ಕಳೆದ ಜೂನ್ 2024ರಲ್ಲಿ ಕೇವಲ 8 ದಿನದ ಮಟ್ಟಿಗೆ ಬಾಹ್ಯಾಕಾಶಕ್ಕೆ ತೆರಳಿ, ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಸತತ 9 ತಿಂಗಳ ಕಾಲ ಬಾಹ್ಯಾಕಾಶದಲ್ಲೇ ಹಲವು ಸಂಶೋಧನೆಯಲ್ಲಿ ತೊಡಗಿರುವ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಮಾ.18ರಂದು ಭೂಮಿಗೆ ಮರಳಲಿದ್ಧಾರೆ.
NASA (National Aeronautics and Space Administration) ಹೊಸ ಅಪ್ಡೇಟ್ಸ್ ನೀಡಿದ್ದು, ನಿಗಧಿತ ಸಮಯಕ್ಕಿಂತ ಒಂದು ದಿನ ಮುಂಚಿತವಾಗಿಯೇ ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಆಗಲಿದ್ದಾರೆ ಎಂದು ಮಾಹಿತಿ ನೀಡಿದೆ.
❤️🚀🚀❤️
pic.twitter.com/aAkJRKsu1Q— Elon Musk (@elonmusk) March 16, 2025
“>
ಈ ಮೊದಲು ಮಾರ್ಚ್ 19ಕ್ಕೆ ಸುನಿತಾ ವಿಲಿಯಮ್ಸ್ ಭೂಮಿಗೆ ಬರುತ್ತಾರೆ ಎಂದು ನಾಸಾ ತಿಳಿಸಿತ್ತು. ಆದರೆ ಇದೀಗ ಸುನಿತಾ ವಿಲಿಯಮ್ಸ್ ಮಾರ್ಚ್ 18 ರಂದು ಭೂಮಿಗೆ ವಾಪಸ್ ಆಗಲಿದ್ದಾರೆ ಎಂದು ತಿಳಿಸಿದೆ. ನಾಳೆ ಸಂಜೆ 5.57ರ ಸುಮಾರಿಗೆ ಭೂಮಿಗೆ ಲ್ಯಾಂಡ್ ಆಗುವ ನಿರೀಕ್ಷೆ ಇದೆ ಎಂದು ನಾಸಾ ತಿಳಿಸಿದೆ. ಫ್ಲೊರಿಡಾ ಕಡಲಿಗೆ ಲ್ಯಾಂಡ್ ಆಗಲಿದ್ದಾರೆ.
ಸುನೀತಾ ವಿಲಿಯಮ್ಸ್ ವಾಪಸ್ ಬರುವ ಬಗ್ಗೆ ನಾಸಾ ನಿರಂತವಾಗಿ ಮಾಹಿತಿ ಪಡೆಯುತ್ತಿದೆ. ನೌಕೆಯಲ್ಲಿರುವ ಗಗನಯಾನಿಗಳು ಕಾರ್ಯಾಚರಣೆ ನಡೆಸುತ್ತಿದ್ದಾಋಎ. ಗಗನಯಾತ್ರಿಗಳು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ವಾಪಸ್ ಆಗುವ ಸಮಯ ಫಿಕ್ಸ್ ಆಗುತ್ತಿದೆ. ವೆದರ್ ಕಂಡೀಷನ್ ಕೂಡ ಸಹಕಾರ ನೀಡಬೇಕಿದೆ ಎಂದು ನಾಸಾ ಹೇಳಿದೆ. ಬುಚ್ ವಿಲ್ಮೋರ್ ಹಾಗೂ ಸುನಿತಾ ವಿಲಿಯಮ್ಸ್ ಜೊತೆ ನಾಸಾದ ಗಗನಯಾನಿ ನಿಕ್ ಹೇಗ್, ರಷ್ಯಾದ ಗಗನಯಾನಿ ಅಲೆಕ್ಸಾಂಡರ್ ಗೋರ್ಬುನೋವ್ ಕೂಡ ಹಿಂತಿರುಗಲಿದ್ದಾರೆ.
ಸುನಿತಾ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆದುಕೊಂಡು ಬರಲು NASA ‘SpaceX ಕ್ರೂ10 ಆಪರೇಷನ್’ ಆರಂಭಿಸಿದೆ. ಅದು ನಿನ್ನೆ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಇರುವ ನೌಕೆ ಬಳಿ ತಲುಪಿದೆ. ಅಲ್ಲದೇ, ಸುನಿತಾ ವಿಲಿಯಮ್ಸ್ ಹಾಗೂ ವಿಲ್ಮೋರ್ ಅವರು, ಭೂಮಿಯಿಂದ ಬಂದಿರುವ ಕ್ರೂ-10 ಸಿಬ್ಬಂದಿಗೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಬೆನ್ನಲ್ಲೇ ಭೂಮಿಗೆ ವಾಪಸ್ ಅಗುವ ಪ್ರಕ್ರಿಯೆಗಳು ಶುರುವಾಗಿವೆ.




