Thursday, September 19, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ ಮುಂದಾದ ಪ್ರಥಮ ಸೇವಾತಂಡ ಡಾ: ಧನಂಜಯ ಶ್ಲಾಘನೆ

  • ಮದ್ದೂರಿನ ಮದ್ದಿನ ಮನೆ ನೆರವಿಗರ ಕೂಟಕ್ಕೆ ಚಾಲನೆ
  • ಮದ್ದೂರಿನ ಪ್ರಗತಿಪರ ಸಂಘಟನೆಗಳ ವತಿಯಿಂದ ”ಕುವೆಂಪು ಜಯಂತಿ” ಆಚರಣೆ

ಸರ್ಕಾರಿ ಆಸ್ಪತ್ರೆಯ ಸೇವಾ ತಂಡವಾಗಿ ಕಾರ್ಯನಿರ್ವಹಿಸುತ್ತಾ ಸಂಘರ್ಷಕ್ಕೆ ಬದಲಾಗಿ ಸಾಮರಸ್ಯದಿಂದ ರೋಗಿಗಳ ಸೇವೆ ಹೆಚ್ಚಳಕ್ಕೆ ಕ್ರಮಿಸುವ ಆಶಯದಿಂದ ರೂಪುಗೊಂಡ ಮೊಟ್ಟಮೊದಲ ಸೇವಾತಂಡ ಇದಾಗಿದೆ ಎಂದು ಮದ್ದೂರಿನ ಮದ್ದಿನಮನೆ ನೆರವಿಗರ ಕೂಟದ ಕಾರ್ಯವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ ಧನಂಜಯ್ಯ ಶ್ಲಾಘಿಸಿದರು.

nudikarnataka.com

ಮದ್ದೂರಿನ ಭೂ ಬ್ಯಾಂಕ್ ಸಭಾಂಗಣದಲ್ಲಿ ಇಂದು ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಮದ್ದಿನಮನೆ ನೆರವಿಗರ ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರಿ ಆಸ್ಪತ್ರೆಯ ಸುಧಾರಣೆ ಮೂಲಕ ರೋಗಿಗಳಿಗೆ ಗರಿಷ್ಠ ಪ್ರಮಾದ ಸೇವೆ ಲಭ್ಯವಾಗುವುದನ್ನ ಖಾತರಿಪಡಿಸಿಕೊಳ್ಳುವ ಆಶಯದಿಂದ ರೂಪುಗೊಂಡಿಹ ಸೇವಾತಂಡದ ವಾಟ್ಸಪ್ ಗ್ರೂಪ್ನಲ್ಲಿ ನಾನು ಇರುವುದಾಗಿ ತಿಳಿಸಿದ ಡಾ. ಧನಂಜಯ ಅವರು ನಾವು ನೀವು ಸೇರಿ ರೋಗಿಗಳ ನೆರವಿಗೆ ನಿಲ್ಲೋಣ ಎಂದರು.

ಹೀಗಾಗಲೆ ಪ್ರಗತಿಪರ ಸಂಘಟನೆಗಳು ಹೇಳಿದ ಅಂಶ ಪರಿಗಣಿಸಿ ಮದ್ದೂರು ಆಸ್ಪತ್ರೆಯ ಸುಧಾರಣೆಗೆ ಪ್ರಯತ್ನಮಾಡಲಾಗುತ್ತಿದೆ ಎಂದರು.

ಸಧ್ಯ ಆಸ್ಪತ್ರೆಯ ಆಂಬುಲೇನ್ಸ್ ಕೆಟ್ಟಿದ್ದು, ಭಾರತಿನಗರ ಆಸ್ಪತ್ರೆಯ ಆಂಬುಲೇನ್ಸ್ ಬಳಸಲಾಗುತ್ತಿದ್ದು, ಇನ್ನು ಹದಿನೈದು ದಿನಗಳಲ್ಲಿ ಹೊಸ ಆಂಬುಲೆನ್ಸ್ ಬರುವುದಾಗಿಯು ಮುಂದಿನ ಜಿ.ಪಂ. ಬಜೆಟ್ ನಲ್ಲಿ ಮತ್ತೊಂದು ಆಂಬುಲೇನ್ಸ್ ಬರುವ ಭರವಸೆ ಇದೆ ಎಂದರು.

ಶುದ್ದಕುಡಿಯವ ನೀರಿನ ಘಟಕದ ಕೊರತೆ ಇದ್ದು, ನೆರವಿಗರ ಕೂಟದ ಸದಸ್ಯರು ದಾನಿಗಳ ನೆರವು ಪಡೆದು ಮದ್ದೂರು ಆಸ್ಪತ್ರೆಗೆ ಶುದ್ದ ನೀರಿನ ಘಟಕ ಹಾಕಿಸುವಲ್ಲಿ ಕಾರ್ಯ ಪ್ರವೃತ್ತರಾಗಬೇಕೆಂದರು.

ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಕುಂದು ಕೊರತೆ ನಿವಾರಣೆಗೆ ಈ ಸೇವಾ ತಂಡದವರನ್ನು ವಿಶ್ವಾಸಕ್ಕೆ ತೆಗೆದುಕ್ಕೊಂಡು ವ್ಯವಸ್ಥೆ ಸುಧಾರಣೆಗೆ ಪ್ರಯತ್ನಿಸೊಣ ಎಂದರು.

ಇದೇ ಸಂದರ್ಭದಲ್ಲಿ ಮದ್ದೂರಿನ ಪ್ರಗತಿಪರ ಸಂಘಟನೆಗಳ ವತಿಯಿಂದ ”ಕುವೆಂಪು ಜಯಂತಿ” ಯನ್ನು ಆಚರಿಸಲಾಯಿತು.

ಇದೆ ವೇಳೆ ಈ ದಿನ.ಕಾಮ್ ನ ಆಪ್ ಬಿಡುಗಡೆ ಗೊಳಿಸಲಾಯಿತು. ಗ್ರಾ. ಪಂ. ಸದಸ್ಯರ ಒಕ್ಕೂಟದ ತಾ ಅಧ್ಯಕ್ಷ ಜಿ. ಎನ್. ಸತ್ಯ. ವಾರ್ತಾಭಾರತಿ ಜಿಲ್ಲಾ ವರದಿಗಾರ ಮಲ್ಲೇಶ್, ಲಕ್ಷ್ಮಣ್, ಜಿಕೆ, ರಾಜು, ಬ್ಯಾಂಕ್‌ ಅಧ್ಯಕ್ಷ ಮುತ್ತುರಾಜ್. ಹಾಲು ಉತ್ಪಾದಕರು ಹೋರಾಟ ಸಮಿತಿಯ ತಾ. ಆಧ್ಯಕ್ಷ ಜಿ. ಕೆ. ರಾಜು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!