Thursday, September 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಜಿ.ಮಾದೇಗೌಡ ಹುಟ್ಟುಹಬ್ಬ; ರಕ್ತದಾನ ಶಿಬಿರ, ವಿಶೇಷ ಪೂಜೆ

ಅನುಪಮ ಸತೀಶ್

ಮದ್ದೂರು ತಾಲ್ಲೂಕು ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಜಿ.ಮಾದೇಗೌಡರ ಸ್ಮಾರಕಕ್ಕೆ 96 ನೇ ವರ್ಷದ ಜನ್ಮದಿನದ ಅಂಗವಾಗಿ ಶಾಸಕ ಹಾಗೂ ಪುತ್ರ ಮಧು ಜಿ.ಮಾದೇಗೌಡ ಅವರು ಪೂಜೆ ಸಲ್ಲಿಸಿದರು.

ಹಿರಿಯ ಮುತ್ಸದಿ, ರೈತಪರ ಹೋರಾಟಗಾರ ದಿ.ಜಿ.ಮಾದೇಗೌಡರವರ 96 ನೇ ವರ್ಷದ ಜನ್ಮದಿನೋತ್ಸವದ ಅಂಗವಾಗಿ ರಕ್ತದಾನ ಶಿಬಿರ, ದೇವಾಲಯಗಳಲ್ಲಿ ವಿಶೇಷ ಪೂಜೆ, ಜಿ.ಮಾದೇಗೌಡರ ಸ್ಮಾರಕಕ್ಕೆ ಪುಷ್ಪನಮನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಅಭಿಮಾನಿಗಳು, ಭಾರತೀ ವಿವಿಧ ಅಂಗಂಸ್ಥೆಯ ಮುಖ್ಯಸ್ಥರು, ಮುಖಂಡರು, ಕಾರ್ಯಕರ್ತರು ಬುಧವಾರ ಬೆಳಿಗ್ಗೆ 11 ಗಂಟೆಯಲ್ಲಿ ಹಮ್ಮಿಕೊಂಡಿದ್ದರು.

ಭಾರತೀನಗರದ ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ಜಿ.ಮಾದೇಗೌಡರ ಹೆಸರಿನಲ್ಲಿ ಅರ್ಚನೆ ಮಾಡಿಸಿ ಪೂಜೆಸಲ್ಲಿಸಿದರು. ನಂತರ ಬಂದಂತಹ ಭಕ್ತಾಧಿಗಳಿಗೆ ಪ್ರಸಾದ ವಿತರಿಸಿದರು.

ಇದೇ ವೇಳೆ ಭಾರತೀ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಜಿ.ಕೆ.ಕೃಷ್ಣ, ತಾ.ಪಂ ಮಾಜಿ ಸದಸ್ಯ ಭರತೇಶ್, ಗ್ರಾ.ಪಂ ಸದಸ್ಯ ವಿನಯ್, ಮಿಥುನ್, ಭಾರತೀ ಪಿಯು ಕಾಲೇಜಿನ ಪ್ರಾಂಶುಪಾಲರಾದ ಜಿ.ಬಿ.ಪಲ್ಲವಿ, ಮಲ್ಲಿಕಾರ್ಜುನ್,  ಹಾಗಲಹಳ್ಳಿ ಪುಟ್ಟಸ್ವಾಮೀಗೌಡ, ತೊರೆಚಾಕನಹಳ್ಳಿ ಶಂಕರೇಗೌಡ, ಆರ್.ಸಿದ್ದಪ್ಪ, ಗಿರೀಶ್, , ಜವರೇಗೌಡ, ಸುನೀತ, ಚಂದನ್, ಪ್ರಸನ್ನ, ಕೃಷ್ಣ, ಪುಟ್ಟರಾಜೇಅರಸು ಸೇರಿದಂತೆ ಹಲವರಿದ್ದರು. ನಂತರ ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ದೇವಾಲಯದಲ್ಲಿ ಪೂಜೆಸಲ್ಲಿಸಿದ ಬಳಿಕ ಜಿ.ಮಾದೇಗೌಡರ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು.

ಇದೇ ವೇಳೆ ಭಾರತೀಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಸಿದ್ದೇಗೌಡ, ಪ್ರಾಂಶುಪಾಲ ಪುಟ್ಟಸ್ವಾಮಿ, ನಿವೃತ್ತ ಕಾರ್ಯಪಾಲಕ ಅಭಿಯಂತರ ಬಸವರಾಜೇಗೌಡ, ಮುಖಂಡರಾದ ಕೆ.ಎಸ್.ಗೌಡ, ಮಾದರಹಳ್ಳಿ ಸಿದ್ದಪ್ಪ, ನಾಗಣ್ಣ, ಅಣ್ಣೂರು ಸಿದ್ದಪ್ಪ, ತಾ.ಪಂ ಮಾಜಿ ಸದಸ್ಯ ಬಿ.ಗಿರೀಶ್, ಸ್ನಾತ್ತಕೋತ್ತರ ಕೇಂದ್ರದ ನಿದರ್ೇಶಕ ಎಸ್.ನಾಗರಾಜು, ಶಿಕ್ಷಕ ನಾಗರಾಜು, ಪ್ರದೀಪ್ ಹಾಗೂ ವಸತಿ ಶಾಲೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಭಾರತೀನಗರದ ಜಿ.ಮಾದೇಗೌಡ ತಾಂತ್ರಿಕ ಮಹಾವಿದ್ಯಾನಿಲಯದ ಆವರಣದಲ್ಲಿ ದಿ.ಜಿ.ಮಾದೇಗೌಡರವರ 96 ನೇ ವರ್ಷದ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಶಾಸಕ ಮಧುಜಿಮಾದೇಗೌಡ ಚಾಲನೆ ನೀಡಿದರು.

ರಕ್ತದಾನ ಮಾಡಿದ ಪ್ರತೀಯೊಬ್ಬರಿಗೂ ಮಂಡ್ಯ ಜಿಲ್ಲಾ ವಿಮ್ಸ್ ರಕ್ತನಿಧಿ ಕೇಂದ್ರದ ವತಿಯಿಂದ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು.

ಇದೇ ವೇಳೆ ಜಿಎಂಐಟಿ ಕಾಲೇಜಿನ ಪ್ರಾಂಶುಪಾಲ ಚಂದನ್, ಹೆಲ್ತ್ ಸೈನ್ಸ್  ನಿರ್ದೇಶಕ ತಮಿಜ್ಮಣಿ, ಸ್ನಾತಕೋತ್ತರ ವಿಭಾಗದ ನಿರ್ದೇಶಕ ಎಸ್.ನಾಗರಾಜು, ಸುನೀತ, ಸಂಜೀವ್, ಹಾಗಲಹಳ್ಳಿ ಬಸವರಾಜೇಗೌಡ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!