Tuesday, November 24, 2026

ಪ್ರಾಯೋಗಿಕ ಆವೃತ್ತಿ

ಗಣೇಶ ಮೂರ್ತಿ ಉಚಿತವಾಗಿ ವಿತರಿಸಿದ ಬಿಜೆಪಿಯ ಡಾ.ಇಂದ್ರೇಶ್

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ, ಪರಿವರ್ತನಾ ಟ್ರಸ್ಟ್ ಅಧ್ಯಕ್ಷ ಡಾ. ಎನ್.ಎಸ್‌.ಇಂದ್ರೇಶ್ ಒಂದು ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸಿದರು.

ಪಾಂಡವಪುರ ಪಟ್ಟಣದ ಪರಿವರ್ತನ ಟ್ರಸ್ಟ್ ಕಚೇರಿ ಮುಂದೆ ಇಂದು ಮೇಲುಕೋಟೆ ಕ್ಷೇತ್ರದ ಜನರಿಗೆ ಒಂದು ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಯನ್ನು ಉಚಿತವಾಗಿ ನೀಡಿದರು.

ಈ ಸಂದರ್ಭದಲ್ಲಿ ಗಣಪತಿ ಮೂರ್ತಿ ಪಡೆದುಕೊಳ್ಳಲು ಕ್ಷೇತ್ರದ ಯುವ ಸಮೂಹವೇ ಪರಿವರ್ತನಾ ಟ್ರಸ್ಟ್ ಕಚೇರಿ ಮುಂದೆ ಜಮಾಯಿಸಿತ್ತು. ಪ್ರತಿ ಗಣೇಶ ಮೂರ್ತಿ ಪಡೆದುಕೊಂಡ ಯುವಕರು ಬಿಜೆಪಿ ಮುಖಂಡ ಡಾ. ಇಂದ್ರೇಶ್ ಅವರಿಗೆ ಜೈಕಾರ ಹಾಕಿ ಸಂಭ್ರಮಿಸುತ್ತಿದ್ದ ದೃಶ್ಯ ಕಂಡು ಬಂತು.

ಯುವಕರ ಒತ್ತಾಯದ ಮೇರೆಗೆ ಹಳ್ಳಿ ಹಳ್ಳಿಗೂ ಉಚಿತವಾಗಿ ಗಣೇಶ ಮೂರ್ತಿಯನ್ನು ವಿತರಿಸುವ ಕಾರ್ಯಕ್ಕೆ ಇಡೀ ಯುವ ಸಮೂಹವೇ ಮೆಚ್ಚುಗೆ ವ್ಯಕ್ತಪಡಿಸಿತು‌.

ಗಣೇಶ ಮೂರ್ತಿ ಪಡೆದುಕೊಳ್ಳಲು ಯುವಕರು ನಾಮುಂದು, ತಾಮುಂದು ಎಂದು ಮುಗಿಬಿದ್ದರು.ಕೊನೆಗೆ ಎಲ್ಲರೂ ಗಣೇಶ ಮೂರ್ತಿ ಪಡೆದು ತೆರಳಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ