ಅಕ್ಷರ ಜ್ಞಾನದ ಶಿಕ್ಷಣದ ಜೊತೆಗೆ ಸಮಾಜದಲ್ಲಿ ಬದುಕಿ ಬಾಳುವುದನ್ನು ಕಲಿಸುವುದೇ ಶಿಕ್ಷಣವಾಗಿರಬೇಕೆಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಶ್ರೀ ಪ್ರಸನ್ನ ನಾಥ ಮಹಾಸ್ವಾಮಿಜಿಗಳು ಅಭಿಪ್ರಾಯಪಟ್ಟರು.
ನಾಗಮಂಗಲ ತಾಲೂಕಿನ ಬ್ರಹ್ಮದೇವರಹಳ್ಳಿಯಲ್ಲಿ ಶ್ರೀ ರಮಾನಂದ ನಾಥ ಸ್ವಾಮೀಜಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಏರ್ಪಡಿಸಿದ್ದು ಗುರುವಂದನಾ ಹಾಗೂ 25ನೇ ವರ್ಷದ ಪುನರ್ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಹಳೆಯ ವಿದ್ಯಾರ್ಥಿಗಳು ತಾವು ಓದಿರುವ ಶಾಲೆಯ ಮೇಲೆ ಅಭಿಮಾನ ಇಟ್ಟು ಈ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ. ತಾವುಗಳು ವಿದ್ಯೆ ಕಲಿಕೆಯೊಂದಿಗೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ, ಪರಿಪೂರ್ಣವಾದ ಸಾಧನೆಯೊಂದಿಗೆ ಗುರುವಿನ ಮಾರ್ಗದರ್ಶನದೊಂದಿಗೆ ಸಾಧನೆಯತ್ತ ಮುನ್ನಡೆಯಿರಿ ಎಂದು ತಿಳಿಸಿದರು.
ಹಳೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮ ಮುನ್ನಡೆಸುತ್ತಾ ಬಂದಿದ್ದು, ಶ್ರೀಮಠದ ಬಗ್ಗೆ ಅವರಿಗಿರುವ ಅಪಾರ ಅಭಿಮಾನದ ಸಂಕೇತ. ನಮ್ಮ ಮಠ ತಮ್ಮ ಸೇವಾ ಮನೋಭಾವನೆಯನ್ನು ಗೌರವಿಸುತ್ತದೆ. ಮುಂದೆಯೂ ಇಂತಹ ಕಾರ್ಯಕ್ರಮ ಯಶಸ್ವಿಯಾಗಿ ಮಾಡಬೇಕೆಂದು ಶುಭ ಹಾರೈಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಪುರುಷೋತ್ತಮಾನಂದ ನಾಥ ಮಹಾಸ್ವಾಮಿಜಿಗಳು ವಹಿಸಿದ್ದರು. ನರಸಿಂಹರಾಜು ಮುಖ್ಯ ಶಿಕ್ಷಕರು, ಟಿ ಎನ್ ನರಸಿಂಹಮೂರ್ತಿ ಮೈಸೂರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.




