Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮಕ್ಕಳಿಗೆ ಉಚಿತ ಪೇಪರ್ ಕ್ರಾಫ್ಟ್ ತರಬೇತಿ

ಮಂಡ್ಯದ ಅನುಭೂತಿ ಆರ್ಟ್ ಅಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ಐದನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಹಾಗೂ ಕಲಾಸಕ್ತರಿಗಾಗಿ ಪೇಪರ್ ಕ್ರಾಫ್ಟ್ (ಕಾಗದ ಕಲೆ)  ಉಚಿತ ತರಬೇತಿ ಕಾರ್ಯಕ್ರಮವನ್ನು ಡಿ.25ರಂದು  ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಮಂಡ್ಯನಗರದ ವಿ.ವಿ.ನಗರ (ಕಲ್ಲಹಳ್ಳಿ) 16 ಕ್ರಾಸ್ ನ ”ಪುಟ್ಟಹೆಜ್ಜೆ” ನಿವಾಸದಲ್ಲಿ ಏರ್ಪಡಿಸಲಾಗಿದೆ.

ಮಕ್ಕಳ ಸೃಜನಶೀಲತೆಯ ವಿಕಾಸಕ್ಕಾಗಿ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕುತೂಹಲ, ಆಸಕ್ತಿ ಮೂಡಿಸುವ ಸಲುವಾಗಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 20 ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು.

ಮಕ್ಕಳಿಗೆ ಬಣ್ಣ ಬಣ್ಣದ ಕಾಗದಗಳನ್ನು ಕೊಡಲಾಗುವುದು. ಕತ್ತರಿ, ಸ್ಕೇಲ್, ಮುಂತಾದ ಅಗತ್ಯ ಪರಿಕರಗಳನ್ನು ವಿದ್ಯಾರ್ಥಿಗಳೇ ತರಬೇಕು ಹೆಚ್ಚಿನ ವಿವರಗಳಿಗೆ ಚಿತ್ರ ಕಲಾವಿದ ಸೋಮುವರದ ಮೊ.8618580924 ಇವರನ್ನು ಸಂಪರ್ಕಿಸಬಹುದು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ