Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ|’ಡಿ ಮಾರ್ಟ್’ಗಾಗಿ ಮರಗಳ ಹನನ : ಅರಣ್ಯಇಲಾಖೆ ಎದುರು ಪ್ರತಿಭಟನೆ

ಮಂಡ್ಯ ಹೊರವಲಯದಲ್ಲಿ ಡಿ ಮಾರ್ಟ್ ವ್ಯಾಪಾರ ಮಳಿಗೆಗಾಗಿ ಕಾನೂನು ಬಾಹಿರವಾಗಿ ಕಡಿದಿರುವುದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಮುಖಂಡರು ಇಂದು ಮಂಡ್ಯ ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.

ಮಂಡ್ಯದ ಅರಣ್ಯ ಇಲಾಖೆಯ ಅಧಿಕಾರಿಗಳು ಟಿಂಬರ್ ದಂಧೆಕೋರರೊಂದಿಗೆ ಶಾಮೀಲಾಗಿ ಸಾರ್ವಜನಿಕ ಸ್ಥಳಗಳಲ್ಲಿರು ಭಾರೀ ಗಾತ್ರದ ಮರಗಳನ್ನು ಕಡಿಸುತ್ತಿದ್ದು, ಇವರ ವಿರುದ್ದ ಸೂಕ್ತ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಕೆಲ ದಿನಗಳ ಹಿಂದೆ ಮಂಡ್ಯದ ನೂರಡಿ (ಅಂಬೇಡ್ಕರ್ ರಸ್ತೆ)ರಸ್ತೆಯಲ್ಲಿ ಮರಗಳ ಅನಗತ್ಯ ಕೊಂಬೆಗಳನ್ನು ಕಡಿಯುವ ಬದಲು ಮರಗಳು ಚಿಗುರದಂತೆ ಸಂಪೂರ್ಣವಾಗಿ ನೆಲಕುರುಳಿಸಲಾಗಿತ್ತು. ಇದು ಅಲ್ಲಿನ ಖಾಸಗಿ ವಾಣಿಜ್ಯ ಮಳಿಗೆಗಳ ಅನುಕೂಲಕ್ಕಾಗಿ ಅರಣ್ಯ ಇಲಾಖೆ ಮಾಡಿದ ಕೆಲಸವಾಗಿತ್ತು ಎಂದು ದೂರಿದರು.

ಮಂಡ್ಯನಗರದ ಸಿಟಿ ಕ್ಲಬ್ ಎದುರಿನ ಭಾರೀ ಗಾತ್ರದ ಮರವನ್ನು ಕಡಿದುರಿಳಿಸಲಾಯಿತು. ಈ ಮರ ಸರ್ಕಾರಿ ಸ್ಥಳದಲ್ಲಿದ್ದರೂ ಸಿಟಿಕ್ಲಬ್ ಅವರಿಗೆ ಅನುಕೂಲ ಕಲ್ಪಿಸಲು ಈ ಮರವನ್ನು ಕಡಿಸಲಾಯಿತು. ಈಗ ನಗರದ ಹೊರವಲಯದ ಹೆಬ್ಬಾಳದ ಬೆಂಗಳೂರು ಮೈಸೂರು ಹೆದ್ದಾರಿಗೆ ಹೊಂದಿಕೊಂಡ ಸರಕಾರಿ ಸ್ಥಳದಲ್ಲಿ ಇದ್ದ ಭಾರೀ ಗಾತ್ರದ ಆರು ಮರಗಳನ್ನು ಕಡಿದುರುಳಿಸಲು ಅರಣ್ಯ ಇಲಾಖೆಯೆ ನೇತೃತ್ವ ವಹಿಸಿರುವುದು ಖಂಡನೀಯ ಎಂದರು.

ಈ ಸಾಲು ಮರಗಳು ಸಾರ್ವಜನಿಕರಿಗೆ ನೆರಳನ್ನು ನೀಡುವ ಜತೆಗೆ ಸಾಕಷ್ಟು ಆಮ್ಲಜನಕ ಪೂರೈಕೆಯಲ್ಲೂ ಸಾಕಷ್ಟು ಕೊಡುಗೆ ನೀಡುತ್ತಿವೆ. ಈ ಮರಗಳಿಂದ ಯಾವುದೆ ಅನಾನುಕೂಲ ಇಲ್ಲದಿದ್ದರೂ ಡಿ ಮಾರ್ಟ್ ಎಂಬ ಖಾಸಗಿ ಕಂಪನಿಯ ಕಟ್ಟಡದ ಕಾರಣಕ್ಕಾಗಿ ಮರಗಳ ಮಾಫಿಯಾದ ಜತೆ ಶಾಮೀಲಾಗಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಆರಣ್ಯ ರಕ್ಷಣೆಯ ಬದಲು ಅರಣ್ಯ ನಾಶದ ಗುರಿ ಹೊಂದಿದ್ದಾರೆ. ಆದ್ದರಿಂದ ಈ ಪ್ರಕರಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಮರ ಕಡಿತದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರುನಾಡ ಸೇವಕರು ಸಂಘಟನೆಯ ನಾಗಣ್ಣಗೌಡ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಹೆಚ್.ಡಿ.ಜಯರಾಂ, ಅಂಬೇಡ್ಕರ್ ವಾರಿಯರ್ಸ್ ಗಂಗರಾಜು, ನರಸಿಂಹಮೂರ್ತಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ