Thursday, September 19, 2024

ಪ್ರಾಯೋಗಿಕ ಆವೃತ್ತಿ

ಇಂದಿನಿಂದ ”ನಮ್ಮ ಕ್ಲಿನಿಕ್” ಆರಂಭ : ಯಾವ್ಯಾವ ಸೇವೆಗಳು ಸಿಗಲಿವೆ ಗೊತ್ತಾ ?

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದಿನಿಂದ (ಬುಧವಾರ) 114 ‘ನಮ್ಮ ಕ್ಲಿನಿಕ್’ಗಳನ್ನು ಆರಂಭಿಸಲಾಗುತ್ತಿದೆ. ಸಾಧ್ಯವಾದಷ್ಟು ಸರ್ಕಾರಿ ಕಟ್ಟಡಗಳಲ್ಲೇ ಇವುಗಳನ್ನು ಸ್ಥಾಪಿಸಲಾಗಿದೆ.

ರಾಜ್ಯಾದ್ಯಂತ ಜನವರಿ ತಿಂಗಳ ಅಂತ್ಯದೊಳಗೆ 438 ನಮ್ಮ ಕ್ಲಿನಿಕ್ ಗಳನ್ನು ಆರಂಭವಾಗಲಿವೆ. ಈ ಪೈಕಿ, ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 243 ನಮ್ಮ ಕ್ಲಿನಿಕ್ ಗಳು ಕಾರ್ಯನಿರ್ವಹಿಸಲಿವೆ. ನಮ್ಮ ಕ್ಲಿನಿಕ್‌ಗಳಲ್ಲಿ 12 ವಿವಿಧ ರೀತಿಯ ಆರೋಗ್ಯ ಸೇವೆಗಳು ಲಭ್ಯವಿದ್ದು, ಪ್ರತಿ ಕ್ಲಿನಿಕ್‌ನಲ್ಲಿ ಒಬ್ಬ ವೈದ್ಯಕೀಯ ಅಧಿಕಾರಿ, ಒಬ್ಬ ಶುಶ್ರೂಷಕಿ, ಲ್ಯಾಬ್ ಟೆಕ್ನಿಷಿಯನ್ ಹಾಗೂ ಒಬ್ಬ ‘ಡಿʼಗ್ರೂಪ್ ನೌಕರರು ಇರುತ್ತಾರೆ. 

ನಮ್ಮ ಕ್ಲಿನಿಕ್ ಸೇವೆಗಳು

ಈ ಕ್ಲಿನಿಕ್ ಗಳಲ್ಲಿ ಲಭ್ಯವಿರುವ ಸೇವೆಗಳೆಂದರೆ ಗರ್ಭಿಣಿಯರು, ಪ್ರಸವಪೂರ್ವ ಚಿಕಿತ್ಸೆ, ನವಜಾತ ಶಿಶು, ಬಾಲ್ಯ ಹಾಗೂ ಹದಿಹರೆಯದವರ ಆರೈಕೆ, ಸಾರ್ವತ್ರಿಕ ಚುಚ್ಚುಮದ್ದು ಸೇವೆಗಳು, ಕುಟುಂಬ ಕಲ್ಯಾಣ, ಸಂತಾನ ನಿಯಂತ್ರಣ, ಸೋಂಕು ಖಾಯಿಲೆಗಳ ನಿರ್ವಹಣೆ, ಸಾಮಾನ್ಯ ಹಾಗೂ ಕಿರು ಆರೋಗ್ಯ ಸೇವೆಗಳು, ಮಧುಮೇಹ, ರಕ್ತದೊತ್ತಡ ನಿರ್ವಹಣೆ, ಗಂಭೀರ ಖಾಯಿಲೆಗಳು, ಬಾಯಿ ಚಿಕಿತ್ಸೆ, ಇತ್ಯಾದಿಗಳಿಗೆ ಇಲ್ಲಿ ಚಿಕಿತ್ಸೆ ದೊರಕಲಿದೆ.

ಇದರ ಜೊತೆಗೆ ಗರ್ಭಾಶಯ ಹಾಗೂ ಸ್ತನ ಕ್ಯಾನ್ಸರ್, ಕಣ್ಣಿನ ತಪಾಸಣೆಯಂತಹ ತೃತೀಯ ಆರೈಕೆಗೆ ಅಗತ್ಯವಿರುವಂತಹ ರೋಗಿಗಳಿಗೆ ಇತರೆ ಆಸ್ಪತ್ರೆಗಳಿಗೆ ಉಚಿತ ರೆಫೆರೆಲ್ ಮಾಡುವ ವ್ಯವಸ್ಥೆಯನ್ನೂ ನಮ್ಮ ಕ್ಲಿನಿಕ್‌ಗಳಿಗೆ ನೀಡಲಾಗಿದೆ.

ನಮ್ಮ ಕ್ಲಿನಿಕ್‌ನಲ್ಲಿ 14 ಪ್ರಯೋಗಾಲಯ ತಪಾಸಣೆಗಳು, ಟೆಲಿಕನ್ಸಲ್ಟೇಷನ್ ಸೇವೆಗಳು, ಯೋಗಕ್ಷೇಮ ಚಟುವಟಿಕೆಗಳು, ಹಿರಿಯ ನಾಗರೀಕರ ಚಿಕಿತ್ಸೆ, ತುರ್ತು ವೈದ್ಯಕೀಯ ಸೇವೆಗಳು, ಆರೋಗ್ಯ ತಪಾಸಣೆಗಳು ಹಾಗೂ ಔಷಧಗಳನ್ನು ಉಚಿತವಾಗಿ ದೊರೆಯಲಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!