Thursday, November 19, 2026

ಪ್ರಾಯೋಗಿಕ ಆವೃತ್ತಿ

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ಮೂಲಸೌಕರ್ಯ ದೊರೆಯಲಿ

ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಮೂಲಸೌಕರ್ಯ ದೊರೆಯುವಂತಾಗಬೇಕು ಎಂದು ಸಮಾಜಸೇವಕ ಮಲ್ಲನಕೊಪ್ಪಕೊಪ್ಪಲು ಮಲ್ಲಿಕಾರ್ಜುನ(ಫೈಟರ್ ರವಿ) ಅಭಿಪ್ರಾಯಪಟ್ಟರು.

ನಾಗಮಂಗಲ ತಾಲ್ಲೂಕಿನ ದೇವಲಾಪುರ ಹೋಬಳಿ ಕರಡಹಳ್ಳಿ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿಗಳಿಗೆ ಶುದ್ದ ಕುಡಿಯುವ ನೀರಿನ ಘಟಕ, ಓದಲು ಅನುಕೂಲವಾಗುವಂತೆ ಪ್ರೊಜೆಕ್ಟರ್ ಮತ್ತು ಥ್ರೋಬಾಲ್ ಗಳನ್ನು ಕೊಡುಗೆಯಾಗಿ ನೀಡಿ ಶನಿವಾರ ಅವರು ಮಾತನಾಡಿದರು.

ನಾನು ಓದುವ ದಿನಗಳಲ್ಲಿ ಕಾಲಿಗೆ ಚಪ್ಪಲಿಯೇ ಇರುತ್ತಿರಲಿಲ್ಲ. ಅಷ್ಟು ಕಷ್ಟದ ದಿನಗಳಲ್ಲಿ ನಾವು ವಿದ್ಯಾಭ್ಯಾಸ ಮಾಡಿದೆ.ಹಾಗಾಗಿ ನಾನು ಕಾಲೇಜಿಗೆ ಹೋಗಲು ಮಾನಸಿಕವಾಗಿ ನೊಂದಿದ್ದೆ. ಆ ಕಾರಣಕ್ಕಾಗಿ ನಾನು ಪೋಷಕರನ್ನು ದೂಷಿಸುವುದಿಲ್ಲ. ಅವರಿಗೆ ಅಂದು ಕಠಿಣವಾದ ಪರಿಸ್ಥಿತಿಯಿತ್ತು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಹೀಗಾಗಿಯೇ ನಾನು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಾಜಸೇವೆ ಮಾಡುತ್ತಿದ್ದೇನೆ. ಇದನ್ನು ಬಳಸಿಕೊಂಡು ನಮ್ಮ ತಾಲ್ಲೂಕಿನ ವಿದ್ಯಾರ್ಥಿಗಳು ಉತ್ತಮ ವಿದ್ಯೆ ಪಡೆದು ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಪಡೆಯಬೇಕು ಎಂದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಕುಮಾರ್ ಮಾತನಾಡಿ, ಉಳ್ಳವರೆಲ್ಲರೂ ಸಮಾಜಸೇವೆ ಮಾಡಲು ಮನಸ್ಸು ಮಾಡುವುದಿಲ್ಲ. ಆದರೆ ಫೈಟರ್ ರವಿಯಣ್ಣ ಅವರು ದೇವಲಾಪುರ ಹೋಬಳಿಯ ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಹಲವು ಗ್ರಾಮಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ತನಗೆ ಜನ್ಮ ನೀಡಿದ ಊರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಇವರಿಂದ ಇನ್ನಷ್ಟು ಜನೋಪಯೋಗಿ ಕೆಲಸಗಳು ಆಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಯಶಂಕರ್, ಗ್ರಾ.ಪಂ. ಸದಸ್ಯ ಸಿಂಗಾರಿಗೌಡ, ಎಸ್ ಡಿಎಂಸಿ ಅಧ್ಯಕ್ಷ ನಾಗರಾಜು, ಕೆಂಪೇಗೌಡ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಜೆ.ಜಯರಾಂ, ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ