Friday, September 20, 2024

ಪ್ರಾಯೋಗಿಕ ಆವೃತ್ತಿ

ಪ್ರಾಮಾಣಿಕ ಪ್ರಯತ್ನದಿಂದ ಉತ್ತಮ ಫಲಿತಾಂಶ : ಟಿ.ಕೆ.ಲೋಕೇಶ್

ಯಾವುದೇ ಕೆಲಸದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ‌. ಲೋಕೇಶ್ ತಿಳಿಸಿದರು.

ಮಂಡ್ಯದ ಕಾರಾಗೃಹದಲ್ಲಿ ಆರ್-ಸೆಟಿ (RSETI) ಮಂಡ್ಯ ಹಾಗೂ ಜಿಲ್ಲಾ ಕಾರಾಗೃಹ ಇವರ ಸಹಯೋಗದೊಂದಿಗೆ ಕಾರಾಗೃಹ ಬಂಧಿಗಳಿಗೆ 30 ದಿನಗಳ ಮೋಟಾರ್ ರಿವೈಂಡಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದಿನನಿತ್ಯ ಚಟುವಟಿಕೆಗಳ ಜೊತೆಗೆ ಡ್ರೈವಿಂಗ್, ವ್ಯವಸಾಯ ಅಥವಾ ಇನ್ನಿತರ ಚಟುವಟಿಕೆಗಳ ಆಗಿರಬಹುದು, ಅದನ್ನೇ ಮುಂದುವರಿಸಿ. ತರಬೇತಿಯಲ್ಲಿ ಕಲಿತಿರುವ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದುವರೆಯಿರಿ ಎಂದರು.

ಕಾರಗೃಹ ಎಂದರೆ ಕೇವಲ ನಿಮ್ಮನ್ನು ಬಂಧಿಸುವುದು ಮತ್ತು ನಿಮ್ಮನ್ನು ಬಿಡುಗಡೆ ಮಾಡುವುದಲ್ಲ. ಇಲ್ಲಿಂದ ಬಿಡುಗಡೆಯಾಗಿ, ಪರಿವರ್ತನೆಗೊಂಡು ಜೀವನದಲ್ಲಿ ಅಭಿವೃದ್ಧಿ ಹೊಂದುವುದಾಗಿದೆ. ತಾವೆಲ್ಲರೂ ತನು-ಮನ ಅರ್ಪಿಸಿ 30 ದಿನಗಳ ಕಾಲ ತರಬೇತಿ ಪಡೆದು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದೀರಿ ಎಂದರು.

ಉತ್ತಮವಾದ ಗುರಿಯ ಕಡೆಗೆ ಸಾಗುವ ದಾರಿಯಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಬರುವುದು ಸಾಮಾನ್ಯ ವಿಷಯ. ಅವುಗಳನ್ನು ಮೀರಿ ನಿಮ್ಮ ಗುರಿಯನ್ನು ಸಾಧಿಸುವ ಕಡೆಗೆ ಗಮನ ಹರಿಸಿಬೇಕು ಎಂದು ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ಆಸಕ್ತಿಯಿಂದ ಎಲ್ಲರೂ ಪಾಲ್ಗೊಂಡಿದ್ದಾರೆ. ಎಲ್ಲರೂ ಉತ್ತಮ ವಿಷಯ, ಉದ್ದೇಶದ ಕಡೆ ಸಾಗಿದಾಗ ಎಲ್ಲರೂ ನಿಮಗೆ ಸಹಕರಿಸುತ್ತಾರೆ ಎಂದರು.

ತಾವೆಲ್ಲರೂ ಕಾರಾಗೃಹದಿಂದ ಪರಿವರ್ತನೆಯಾಗಿ, ಆತ್ಮಾವಲೋಕನ ಮಾಡಿಕೊಂಡು ಕೆಟ್ಟ ಚಟಗಳನ್ನು ಬಿಟ್ಟು ಯೋಗ, ಧ್ಯಾನ ಮತ್ತು ಶಿಸ್ತಿನಿಂದ ಇರುವುದು ಅಭ್ಯಾಸ ಮಾಡಿಕೊಳ್ಳಿ. ಉತ್ತಮ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ ಎಂದರು.

ಇದೇ ಸಂದರ್ಭದಲ್ಲಿ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣಪತ್ರವನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ಕಛೇರಿಯ ಬ್ಯಾಂಕ್ ಆಫ್ ಬರೋಡದ ಉಪ ಪ್ರಾದೇಶಿಕ ವ್ಯವಸ್ಥಾಪಕರು ಸತುವ ಸನಾತನ್, ಚೀಫ್ ಮ್ಯಾನೇಜರ್ ಆಫ್ ಲೀಡ್ ಬ್ಯಾಂಕ್‌ ನ ದೀಪಕ್.ಎಂ.ಪಿ, ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಬ್ಯಾಂಕ್ ಆಫ್ ಬರೋಡದ ನಿರ್ದೇಶಕರು ವಿವೇಕ್ ವಿ, ಪುರಂದರ್ ಚಿತ್ರಪುರ್, ನಂಜುಂಡಸ್ವಾಮಿ,
ವಿಜಯಮ್ಮ, ಅನುಪಮ, ಜಯರಾಮು, ಕೆ.ಎ, ರವಿಕುಮಾರ ಭಜಂತ್ರಿ, ಜಿಲ್ಲಾ ಕಾರಾಗೃಹದ ಅಧಿಕಾರಿ/ ಸಿಬ್ಬಂದಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!