Tuesday, November 24, 2026

ಪ್ರಾಯೋಗಿಕ ಆವೃತ್ತಿ

ಸಮರ್ಜಿತ್ – ಸಾನ್ಯಾ ಅಭಿನಯದ ನೈಜ ಘಟನೆ ಆಧಾರಿತ ಚಿತ್ರ ‘ಗೌರಿ’

‘ಗೌರಿ’ ಚಲನಚಿತ್ರ ನೂರು ದಿನಗಳ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದ್ದು ಶೀಘ್ರದಲ್ಲಿಯೇ ರಾಜ್ಯದ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಲನಚಿತ್ರದ ನಾಯಕ ಸಮರ್ಜಿತ್ ಲಂಕೇಶ್ ತಿಳಿಸಿದರು.

ನೈಜ ಘಟನೆ ಆಧಾರಿತ ಕಥೆ ಇರುವ ಈ ಚಿತ್ರವನ್ನು ನಮ್ಮ ತಂದೆ ಇಂದ್ರಜಿತ್ ಲಂಕೇಶ್ ನಿರ್ದೇಶಸಿದ್ದಾರೆ .ಈ ಚಿತ್ರದಲ್ಲಿ ಎಂಟು ಹಾಡುಗಳಿದ್ದು, ಈ ಹಾಡುಗಳಲ್ಲಿ ಕೆಲವು ಹಾಡುಗಳು ಸೂಪರ್ ಹಿಟ್ ಆಗಿದೆ ಎಂದು ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾನು ಸೇರಿದಂತೆ ಸಾನ್ಯಾ ಅಯ್ಯರ್ ನಾಯಕಿಯಾಗಿ ಪರಿಚಯ ಆಗುತ್ತಿದ್ದು,ಈ ಚಿತ್ರ ಬಹು ತಾರಾಗಣವನ್ನು ಒಳಗೊಂಡಿದ್ದು ಬಿಗ್ ಬಜೆಟ್ ಚಿತ್ರವಾಗಿದೆ. ಚಿತ್ರದಲ್ಲಿ 80 ಕಲಾವಿದರು ನಟಿಸಿದ್ದು ರಮಣೀಯ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಾಡುಗಳು ಉತ್ತಮವಾಗಿ ಮೂಡಿ ಬಂದಿದೆ. ಐದು ಮುಂದಿ ಸಂಗೀತ ನಿರ್ದೇಶಕರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಶೀಘ್ರದಲ್ಲಿಯೇ ಚಲನಚಿತ್ರ ರಾಜ್ಯದ್ಯಂತ ಬಿಡುಗಡೆಯಾಗಲಿದ್ದು ಹಾಗಾಗಿ ಜನತೆ ಈ ಚಿತ್ರವನ್ನು ವೀಕ್ಷಿಸುವ ಮೂಲಕ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

ನಾಯಕಿ ಸಾನ್ಯಾ ಅಯ್ಯರ್ ಮಾತನಾಡಿ ,ನಮ್ಮಂತ ಯುವ ಪ್ರತಿಭೆಗಳಿಗೆ ಇಂದ್ರಜಿತ್ ಲಂಕೇಶ್ ಅವರು ಸ್ಟಾರ್ ಡೈರೆಕ್ಟರ್ ಲಕ್ಕಿ ಡೈರೆಕ್ಟರ್ ಆಗಿದ್ದಾರೆ. ಐಶ್ವರ್ಯ ಚಿತ್ರದ ಮೂಲಕ ಬಂದ ಇಂದ್ರಜಿತ್ ಲಂಕೇಶ್ ಅವರು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ .ಒಂದು ಕಲ್ಲನ್ನು ಕೆತ್ತಿ ಶಿಲ್ಪಿಯನ್ನಾಗಿ ಮಾಡುವ ಶಕ್ತಿಯನ್ನು ಹೊಂದಿದ್ದಾರೆ. ಹಲವಾರು ಚಿತ್ರಗಳನ್ನು ತಯಾರಿಸಿ ಹೊಸ ಪ್ರತಿಭೆಗಳನ್ನು ಹೊರತಂದಿದ್ದಾರೆ. ಇವರೆಲ್ಲರೂ ಚಲನಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ ಎಂದರು.

ಚಲನಚಿತ್ರದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ ಮಂಡ್ಯ ಜಿಲ್ಲೆಯ ಜನತೆ ನಾವು ನಿರ್ಮಿಸಿದ ಚಿತ್ರವನ್ನು ಪ್ರೋತ್ಸಾಹಿಸಿದ್ದಾರೆ. ನಮ್ಮ ತಂದೆ ಲಂಕೇಶ್ ಅವರು ಬರಹದ ಮೂಲಕ ದೊಡ್ಡ ಹೆಸರು ಮಾಡಿದ್ದಾರೆ. ಅವರು ನೀಡುತ್ತಿದ್ದ ಶೀರ್ಷಿಕೆಗಳು ಅದ್ಭುತವಾಗಿದ್ದು ಹಲವಾರು ಬಾರಿ ಸರ್ಕಾರಗಳನ್ನು ಬೀಳಿಸುವ ಬರಹಗಳು ಲಂಕೇಶ್ ಪತ್ರಿಕೆಯಿಂದ ಬಂದಿದೆ ಎಂದು ನುಡಿದರು.

ಅಂಬರೀಶ್ ಅವರಿಗೆ ಮಂಡ್ಯದ ಗಂಡು, ದೇವೇಗೌಡರಿಗೆ ಮಣ್ಣಿನ ಮಗ ಎಂದು ಶೀರ್ಷಿಕೆ ನೀಡಿದ್ದೆ ನಮ್ಮ ತಂದೆ ಎಂದು ತಿಳಿಸಿದ ಅವರು, ಈ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಸಮರ್ಜಿತ್ ಪ್ರತಿದಿನ 10 ರಿಂದ 12 ಗಂಟೆ ಶ್ರಮ ಹಾಕಿದ್ದಾರೆ, ಸಾಕಷ್ಟು ಕಷ್ಟಪಟ್ಟಿದ್ದಾನೆ. ಆದ್ದರಿಂದ ಜನತೆ ಚಲನಚಿತ್ರವನ್ನು ವೀಕ್ಷಿಸುವ ಮೂಲಕ ಆಶೀರ್ವದಿಸಬೇಕೆಂದು ನುಡಿದರು.

ಸಾನ್ಯಾ  ನಂಜನಗೂಡಿನ ತಾಲೂಕಿನವರಾಗಿದ್ದು ಅದ್ಭುತ ಪ್ರತಿಭೆಯಾಗಿದ್ದಾರೆ. ಕಿರುತೆರೆಯಲ್ಲಿ ಬಾಲ ನಟಿಯಾಗಿ ನಟಿಸಿ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದರು .

ಈ ಗೌರಿ ಚಿತ್ರ ವಿಶಿಷ್ಟವಾದ ಚಲನಚಿತ್ರವಾಗಿದೆ. ನೈಜ ಘಟನೆಯ ಆಧಾರಿತ ಚಿತ್ರವಾಗಿದೆ. ಈಗಾಗಲೇ 100 ದಿನಗಳ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದ್ದು, 80 ಮಂದಿ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಗೌರಿ ಚಲನಚಿತ್ರದ ಹಾಡನ್ನು ಬಿಡುಗಡೆ ಮಾಡಲಾಯಿತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ