ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದ ಸಾಗರ್ ಎಂಬಾತನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪಾತಕಿಗಳನ್ನು ಕೊಪ್ಪ ಪೋಲಿಸರು ಬಂಧಿಸಿದ್ದಾರೆ.
ಮೇ.8ರಂದು ಕೊಪ್ಪದ ಸಿಂಚನಾ ಡಾಬಾದಲ್ಲಿ ಸಾಗರ್ ಎಂಬಾತನನ್ನು ಡ್ರ್ಯಾಗರ್ ನಿಂದ ಚುಚ್ಚಿ ಕೊಂದಿದ್ದ ಆರೋಪಿಗಳಾದ
ಗಿರೀಶ್ ಹಾಗೂ ರಾಕೇಶ್ ಬಂಧಿತರು.
ಮೂರು ತಿಂಗಳ ಹಿಂದೆ ಸಾಗರ್ ಮತ್ತು ಗಿರೀಶ್ ನಡುವೆ ಜಗಳವಾಗಿತ್ತು. ಈ ವೇಳೆ ಕೊಪ್ಪದವರು ಗಂಡಸರಲ್ಲವದು ಗಿರೀಶ್ ನಿಂದಿಸಿದ್ದನು.
ಮೇ 8 ರಂದು ಸ್ನೇಹಿತ ಪ್ರಸಾದ್ ಎಂಬಾತನ ಹುಟ್ಟು ಹಬ್ಬದ ಪಾರ್ಟಿಯಿತ್ತು. ಈ ವೇಳೆ ಮೃತ ಸಾಗರ್ ಹಾಗೂ ಗಿರೀಶ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು.ಮದ್ಯದ ಅಮಲಿನಲ್ಲಿದ್ದ ಸಾಗರ್ ಹಾಗೂ ಗಿರೀಶ್ ನಡುವೆ ಮತ್ತೆ ಗಲಾಟೆ ಶುರುವಾಗಿತ್ತು.
ಆಗ ಸಾಗರ್ ಎದೆಗೆ ಗಿರೀಶ್ ಡ್ರಾಗರ್ ನಿಂದ ಇರಿದು ಪರಾರಿಯಾಗಿದ್ದ. ತೀವ್ರ ರಕ್ತಸ್ರಾವದಿಂದ ಸಾಗರ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆಗೆ ಮೃತಪಟ್ಟಿದ್ದ. ಅಂದು ಒಬ್ಬ ಆರೋಪಿಯನ್ನು ಬಂಧಿಸಲಾಗಿತ್ತು.
ಈಗ ಈ ಪ್ರಕರಣ ಸಂಬಂಧ ಮತ್ತಿಬ್ಬರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಇದನ್ನು ಓದಿ: ಸಮಾನತೆ ಸಾರಿದ ಬಸವಣ್ಣ ವಿಶ್ವಕ್ಕೆ ಮಾದರಿ