ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ಯುವಕನ ಶವ ಪತ್ತೆಗಾಗಿ ಕಳೆದ ಎರಡು ದಿನಗಳಿಂದ ಶೋಧ ನಡೆಸುತ್ತಿರುವ NDRF ತಂಡದ ಕಾರ್ಯಾಚರಣೆ ಸ್ಥಳಕ್ಕೆ ಜಿಲ್ಲಾಧಿಕಾರಿ ಅಶ್ವತಿ ಅವರು ಭೇಟಿ ನೀಡಿದರು.
ಶ್ರೀರಂಗಪಟ್ಟಣದ ಸಂಗಮದ ಬಳಿ ಕಾರ್ಯಾಚರಣೆ ನಡೆಸುತ್ತಿರುವ NDRF ತಂಡದೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಸ್ಥಳದಲ್ಲಿದ್ದ ಮೃತ ಅಶೋಕ್ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿಗೆ ಹೆಚ್ಚುವರಿ ನೀರು ಹರಿಸಲಾಗುತ್ತಿದೆ.ಕಳೆದ ಎರಡು ದಿನಗಳ ಹಿಂದೆ ಕಾವೇರಿ ನದಿ ಪಾತ್ರದಲ್ಲಿ ಬರುವ ಸಂಗಮದಲ್ಲಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯಲಹಂಕದ ಯುವಕ ಅಶೋಕ್(26) ನೀರಿಗೆ ಸಿಲುಕಿ ಕೊಚ್ಚಿ ಹೋಗಿದ್ದನು.
ಎನ್.ಡಿ.ಆರ್.ಎಫ್ ನ ಎರಡು ತಂಡಗಳು ಮೃತದೇಹದ ಶೋಧ ಕಾರ್ಯವನ್ನು ಸಂಗಮ & ಮಹದೇವಪುರ ಗ್ರಾಮದ ನದಿ ಪಾತ್ರದಲ್ಲಿ ನಡೆಸುತ್ತಿವೆ ಎಂದು ಹೇಳಿ ಅಲ್ಲಿಂದ ಗಂಜಾಂನ ಶ್ರೀ ನಿಮಿಷಾಂಬ ದೇವಸ್ಥಾನದ ನದಿ ಪಾತ್ರದ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಬಿ.ಸಿ, ತಹಶೀಲ್ದಾರ್ ಶ್ವೇತ ಎನ್ ಮತ್ತು ಪುರಸಭೆ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.