Friday, September 20, 2024

ಪ್ರಾಯೋಗಿಕ ಆವೃತ್ತಿ

ಬಾಲಕಿಯರ ಕಬಡ್ಡಿ ಫೈನಲ್ : ರೋಚಕ ಗೆಲವು ದಾಖಲಿಸಿದ ಶೀಳನೆರೆ ಕಾಲೇಜು ತಂಡ


  • ಗೆಲುವಿಗಾಗಿ ಹಣಾಹಣಿ ನಡೆಸಿದ 2 ಕಾಲೇಜುಗಳ ಬಾಲಕಿಯರ ತಂಡಗಳು

  • ರೋಚಕತೆಯೊಂದಿಗೆ ಜಯ ದಾಖಲಿಸಿದ ಶೀಳನೆರೆ ಕಾಲೇಜು ಆಟಗಾರ್ತಿಯರು

ಶುಕ್ರವಾರ ನಡೆದ ಕೆ.ಆರ್.ಪೇಟೆ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ 2 ತಂಡಗಳು ಅನಿರೀಕ್ಷಿತ ತಿರುವುಗಳೊಂದಿಗೆ ರೋಚಕತೆಗೆ ಸಾಕ್ಷಿಯಾದವು.

ಸಮ ಅಂಕಗಳನ್ನು ಪಡೆದ 2 ತಂಡಗಳು ಡ್ರಾ ಮಾಡಿಕೊಂಡರೂ, ನಂತರ ಜರುಗಿದ ರೋಚಕ ಪೈವ್ ರೈಡಿನಲ್ಲಿ ಶೀಳನೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಕೇವಲ ಒಂದೇ ಅಂಕಗಳ ಅಂತರದಲ್ಲಿ ರೋಚಕ ಗೆಲವು ಸಾಧಿಸಿತು.

ಈ ಪೈನಲ್ ನಲ್ಲಿ ಶೀಳನೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಆದಿಹಳ್ಳಿ ಅಲ್ಪ ಸಂಖ್ಯಾತರ ವಸತಿ ಪದವಿ ಪೂರ್ವ ಕಾಲೇಜಿನ ಬಾಲಕಿಯರು ಗೆಲುವಿಗಾಗಿ ಜಿದ್ದಾಜಿದ್ದಿನ  ಹಣಾಹಣಿ ನಡೆಸಿದರು.

ಪಸ್ಟ್ ಆಪ್ ನಲ್ಲಿ ಆದಿಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡದ ಆಟಗಾರ್ತಿಯರು ಹಾಗೂ ಶೀಳನೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ತಂಡದ ಆಟಗಾರ್ತಿಯರನ್ನು ಸೆದೆಬಡಿದು ಮುನ್ನುಗ್ಗಿ ಮೂರು ಬೋನಸ್ ಪಡೆದು 12 ಅಂಕಗಳಿಸಿದರು.

ಶೀಳನೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡವು ಒಂದು ಅಂಕವನ್ನು ಪಡಯಲಾರದೆ ಮುಗ್ಗರುಸಿ ಬಹುತೇಕ ಸೋಲುನ್ನು ಒಪ್ಪಿಕೊಂಡೇ ಮಂಕಾಗಿತ್ತು. ಆದರೆ ಕೋರ್ಟ್ ಬದಲಾವಣೆಯೊಂದಿಗೆ ಸೆಕೆಂಡ್ ಆಪ್ ಪ್ರಾರಂಭಿಸಿದರೂ ಸಹ ಮೊದಲ ನಿಮಿಷದಲ್ಲಿ ಕೇವಲ ಒಂದೇ ಒಂದು ಅಂಕ ಪಡೆದು 01- 12ರಲ್ಲಿ ಮತ್ತೇ ನೀರಸ ಪ್ರದರ್ಶನವೇ ಮುಂದುವರೆಯಿತು.

ತಕ್ಷಣವೇ ಎಚ್ಚೆತ್ತುಗೊಂಡ ಶೀಳನೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡ ಕೋಚ್ ಮಂಜುನಾಥ ಟೈಮ್ ಪ್ಲೀಸ್ ತೆಗೆದುಕೊಂಡು ” ಮಾಡು ಇಲ್ಲವೇ ಮಡಿ” ಎಂಬ ತೀರ್ಮಾನಕ್ಕೆ ಬಂದು ಬಾಲಕಿಯರನ್ನು ಉರಿದುಂಬಿಸಿದರು. ಆಗ ನಮಗೆ ಉಳಿದಿದ್ದು ಸಮಯ ಕೇವಲ ಮೂರು ಮುಕ್ಕಾಲು ನಿಮಿಷ. ನಂತರ ದಾಳಿ ಆಟವಾಡಿದ ಶೀಳನೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡದ ಆಟಗಾರ್ತಿಯರು ಎಲ್ಲರನ್ನು ಔಟ್ ಮಾಡಿ ನಾಲ್ಕು ಬೋನಸ್ ನೊಂದಿಗೆ 12 – 12 ಸಮ ಅಂಕಗಳೊಂದಿಗೆ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

‌ನಂತರ ರೆಫರಿಗಳು ಕ್ರೀಡಾ ನಿಯಮದಂತೆ ಐದು ರೈಡ್ ನಿಗಧಿಗೊಳಿಸಿ ಅಟಾಕ್ ಲೈನನ್ನೇ ಬೋನಸ್ ಲೈನ್ ಎಂದು ಘೋಷಣೆ ಮಾಡಿದರು. ಒಬ್ಬರಿಗೆ ಒಂದೇ ರೈಡಿಗೆ ಅವಕಾಶ ಇರುವ ಕಾರಣ ಪಂದ್ಯಾವಳಿ ಪ್ರಾರಂಭದಲ್ಲಿಯೇ ರೈಡರ್ ಗಳು ಯಾರು ಯಾರೆಂದು ಕೇಳಿಕೊಂಡು ಹೆಸರು ಬರೆದುಕೊಂಡು ಹೆಸರುಗಳನ್ನು ಘೋಷಣೆ ಮಾಡಿದರು.

ರೈಡಿಗೆ ಹೋದವರು ಕನಿಷ್ಠ ಒಬ್ಬರನ್ನಾದರೂ ಔಟ್ ಮಾಡಿ ಬರಬೇಕು, ಇಲ್ಲವೇ ಅಟಾಕ್ ಗೆರೆಯನ್ನು ಮುಟ್ಟಿ ಬೋನಸ್ ಪಡೆಯಬೇಕು. ಇವೆರಡರಲ್ಲಿ ಒಂದನ್ನು ಸಾಧಿಸಲು ಆಗದಿದ್ದರೆ ರೈಡರೇ ಔಟ್ ಆಗುತ್ತಾರೆ ಎಂದು ತಿಳಿಸಿದರು. ಈ ನಿಯಮದಲ್ಲಿ ಯಾರೇ ಔಟಾದರೂ ಸಹ ಅಂಕಣದಿಂದ ಹೊರ ಹೋಗುವಂತಿಲ್ಲ. ಈ ನಿಯಮವನ್ನೇ ಕೇಳಿ ಆಟಗಾರ್ತಿಯರು ಬೆಚ್ಚಿ ಬಿದ್ದರು.

ಆಗ ರೋಚಕದ ಆಟ ಪ್ರಾರಂಭವಾಗಿ ಹೋಯ್ತು! ತುಂಬಿ ತುಳುಕಿದ್ದ ಪ್ರೇಕ್ಷಕರು ಸಹ ಎರಡು ಭಾಗವಾಗಿಯೇ ವಿಭಜನೆಗೊಂಡು ಕೇಕೆ ಹಾಕಿ  2 ತಂಡಗಳನ್ನು ಹುರಿದುಂಬಿಸಿದರು.

ಎರಡು ತಂಡಗಳು ಸಹ ಒಂದೊಂದು ರೈಡ್ ಗೆ ಒಂದೊಂದು ಅಂಕಗಳನ್ನು ಗಳಿಸಲಾರಂಭಿಸಿದವು. ಈ ಆಟದಲ್ಲೂ ಸಹ 4 – 4 ಅಂಕಗಳನ್ನು ಪಡೆದವು.  ಆದಿಹಳ್ಳಿ ಅಲ್ಪ ಸಂಖ್ಯಾತರ ವಸತಿ ಪದವಿ ಪೂರ್ವ ಕಾಲೇಜು ತಂಡ ಕೊನೆ ರೈಡಿನಲ್ಲಿ 5 ಅಂಕ ಗಳಿಸಿತು. ಶೀಳನೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡ ಒಂದು ಕ್ಯಾಚ್ ಹಿಡಿದ ಪರಿಣಾಮ ಪಲಿತಾಂಶ 5 – 5 ತಲುಪಿತು. ಮತ್ತೆ ಶೀಳನೆರೆ ಕಾಲೇಜು ಬಾಲಕಿಯರು ಕೊನೆ ರೈಡಿನಲ್ಲಿ ಮತ್ತೊಂದು ಅಂಕ ಗಳಿಸಿ 5 – 6 ಅಂಕಗಳಿಂದ ರೋಚಕ ಗೆಲವು ಸಾಧಿಸಿದರು.  ಈ ತರಹದ ಅನಿರೀಕ್ಷಿತ ತಿರುವು ಹಾಗೂ ಜಿದ್ದಾಜಿದ್ದಿ ಆಟ ಬಹಳ ಅಪರೂಪ ಎಂದು ಅಲ್ಲಿದ್ದವರೆಲ್ಲ ಕಣ್ಣುಂಬಿಕೊಂಡರು.

ಈ ಆಟ ತಂಡ ಎಷ್ಟೇ ದುರ್ಬಲರಾಗಿದ್ದರೂ ಸಹ ಕೀಳರಿಮೆಗೆ ಒಳಗಾಗದೆ ಛಲದಿಂದ ಮುನ್ನುಗ್ಗಿದರೆ ನಮ್ಮ ಗುರಿ ತಲುಪಬಹುದು ಎನ್ನುವುದು ಬಹಳ ಸ್ವಷ್ಟವಾಗಿ ತಿಳಿಸುವಂತಿತ್ಗೋತು.

ಶೀಳನೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡದ ಯಶಸ್ಸಿಗೆ ಕಳೆದ ಒಂದೆರಡು ತಿಂಗಳಿನಿಂದ ಮಕ್ಕಳನ್ನು ಪ್ರೆರೇಪಿಸಿ ಈ ಆಟ ಆಡುವಂತೆ ಮಾಡಿದ ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಮಹೇಶರವರಿಗೆ ಹಾಗೂ ಎಲ್ಲಾ ಉಪನ್ಯಾಸಕರಿಗೆ ಪ್ರಭಾರ ಪ್ರಾಂಶುಪಾಲ ಕತ್ತರಿಘಟ್ಟ ವಾಸು ಅವರು ಅಭಿನಂದನೆ ತಿಳಿಸಿದರು. \

ಇದರ ಜೊತೆಗೆ ಬೇರೆ ಬೇರೆ ಊರುಗಳಿಂದ ಕಬಡ್ಡಿ ಆಟಗಾರರನ್ನೇ ನಮ್ಮ ಕಾಲೇಜಿಗೆ ಕರೆತಂದೂ ತರಬೇತಿ ನೀಡಿದ ಅತಿಥಿ ಉಪನ್ಯಾಸಕ ವೆಂಕಟೇಶ ಅವರಿಗೆ ಮತ್ತು ನಿನ್ನೆ ಒಂದು ದಿನ ತರಬೇತಿ ನೀಡಿ ಮಕ್ಕಳನ್ನು ಹುರಿದುಂಭಿಸಿದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಶಿಕ್ಷಕ ಮಂಜುನಾಥ ಇವರಿಬ್ಬರನ್ನೂ ಮರೆಯುವಂತಿಲ್ಲ ಎಂದು ಹೇಳಿದರು.

ಅಥ್ಲೆಟಿಕ್ಸ್  ಸಾಧನೆ

ಶೀಳನೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡ ವಿವಿಧ ಕ್ರೀಡೆಗಳಲ್ಲೂ ಸಾಧನೆ ಮಾಡಿ ಗಮನ ಸೆಳೆದಿದೆ.  ಕಬಡ್ಡಿ ಹಾಗೂ 5000 ಮೀಟರ್ ಓಟದಲ್ಲಿ ಸಂಜನಾ ಪ್ರಥಮ, ಟ್ರಿಪಲ್ ಜೆಂಪ್ ನಲ್ಲಿ ರಮ್ಯಾ ಪ್ರಥಮ, 5000 ಮೀಟರ್ ಓಟದಲ್ಲಿ ವಿಜಯಲಕ್ಷ್ಮಿ ದ್ವಿತೀಯ ಸ್ಥಾನ, ( ಮೊದಲ ದಿನ ಬರಿಗಾಲಿಗಲ್ಲಿ ಓಡುವಾಗ ಸಣ್ಣ ಕಲ್ಲೊಂದು ಕಾಲಿಗೆ ಹೊಕ್ಕಿದ ಕಾರಣ ಈ ದಿನ ಬ್ಯಾಂಡೇಜ್ ಕಟ್ಟಿಕೊಂಡು ಶೂ ನಲ್ಲಿ ಓಡಿದರು)

3000 ಸಾವಿರ ಮೀ. ಓಟದಲ್ಲಿ ವಿಜಯಲಕ್ಷ್ಮಿ ದ್ವಿತೀಯ ಸ್ಥಾನ, ಉದ್ದಜಿಗಿತದಲ್ಲಿ ರಮ್ಯ ದ್ವಿತೀಯ ಸ್ಥಾನ,ಹ್ಯಾಮರ್ ತ್ರೋ ನಲ್ಲಿ ಶ್ರೀನಿವಾಸ ದ್ವಿತೀಯ ಸ್ಥಾನ, 3000 ಮೀಟರ್ ಓಟದಲ್ಲಿ ಸಂಜನ ತೃತೀಯ ಸ್ಥಾನ,ಎತ್ತರ ಜಿಗಿತದಲ್ಲಿ ಐಶ್ವರ್ಯ ತೃತೀಯ ಸ್ಥಾನ ಪಡೆಯುವುದರೊಂದಿಗೆ ಒಟ್ಟು 8 ಬಹುಮಾನಗಳನ್ನು ಪಡೆದು ಅದರಲ್ಲಿ 6 ಸ್ವರ್ಧಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!