Thursday, November 19, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ಮುಜರಾಯಿ ದೇವಾಲಯಗಳ ಅಭಿವೃದ್ಧಿಗೆ ಒತ್ತಾಯ

ಮುಜರಾಯಿ ಇಲಾಖೆಗೆ  ಒಳಪಟ್ಟ ದೇವಾಲಯಗಳ ಅರ್ಚಕರಿಗೆ ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರ ಆದ್ಯತೆ ನೀಡಬೇಕೆಂದು ನಾಗಮಂಗಲ ತಾಲೂಕು ಅರ್ಚಕರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಒತ್ತಾಯಿಸಿದ್ದಾರೆ.

ನಾಗಮಂಗಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದ ಮುಜರಾಯಿ ಇಲಾಖೆ ಒಳಪಟ್ಟ ದೇವಾಲಯಗಳು ನಾಗಮಂಗಲ ತಾಲೂಕಿನಲ್ಲಿ ಇದ್ದು ಆ ದೇವಾಲಯಗಳ ಮೂಲ ಸೌಲಭ್ಯ ಹಾಗೂ ಅರ್ಚಕರಿಗೆ ಸಿಗುವಂತಹ ಸೌಲಭ್ಯಗಳು ಮರೀಚಿಕೆಯಾಗಿಯೇ ಉಳಿದಿದ್ದು ಅಂತಹ ಸೌಲಭ್ಯಗಳನ್ನ ಸರ್ಕಾರ ಮುಜರಾಯಿ ಇಲಾಖೆ ದೇವಾಲಯಗಳಿಗೆ ನೀಡುವುದರ ಜೊತೆಗೆ ಅರ್ಚಕರಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸಲು ಒತ್ತಾಯಿಸಿದ್ದಾರೆ.

ದೇವಾಲಯಗಳ ನೀಡುವ ತಸ್ತಿಕ್ ಹಣ ದೇವಾಲಯಗಳ ಪೂಜಾ ಸೌಲಭ್ಯಗಳಿಗೆ ಸಹಕಾರ ವಾಗದೆ ಆ ಹಣವನ್ನು ಅರ್ಚಕರಿಗೆ ಗೌರವಧನ ನೀಡುವಂತೆ ಹಾಗೂ ಅರ್ಚಕರುಗಳಿಗೆ ವಿಮಾ ಸೌಲಭ್ಯ ವಸತಿ ಸೌಲಭ್ಯ ನೀಡುವಂತೆ ಅರ್ಚಕರ ಒತ್ತಾಸೆಯಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಮುಜರಾಯಿ ಇಲಾಖೆಯ ದೇವಾಲಯಗಳ ಅರ್ಚಕರಿಗೂ ಸ್ಥಳೀಯ ಮಟ್ಟದಲ್ಲಿ ದೌರ್ಜನ್ಯ ನಡೆಯುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ತಾಲೂಕು ದಂಡಾಧಿಕಾರಿಗಳು ಗಮನ ನೀಡಿ ಅರ್ಚಕರಿಗೆ ರಕ್ಷಣಾ ವ್ಯವಸ್ಥೆ ನೀಡುವಂತೆ ಈ ಸಂದರ್ಭದಲ್ಲಿ ಆಗ್ರಹಿಸಿದ್ದರು.

ಗೋಷ್ಠಿಯಲ್ಲಿ ಸಂಘದ ಖಜಾಂಚಿ ಪ್ರಸನ್ನ ಶೈವ, ನಿರ್ದೇಶಕರಾದ ರಾಜೀವಲೋಚನ, ಲಕ್ಷ್ಮಿ ನಾರಾಯಣ್, ನಾಗರಾಜ್ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ