Saturday, June 15, 2024

ಪ್ರಾಯೋಗಿಕ ಆವೃತ್ತಿ

ಮೈಷುಗರ್ ಅಭಿವೃದ್ಧಿಗೆ ಕೈ ಜೋಡಿಸೋಣ : ಬಿ.ಸಿ.ಶಿವಾನಂದಮೂರ್ತಿ

ರಾಜ್ಯದಲ್ಲಿರುವ ಏಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆಯಾದ ಮೈಶುಗರ್ ಅಭಿವೃದ್ಧಿಗೆ ಎಲ್ಲರೂ ಒಂದಾಗಿ ಕೈ ಜೋಡಿಸೋಣ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ನುಡಿದರು.

ರೈತ ಬಂಧು ಮಂಡ್ಯ ಫೌಂಡೇಶನ್ ಹಾಗೂ ರೈತ ಬಾಂಧವರ ವತಿಯಿಂದ ಮಂಡ್ಯ ಸಕ್ಕರೆ ಕಾರ್ಖಾನೆ ಆವರಣ ಸ್ವಚ್ಛತೆ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿ ಅವರು ಮಾತನಾಡಿದರು.

ಸರ್ಕಾರಿ ಸ್ವಾಮ್ಯದಲ್ಲಿ ನಡೆಯುತ್ತಿರುವ ಏಕೈಕ ಸಕ್ಕರೆ ಕಾರ್ಖಾನೆ ಮೈಷುಗರ್ ಮಂಡ್ಯ ಜಿಲ್ಲೆಯಲ್ಲಿದೆ ಎಂಬುದು ಹೆಮ್ಮೆಯ ವಿಷಯ. ಮೈಷುಗರ್ ಉಳಿಸಿಕೊಂಡರೆ ಇಡೀ ರಾಜ್ಯದ ಎಲ್ಲಾ ರೈತರಿಗೂ ಸಹಕಾರಿಯಾಗುತ್ತದೆ ಎಂದರು.

ಕಾರ್ಮಿಕರು, ಅಧಿಕಾರಿಗಳು, ಮಂಡ್ಯ ಜಿಲ್ಲೆಯ ರೈತ ಬಾಂಧವರು ಹಾಗೂ ಮೈಷುಗರ್ ಕಾರ್ಖಾನೆ ವ್ಯಾಪ್ತಿಯಲ್ಲಿರುವ ಕಬ್ಬು ಬೆಳೆಗಾರರು ಎಲ್ಲರೂ ಸಹ ಸರ್ಕಾರದೊಂದಿಗೆ ಕೈ ಜೋಡಿಸಿ ಕಾರ್ಖಾನೆಯನ್ನು ಉಳಿಸಿಕೊಳ್ಳೋಣ ಎಂದು ಹೇಳಿದರು

ಮೈಷುಗರ್ ಕಾರ್ಖಾನೆ 8 ಲಕ್ಷ ಟನ್ ಕಬ್ಬನ್ನು ಅರೆಯುವಂತಹ ಸಾಮರ್ಥ್ಯವನ್ನು ಹೊಂದಿದೆ. ಜಿಲ್ಲೆಯ ರೈತರು ತಾವು ಬೆಳೆದ ಕಬ್ಬನ್ನು ಬೇರೆಯವರಿಗೆ ಮಾರಾಟ ಮಾಡದೆ ಎಲ್ಲವನ್ನು ಮೈಷುಗರ್ ಕಾರ್ಖಾನೆಗೆ ನೀಡಿದರೆ ಮುಂದಿನ ವರ್ಷದಿಂದಲೇ ಕಾರ್ಖಾನೆ ಲಾಭ ಗಳಿಸಬಹುದು ಎಂದರು.

ಇದೇ ವೇಳೆ ಮೈಶುಗರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಎ.ಸಿ.ಪಾಟೀಲ್ ಮಾತನಾಡಿ, ಕಾರ್ಮಿಕ ದಿನಾಚರಣೆಯಂದು ರೈತ ಬಂಧು ಫೌಂಡೇಶನ್ ಹಾಗೂ ಕಾರ್ಮಿಕರು ಸೇರಿ ಸ್ವಇಚ್ಛೆಯಿಂದ ಮೈಷುಗರ್ ಕಾರ್ಖಾನೆ ಆವರಣವನ್ನು ಸ್ವಚ್ಛಗೊಳಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

ಸರ್ಕಾರದ ಸಂಪೂರ್ಣ ಸಹಕಾರದಿಂದ ಜುಲೈ ತಿಂಗಳಲ್ಲಿ ಮೈ ಶುಗರ್ ಕಾರ್ಖಾನೆಯಲ್ಲಿ ಎಲ್ಲ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಯಶಸ್ಸಿನ ಚುಕ್ಕಾಣಿ ಹಿಡಿಯುತ್ತೇವೆ.

ಇದಕ್ಕೆ ಎಲ್ಲರ ಸಹಕಾರ ಬಹಳ ಮುಖ್ಯ.ಹಾಗಾಗಿ ಎಲ್ಲರೂ ಕೈ ಜೋಡಿಸಿ ಈ ಕಾರ್ಖಾನೆಗಳನ್ನು ಉಳಿಸಿ ಬೆಳೆಸಿ ಅಭಿವೃದ್ಧಿ ಪಡಿಸೋಣ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮೈಷುಗರ್ ಕಾರ್ಖಾನೆಯ ಅಧ್ಯಕ್ಷ ಶಿವಲಿಂಗೇಗೌಡ, ಜಿ.ಪಂ. ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ , ರೈತ ನಾಯಕಿ ಸುನಂದಾ ಜಯರಾಂ,ರೈತ ನಾಯಕರಾದ ಮುದ್ದೇಗೌಡ,ಕೃಷ್ಣಪ್ರಕಾಶ್,ಶಂಭೂನಹಳ್ಳಿ ಕೃಷ್ಣ, ರೈತಬಂಧು ಮಂಡ್ಯ ಫೌಂಡೇಶನ್ ಅಧ್ಯಕ್ಷ ವಿನಯ ಕುಮಾರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಆರಾಧ್ಯ ,ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ವೇಣುಗೋಪಾಲ್, ರೈತ ಸಂಘದ ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!