Thursday, November 19, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ದೇವಲಾಪುರದ ಬಳಿ ನಾಳೆ ಸಂಭ್ರಮದ ಗಿಡದ ಜಾತ್ರೆ

ನಾಗಮಂಗಲದಿಂದ ದೇವಲಾಪುರ ಮಾರ್ಗದಲ್ಲಿ 12 ಕಿಲೋಮೀಟರ್ ದೂರದಲ್ಲಿರುವ ಹಂಪನಕೆರೆ ಕಾವಲ್ ನಲ್ಲಿ ಮಾಂಸದಡುಗೆ ಮಾಡಿ ಎಡೆ ಅರ್ಪಿಸುವ ಗಿಡದ ಜಾತ್ರೆಯು ನಾಳೆ (ಡಿ. 13) ಸಂಭ್ರಮದಿಂದ ನಡೆಯಲಿದೆ.

ಬೆಳಿಗ್ಗೆ 7 ಗಂಟೆಯಿಂದಲೇ ಸಾವಿರಾರು ಭಕ್ತಾದಿಗಳು ಹರಿದಾಸರ ಬಳಿ ಹೋಗಿ ಪೂಜೆಯನ್ನು ಸಲ್ಲಿಸಿ ಹರಕೆಯನ್ನು ಸಲ್ಲಿಸುತ್ತಾರೆ. ತಮ್ಮ ಕುಟುಂಬದ ಮನೆ ದೇವರಿಗೆ ಮುಡಿಯನನ್ನು ಅರ್ಪಿಸುವ ವಾಡಿಕೆ ಹಿಂದಿನಿಂದಲೂ ನಡೆದು ಬರಲಿದೆ.

ಒಂದೇ ದಿನದಲ್ಲಿ ಅದು ಶುಕ್ರವಾರದಂದು ಲಕ್ಷಾಂತರ ಜನ ಒಂದೇ ವೇಳೆಯಲ್ಲಿ ಬಂದು ಹರಕೆಯನ್ನು ಮುಡಿಯನ್ನ ತೀರಿಸುವ ಮೂಲಕ ತಿರುಪತಿ ತಿಮ್ಮಪ್ಪನ ಸೇವೆಯನ್ನು ಮಾಡುವಂತಹ ಗತವೈಭವಯುತವಾದ ಈ ಜಾತ್ರೆಯನ್ನು ನಾವು ನೋಡಬಹುದಾಗಿದೆ.

ಈ ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದಲೂ ತಿರುಪತಿ ತಿಮ್ಮಪ್ಪನ ಭಕ್ತಾದಿಗಳು ಬಂದು ತಮ್ಮ ಹರಕೆಯನ್ನು ಸೇವೆಯನ್ನು ಹರಿದಾಸರ ಮೂಲಕ ತೀರಿಸುತ್ತಾರೆ. ಇಲ್ಲಿನ ಸುತ್ತಮುತ್ತಲಿನ ಹರಿದಾಸರುಗಳು ಇಲ್ಲಿ ಪಾಲ್ಗೊಂಡು ತಿಮ್ಮಪ್ಪನ ಹರಕೆಯನ್ನು ಪಡೆದು, ನಂತರ ಅವರು ನೇರವಾಗಿ ತಿರುಪತಿ ಯಾತ್ರೆ ಹೋಗಿ ಎಲ್ಲ ಭಕ್ತಾದಿಗಳ ಹರಕೆ ಹಣವನ್ನು ಹರಕೆಯನ್ನು ತಿರುಪತಿಯಲ್ಲಿ ಸಲ್ಲಿಸುವ ಮೂಲಕ ಅವರೆಲ್ಲರಿಗೂ ಸಹ ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆಯಲು ಕೋರುವುದು ಇಂದಿನಿಂದಲೂ ನಡೆದು ಬಂದಿದೆ.

ಇದೊಂದು ವೈಭವಯುತವಾದ ಗಿಡದ ಜಾತ್ರೆ ಅರಣ್ಯ ಪ್ರದೇಶದ ನಡುವೆ ನಡೆಯುವಂತಹ ಜಾತ್ರೆ ಇದಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ