Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕನ್ನಡ ಕಡ್ಡಾಯ – ಜಿ. ಮಾದೇಗೌಡರ ಹೆಸರು ನಾಮಕರಣಕ್ಕೆ ಆಗ್ರಹಿಸಿ ಪ್ರತಿಭಟನೆ

ಮಂಡ್ಯ ನಗರದ ಪ್ರಮುಖ ರಸ್ತೆಗೆ ಜಿ.ಮಾದೇಗೌಡರ ಹೆಸರು ನಾಮಕರಣ ಮಾಡಬೇಕು, ಮಂಡ್ಯ ನಗರದ ವರ್ತಕರು ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಿ, ಮಂಡ್ಯ ನಗರದಲ್ಲಿ ಆರೋಗ್ಯ ದೃಷ್ಟಿಯಿಂದ ಹೋಟೆಲ್, ಉಪಹಾರ, ಹಾಗೂ ಇನ್ನಿತರೆ ತಿಂಡಿ ತಿನಿಸುಗಳ ಆರೋಗ್ಯಕರವಾದ ಆಹಾರ ನೀಡುವ ಬಗ್ಗೆ ಕ್ರಮ ವಹಿಸಬೇಕೆಂದು ಆಗ್ರಹಿಸಿದರು ಕನ್ನಡ ಸೇನೆ ನೇತೃತ್ವದಲ್ಲಿ ಮಂಗಳವಾರ ಮಂಡ್ಯ ನಗರಸಭೆ ಎದುರು ಪ್ರತಿಭಟನೆ ನಡೆಯಿತು.

ಜಿ.ಮಾದೇಗೌಡರು ಮಂಡ್ಯ ಜಿಲ್ಲೆಯ ಶಕ್ತಿಯಾಗಿದ್ದು, ಇಂದಿನ ಯುವಕರಿಗೆ ಸ್ಫೂರ್ತಿದಾಯಕವಾದ ವ್ಯಕ್ತಿಯಾಗಿದ್ದಾರೆ. ಲೋಕಸಭಾ ಸದಸ್ಯರಾಗಿ, ಸಚಿವರಾಗಿ, ರೈತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿ ಕಾವೇರಿ ಹೋರಾಟಗಾರ ಎಂದೇ ಪ್ರಸಿದ್ದಿಯನ್ನು ಪಡೆದ ಜಿ.ಮಾದೇಗೌಡರ ನೆನಪು ಶಾಶ್ವತವಾಗಿ ಇಂದಿನ ಯುವಕರಿಗೆ ಅವರ ಆದರ್ಶಗಳು ದಾರಿದೀಪವಾಗುವ ದೃಷ್ಟಿಯಿಂದ ಅವರ ನೆನಪನ್ನು ಮಾಡಿಕೊಳ್ಳಲು ಮಂಡ್ಯ ನಗರದ ಪ್ರಮುಖ ರಸ್ತೆಗೆ ಜಿ.ಮಾದೇಗೌಡರ ಹೆಸರನ್ನು ನಾಮಕರಣ ಮತ್ತು ಜಿ.ಮಾದೇಗೌಡರ ಪ್ರತಿಮೆಯನ್ನು ಮಾಡಬೇಕೆಂದು ಆಗ್ರಹಿಸಿದರು.

ರಾಜ್ಯದಾದ್ಯಂತ ವರ್ತಕರು ಹಾಕುವ ನಾಮಫಲಕದಲ್ಲಿ 60 ರಷ್ಟು ಕನ್ನಡವನ್ನು ಕಡ್ಡಾಯಗೊಳಿಸಬೇಕೆಂದು ಆದೇಶ ಮಾಡಿದೆ. ಇದರ ಜೊತೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಮಂಡ್ಯ ನಗರಸಭೆಯ ಆಯುಕ್ತರು ಈಗಾಗಲೇ ವರ್ತಕರಿಗೆ ನೋಟೀಸ್ ನೀಡಿರುತ್ತಾರೆ. ನಿಮ್ಮ ನೋಟೀಸ್‌ಗೂ ಕ್ಯಾರೆ ಎನ್ನದೆ ಶೇ. 30 ರಷ್ಟು ಬದಲಾವಣೆ ಮಾಡದೆ ಇರುವುದು ಕನ್ನಡ ಸೇನೆ ಕರ್ನಾಟಕ ತೀವ್ರವಾಗಿ ಖಂಡಿಸುತ್ತದೆ. ತಕ್ಷಣ ಜಿಲ್ಲಾಡಳಿತ ಮತ್ತು ನಗರಸಭೆ ನಾಮಫಲಕ ಹಾಕದ ವರ್ತಕರ ಲೈಸೆನ್ಸ್ ರದ್ದುಗೊಳಿಸಬೇಕು. 15 ದಿನದ ಒಳಗಡೆ ಮಂಡ್ಯ ನಗರದ ವರ್ತಕರು ಕನ್ನಡ ನಾಮಫಲಕ ಹಾಕುವ ಆದೇಶವನ್ನು ಮಾಡಿ 15 ದಿನದೊಳಗೆ ಕನ್ನಡ ನಾಮಫಲಕ ಹಾಕುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಡೆಂಗ್ಯೂ ಜ್ವರ ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಮಂಡ್ಯ ನಗರದ ಕೆಲ ಚಾಟ್ಸ್ ಅಂಗಡಿಗಳು, ಪಾನೀಪುರಿ, ಗೋಬಿ ಮಂಜೂರಿ, ಜ್ಯೂಸ್ ಅಂಗಡಿಗಳಲ್ಲಿ ಶುಚಿಯಾದ ಆರೋಗ್ಯಕರವಾದ ಆಹಾರ ಮತ್ತು ಪಾನೀಯಗಳನ್ನು ನೀಡುವ ಆದೇಶವನ್ನು ಕಟ್ಟುನಿಟ್ಟಾಗಿ ನಗರಸಭೆ ಜಾರಿ ಮಾಡಬೇಕು. ಕೊಳೆತ ಮತ್ತು ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ಬಳಸುತ್ತಿರುವ ಅಂಗಡಿಗಳ ಲೈಸೆನ್ಸ್ ಮತ್ತು ಅಂಗಡಿ ಮುಚ್ಚಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಹೆಚ್.ಸಿ.ಮಂಜುನಾಥ್, ಎಂ.ಎಸ್.ಮಂಜುನಾಥ್, ಮಹಾಂತಪ್ಪ, ಕಿರಣ್, ಶ್ರೀನಿವಾಸ್ ಹಾಗೂ ಪ್ರಸನ್ನಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!