂ ಎನ್.ಡಿ.ಆರ್.ಎಫ್ ತಂಡದ ವತಿಯಿಂದ ವಿಪತ್ತು ನಿರ್ವಹಣೆ ಹಾಗೂ ಪ್ರಥಮ ಚಿಕಿತ್ಸೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಮಂಡ್ಯ ನಗರದ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಣ್ಣದಾಗಿ ಕೈಗೆ ಏಟು ಬಿದ್ದು ರಕ್ತ ಸ್ರಾವವಾದಾಗ ಸಮಯ ಪ್ರಜ್ಞೆಯಿಂದ ಪ್ರಥಮ ಚಿಕಿತ್ಸೆ ಮಾಡಬೇಕು. ಮೊದಲು ಕೈಗೆ ಬಟ್ಟೆ ಕಟ್ಟಿ, ಕೈಯನ್ನು ಮೇಲಕ್ಕೆ ಎತ್ತಿದರೆ ರಕ್ತ ಸೋರಿಕೆ ಸ್ವಲ್ಪ ನಿಲ್ಲುತ್ತದೆ. ಮುಂದುವರಿದು ಕಟ್ಟಿದ ಬಟ್ಟೆಯನ್ನು‌ ರಕ್ತದ ಚಲನೆಗಾಗಿ ಅದನ್ನು ಸ್ವಲ್ಪ ಸಡಿಲಿಕೆ ಮಾಡಬೇಕು. ಅನಂತರ ಮುಂದಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಬೇಕು ಎಂದು ಪ್ರದರ್ಶನದ ಮೂಲಕ ತಿಳಿಸಲಾಯಿತು.

ತಲೆಗೆ ಪೆಟ್ಟು ಬಿದ್ದಾಗ ಸೂಕ್ಷ್ಮವಾಗಿ ಪ್ರಥಮ ಚಿಕಿತ್ಸೆ ಮಾಡಬೇಕು. ಪೆಟ್ಟಾದ ತಲೆ ಭಾಗಕ್ಕೆ ನಮ್ಮ ಹತ್ತಿರವಿರುವ ಸ್ವಚ್ಛ ಬಟ್ಟೆಯಿಂದ ಕಟ್ಟಬೇಕು. ಅವರಿಗೆ ಗಾಬರಿ ಆಗದಂತೆ ನೋಡಿಕೊಳ್ಳುವುದು ಉತ್ತಮ. ಯಾಕೆಂದರೆ ಗಾಬರಿ ಆದರೆ ಎದೆ ಬಡಿತ ಹೆಚ್ಚಾಗಿ ರಕ್ತ ಸ್ರಾವ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಕಣ್ಣಿಗೆ ಪೆಟ್ಟು ಬಿದ್ದಾಗ ಪೆಟ್ಟು‌ ಬಿದ್ದ ಕಣ್ಣಿಗೆ ಧೂಳು ಬೀಳದಂತೆ ಪೇಪರ್ ಲೋಟದ ಸಹಾಯದಿಂದ ಬೆಂಡೇಜ್ ಮಾಡುವ ಬಗ್ಗೆ, ಚಾಕು ಅಥವಾ ಚೂಪಾದ ವಸ್ತುವು‌ ದೇಹದ ಒಳಗೆ ಚುಚ್ಚಿಕೊಂಡ ಸನ್ನಿವೇಶವದಲ್ಲಿ‌ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ಪ್ರತ್ಯಕಿಕೆಗಳ ಮೂಲಕ‌ ಪ್ರದರ್ಶನವನ್ನು ಎನ್.ಡಿ.ಆರ್.ಎಫ್ ತಂಡದ ಅಕಾಶ್ ಹಾಗೂ ಎಂ.ಎಸ್ .ಮಠಪತಿ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಎನ್.ಡಿ.ಆರ್.ಎಫ್ ಇನ್ಸ್ಪೆಕ್ಟರ್ ಶಿವಕುಮಾರ್, ಕಾಲೇಜಿನ ಪ್ರಾಂಶುಪಾಲ ಹೆಚ್.ಪಿ ತಮ್ಮೆಗೌಡ, ಉಪನ್ಯಾಸಕ ಚಂದ್ರಲಿಂಗು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಹೆಚ್ ನಿರ್ಮಲ, ಜಿಲ್ಲಾಧಿಕಾರಿ ಕಚೇರಿಯ ಪುನೀತ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!