Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಸುಭಾಷ್ ಪಾಳೇಕರ್ ಕೃಷಿ ಕಾರ್ಯಾಗಾರ : ಅನಂತರಾವ್

ಸಂಪೂರ್ಣ ಸಾವಯವ ಕೃಷಿಕರ ಸಂಘ ಹಾಗೂ ನಿರ್ಮಲ ಭೂಮಾತ ಟ್ರಸ್ಟ್ ವತಿಯಿಂದ ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ ಮಾಡುವ ಸಂಬಂಧ ೩ ದಿನಗಳ ಸುಭಾಷ್ ಪಾಲೇಕರ್ ಕೃಷಿ ಕಾರ್ಯಾಗಾರವನ್ನು ಜೂನ್ ೧೧, ೧೨, ೧೩ರಂದು ನಾಗಮಂಗಲದ ಆದಿಚುಂಚನಗಿರಿ ಮಠದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅನಂತರಾವ್ ಕೆರಗೋಡು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಹಳ್ಳಿಕಾರ್ ತಳಿಯ ರಾಸುಗಳನ್ನು ಬಳಸಿ, ಯಾವುದೇ ರಾಸಾಯನಿಕ ಕ್ರಮಗಳಿಲ್ಲದೇ ನೈಸರ್ಗಿಕವಾಗಿ ಕೃಷಿ ಮಾಡುವ ವಿಧಾನವನ್ನು ತಿಳಿಸಲು ಮನೆಗೊಂಡು ಹಳ್ಳಿಕಾರ್ ಹಸು, ಊರಿಗೊಂಡು ಹಳ್ಳಿಕಾರ್ ಹೋರಿ ಘೋಷವಾಕ್ಯದೊಂದಿಗೆ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದರು.

ಕಾರ್ಯಗಾರವು ಪ್ರತಿದಿನ ಬೆಳಿಗ್ಗೆ ೦೮.೩೦ರಿಂದ ಸಂಜೆ ೦೭.೩೦ರವರೆಗೆ ನಡೆಯಲಿದ್ದು, ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಕೊಮ್ಮೇರಹಳ್ಳಿ ವಿಶ್ವಮಾನವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮಿ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಡಾ.ಸುಭಾಷ್ ಪಾಳೇಕರ್ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದರು.

ಕಾರ್ಯಗಾರಕ್ಕೆ ಊಟ, ವಸತಿ ಸೇರಿ ೫೦೦ ರೂ ಗಳ ಪ್ರವೇಶ ಶುಲ್ಕ ನಿಗದಿ ಪಡಿಸಿದ್ದು, ಹೊದಿಕೆ ಮತ್ತು ಬೆಟ್‌ಶೀಟ್‌ಗಳನ್ನು ಭಾಗವಹಿಸುವವರೇ ತರಬೇಕಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಎನ್.ಮಹೇಶ್‌ಕುಮಾರ್, ಸದಸ್ಯರಾದ ಚಂದ್ರಶೇಖರ್, ವೆಂಕಟೇಶ್ ಸೋಮಶೇಖರ್, ಮಂಜು, ಜಗದೀಶ್, ಬಸವರಾಜು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ