Thursday, November 19, 2026

ಪ್ರಾಯೋಗಿಕ ಆವೃತ್ತಿ

ರಾಜ್ಯ ಮಟ್ಟದ ಖೋ-ಖೋ ಸ್ಪರ್ಧೆ : ಮಂಡ್ಯ ಜಿಲ್ಲಾ ತಂಡ ಪ್ರಥಮ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕು ಕ್ರೀಡಾಂಗಣದಲ್ಲಿ ಮಾರ್ಚ್ 16ರಿಂದ 18 ರವರೆಗೆ 3 ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆದ ರಾಜ್ಯ ಮಟ್ಟದ ಖೋ-ಖೋ ಸ್ಪರ್ಧೆಯ ಗ್ರಾಮೀಣ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದಲ್ಲಿ ಮಂಡ್ಯ ಜಿಲ್ಲಾ ತಂಡವು ಪ್ರಥಮ ಸ್ಥಾನವನ್ನು ಗಳಿಸಿದೆ.
ಮಂಡ್ಯ ತಂಡವು ಒಟ್ಟು 15 ಅಂಕಗಳನ್ನು ಗಳಿಸಿತು. ಹಾವೇರಿ ಜಿಲ್ಲಾ ತಂಡವು 09 ಅಂಕವನ್ನು ಗಳಿಸುವ ಮೂಲಕ ಕ್ರಮವಾಗಿ ದ್ವಿತೀಯ ಸ್ಥಾನವನ್ನು ಪಡೆಯಿತು. ಧಾರವಾಡ ಜಿಲ್ಲಾ ತಂಡವು ತೃತೀಯ ಸ್ಥಾನವನ್ನು ಗಳಿಸಿತು.
nudikarnataka.com
ಮೈಸೂರು ಜಿಲ್ಲಾ ಬಾಲಕಿಯರ ಖೋ ಖೋ ತಂಡ

ಮಹಿಳೆಯರ ವಿಭಾಗದಲ್ಲಿ ಮೈಸೂರು ತಂಡ ಪ್ರಥಮ
ಮಹಿಳೆಯರ ವಿಭಾಗದಲ್ಲಿ ಮೈಸೂರು ಜಿಲ್ಲಾ ತಂಡವು 9 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆಯಿತು. ಮಂಡ್ಯ ಜಿಲ್ಲಾ ತಂಡವು 04 ಅಂಕಗಳನ್ನು ಪಡೆಯುವ ಮೂಲಕ ಕ್ರಮವಾಗಿ ದ್ವಿತೀಯ ಸ್ಥಾನ ಪಡೆದರೆ, ಬೆಳಗಾವಿ ಜಿಲ್ಲಾ ತಂಡವು ತೃತೀಯ ಸ್ಥಾನವನ್ನು ಗಳಿಸಿತು.

ಪುರುಷರ ಹಾಗೂ ಮಹಿಳೆಯರ ವಿಭಾಗದ ವಿಜೇತ ತಂಡಗಳಿಗೆ ಟ್ರೋಪಿ, ಮೆಡಲ್ ಹಾಗೂ ಸರ್ಟಿಫಿಕೇಟ್‍ಗಳನ್ನು ಕೆ.ಆರ್.ಪೇಟೆ ತಾಲ್ಲೂಕಿನ ಪುರಸಭೆಯ ಅಧ್ಯಕ್ಷರಾದ ಮಹಾದೇವಿ ನಂಜುಂಡ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್ ವಿತರಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ