Friday, September 20, 2024

ಪ್ರಾಯೋಗಿಕ ಆವೃತ್ತಿ

ಗಾಂಧಿ ತತ್ವಗಳಿಂದ ಬದಲಾವಣೆ ಖಚಿತ : ರವಿಕುಮಾರ್

ಮಹಾತ್ಮ ಗಾಂಧಿ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಬದಲಾಗೋದು ಖಚಿತ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿಕುಮಾರ ಚಾಮಲಾಪುರ ಹೇಳಿದರು.

ಮಂಡ್ಯ ತಾಲ್ಲೂಕಿನ ಭೂತನಹೊಸೂರು ಸರ್ಕಾರಿ ಶಾಲೆಯಲ್ಲಿ ಮಂಡ್ಯ ಸಾಹಿತ್ಯ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ಗಾಂಧಿ ಜಯಂತಿ ಮತ್ತು ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಹಿಂಸೆ, ಶಾಂತಿ ಹೋರಾಟ, ಅಸಹಕರ ಚಳುವಳಿ ಮೂಲಕವೂ ಜಯ ಸಾಧಿಸಬಹುದು ಎಂದು ವಿಶ್ವಕ್ಕೆ ಸಂದೇಶ ಸಾರಿದ ಮಹಾನ್ ವ್ಯಕ್ತಿ ಮಹಾತ್ಮ ಗಾಂಧಿ ಅವರ ಸಂದೇಶಗಳನ್ನು ನಾವು ಅಳವಡಿಸಿಕೊಳ್ಳೋಣ ಎಂದುರು.

ಈ ವರ್ಷ ಗಾಂಧೀಜಿಯವರ 153 ನೇ ಜನ್ಮ ವರ್ಷಾಚರಣೆಯಾಗಿದೆ, ಗಾಂಧೀಜಿ ಅಹಿಂಸೆ ಮತ್ತು ಸತ್ಯದ ಮುಂದಾಳು. ಭಾರತೀಯ ವಿಮೋಚನಾ ಹೋರಾಟಕ್ಕಾಗಿ, ಅವರು ಸತ್ಯಾಗ್ರಹ ಮತ್ತು ಅಹಿಂಸಾ ಚಳುವಳಿಯನ್ನು ಮಾಡಿದವರು. ರಾಷ್ಟ್ರಪಿತರಾಗಿ, ಅವರು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಗೆ ವಿರುದ್ಧವಾಗಿ ಅನೇಕ ಇತರ ರಾಷ್ಟ್ರೀಯ ನಾಯಕರೊಂದಿಗೆ ಭಾರತದ ಸ್ವಾತಂತ್ರ‍್ಯ ಹೋರಾಟವನ್ನು ಮುನ್ನಡೆಸಿದವರು ಎಂದು ಸ್ಮರಿಸಿದರು.

ಸಾಹಿತ್ಯ ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಮಾತನಾಡಿ, ಭಾರತದ ಸ್ವಾತಂತ್ರ‍್ಯಕ್ಕಾಗಿ ಅಹಿಂಸಾತ್ಮಕ ಹಾದಿಯನ್ನು ಅನುಸರಿಸಿ ವಿಶ್ವನಾಯಕರಾದರು, ಸತ್ಯ ಮತ್ತು ನಂಬಿಕೆಗೆ ಹೆಚ್ಚು ಮಹತ್ವ ನೀಡಿದ ಸಂಘಟನಾ ತ್ಯಾಗಜೀವಿ ಎಂದು ನುಡಿದರು.

ಬಾಲ್ಯದಲ್ಲಿ ಗಾಂಧಿ ಅವರು ತುಂಬ ತುಂಟ, ಕಳ್ಳತನ, ಸುಳ್ಳುತನ ಇತ್ತು ಒಮ್ಮೆ ಸತ್ಯಹರಿಶ್ಚಂದ್ರ ನಾಟಕ ನೋಡಿ 3 ಬಾರಿ ವೀಕ್ಷಿಸಿ ಬದಲಾವಣೆಯತ್ತ ಸಾಗಿದರು, ಇಂದಿನ ವಿದ್ಯಾರ್ಥಿಗಳು ನೀವು ಗಾಂಧೀಜಿ ಅವರ ಆದರ್ಶಗಳನ್ನು ಪಾಲಿಸಿ, ಉದ್ದಾರವಾಗಲು ಪ್ರೇರಣೆ ನೀಡುತ್ತವೆ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮಂಡ್ಯ ಸಾಹಿತ್ಯ ಲಯನ್ಸ್ ಸಂಸ್ಥೆ ಅಧ್ಯಕ್ಷ ಎಚ್.ಕೆ.ಅನಿಲ್, ಖಚಾಂಚಿ ಡಾ.ಚಂದ್ರಶೇಖರ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಚಾಮರಾಜು, ಮುಖ್ಯ ಶಿಕ್ಷಕಿ ಥೆರೇಸಾ ಮಿನೇಜಸ್, ಲಯನ್ ನಾಗಲಿಂಗಪ್ಪ, ಎಲ್.ಕೃಷ್ಣ, ಮಾಜಿ ಅಧ್ಯಕ್ಷ ಎಚ್. ಎನ್. ನಾಗೇಶ್, ಧನಂಜಯ ದರಸಗುಪ್ಪೆ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!