Thursday, September 19, 2024

ಪ್ರಾಯೋಗಿಕ ಆವೃತ್ತಿ

ನ.27ರಿಂದ ಮೇಲುಕೋಟೆ ಕ್ಷೇತ್ರದಾದ್ಯಂತ ಪ್ರವಾಸ : ಡಾ.ಎಚ್.ಎನ್.ರವೀಂದ್ರ

ಮೇಲುಕೋಟೆ ವಿಧಾನಸಭಾ ಕ್ಷೇತ್ರದಾದ್ಯಂತ ಪ್ರವಾಸ ನಡೆಸಿ ಪ್ರತಿ ಮನೆ ಮನೆಗಳಿಗೆ ನ.27ರಿಂದ ಭೇಟಿ ನೀಡಿ 4 ಅಂಶಗಳನ್ನು ಮತದಾರರ ಮುಂದಿಟ್ಟು, ಮುಂಬರುವ ಚುನಾವಣೆಯಲ್ಲಿ ತಮನ್ನು ಬೆಂಬಲಿಸಿವಂತೆ ಮನವಿ ಮಾಡಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್.ರವೀಂದ್ರ ಹೇಳಿದರು.

ಮಂಡ್ಯನಗರದ ಅಮರಾವತಿ ಹೋಟೆಲ್‌ನ ಸಭಾಂಗಣದಲ್ಲಿ ನಡೆದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ
ತಮ್ಮ 250ಕ್ಕೂ ಹೆಚ್ಚು ಬೆಂಬಲಿಗರು ಹಾಗೂ ಹಿತೈಷಿಗಳ ”ರಾಜಕೀಯ ಚಿಂತನಾ ಸಭೆ ”ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸುಮಾರು ಒಂದೂವರೆ ತಿಂಗಳ ಕಾಲ ಮೇಲುಕೋಟೆ ವಿಧಾನಸಭಾ ಕ್ಷೇತ್ರದ 35 ಗ್ರಾಮ ಪಂಚಾಯಿತಿಗಳ ಪ್ರತಿ ಮನೆಗಳಿಗೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಹಾಗೂ ರೈತಸಂಘವೆನ್ನದೆ ಪಕ್ಷತೀತವಾಗಿ ಭೇಟಿ ನೀಡಿ ಶಿಕ್ಷಣ, ಆರೋಗ್ಯ, ಉಚಿತ ವಿದ್ಯುತ್, ಹಳ್ಳಿಗೊಂದು ಗ್ರಂಥಾಲಯ ಎಂಬ 4 ಅಂಶಗಳನ್ನೊಳಗೊಂಡ ಕರಪತ್ರವನ್ನು ನೀಡಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿ, ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಲಾಗುವುದು ಎಂದರು.

ಪಾಂಡವಪುರ ತಾಲೂಕಿನ ಸ್ವಗ್ರಾಮ ಹೊಸಕೋಟೆ ಗ್ರಾಮದಿಂದ ನ.27ರಂದು ಬೆಳಗ್ಗೆ 6.30ಕ್ಕೆ ಮನೆ ಮನೆ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ತಾವು ಗೆಲುವು ಸಾಧಿಸಿದರೆ ಅವಧಿಯೊಳಗೆ ಕ್ಷೇತ್ರದ 35 ಗ್ರಾಮ
ಪಂಚಾಯಿತಿಗಳಲ್ಲೂ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲೊಂದು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ
ಪ್ರಾರಂಭಿಸುವುದು, ಕ್ಷೇತ್ರದ ಜನತೆಗೆ ಉಚಿತ ಆರೋಗ್ಯ ಒದಗಿಸುವುದು, ಪ್ರತಿ ಹಳ್ಳಿಗಳಲ್ಲಿ
ಗ್ರಂಥಾಲಯ ಸ್ಥಾಪನೆ ಮಾಡುವುದು ಹಾಗೂ ಕ್ಷೇತ್ರದ ಪ್ರತಿ ಮನೆಗೆ ಸೋಲಾರ್ ವಿದ್ಯುತ್ ದೀಪಗಳನ್ನು
ಅಳವಡಿಕೆ ಮಾಡಲಾಗುವುದು ಎಂದರು.

ತಾವು ಗೆದ್ದ ಒಂದು ವರ್ಷದಲ್ಲಿ ಈ ಕಾರ್ಯಕ್ರಮಗಳನ್ನು ಸರ್ಕಾರ ಅನುಷ್ಠಾನಗೊಳಿಸದಿದ್ದರೆ ನನ್ನ ತಂಡದೊಂದಿಗೆ ಖಾಸಗಿಯಾಗಿ ಈ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬದ್ದನಿದ್ದೇನೆ ಎಂದು ತಿಳಿಸಿದರು.

ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಕೆಪಿಸಿಸಿ ಸದಸ್ಯ ಸಿ.ಕೆ.ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಕೃಷ್ಣೇಗೌಡ, ಸಂಪಹಳ್ಳಿ ಉಮೇಶ್, ಪ್ರಕಾಶ್, ರಾಜ್ಯ ಕಬಡ್ಡಿ ಫೆಡರೇಷನ್ ಕಾರ್ಯದರ್ಶಿ
ವಿಜಯಕುಮಾರ್, ಹಿರಿಯ ಮುಖಂಡ ಪ್ರೊ. ದೇವೇಗೌಡ, ರಾಜ್ಯ ಪೌರಕಾರ್ಮಿಕರ ಒಕ್ಕೂಟದ ಅಧ್ಯಕ್ಷ
ಎಂ.ಬಿ.ನಾಗಣ್ಣಗೌಡ, ಮಂಡ್ಯ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಅಪ್ಪಾಜಿಗೌಡ, ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿತ್ರ ರಮೇಶ್, ಕಾಂಗ್ರೆಸ್ ಎಸ್‌ಸಿ ಘಟಕದ ರಾಜ್ಯ ಸಂಚಾಲಕ ಸುಂಡಹಳ್ಳಿ ಮಂಜುನಾಥ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಶ್ಯಾದನಹಳ್ಳಿ ನರೇಂದ್ರಬಾಬು, ಎಚ್.ಎನ್.ದಯಾನಂದ (ಬಾಬು),
ಮನ್‌ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಕುಮಾರ್ (ಶಿವಪ್ಪ), ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಮನೋರಂಜನ್, ಕಾಂಗ್ರೆಸ್ ಯುವ ಅಧ್ಯಕ್ಷ ಚಿಕ್ಕಾಡೆ ರಮೇಶ್, ಪುರಸಭೆ ಸದಸ್ಯ ಕೆ.ಉಮಾಶಂಕರ್, ಮಾಜಿ ಸದಸ್ಯ ಎಂ.ಮುರಳೀಧರ್, ಚಿನಕುರಳಿ ಕುವೆಂಪು ಬಳಗದ ಅಧ್ಯಕ್ಷ ಸಿ.ಕೆ.ಮಂಜುನಾಥ್, ಡಾ.ಎಚ್.ಎನ್.ರವೀಂದ್ರ ಅವರ ಹಿತೈಷಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!