ಪದವೀಧರರ ಚುನಾವಣೆಯಲ್ಲಿ ನಾನು ಪರಾಭವ ಆಗಿದ್ದರೂ ಕೂಡ ಪದವೀಧರರ ಜೊತೆಯಲ್ಲಿಯೇ ಇದ್ದು, ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗುವುದಾಗಿ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದ ವಿನಯ್‌ಕುಮಾರ್ ತಿಳಿಸಿದರು.
ಮಳವಳ್ಳಿ ಪಟ್ಟಣದ ಸವಿರುಚಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ವ್ಯಕ್ತಿಗೆ ನಿರೀಕ್ಷೆಗೂ ಮೀರಿ ಬೆಂಬಲ ಕೊಟ್ಟಿದ್ದಾರೆ. ಮತ ಹಾಕಿದ ಮತದಾರರಿಗೆ ಹಾಗೂ ನನಗೆ ಬೆಂಬಲವಾಗಿ ನಿಂತ ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಪದವೀಧರ ಪತ್ತಿನ ಸಹಕಾರ ಬ್ಯಾಂಕ್ ಮಾಡುತ್ತೇನೆಂದು ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿದ್ದೆ, ಅದರಂತೆ ಕಾರ್ಯವನ್ನು ಪ್ರಾರಂಭ ಮಾಡಿದ್ದೇನೆ. ಚುನಾವಣೆಯಲ್ಲಿ ಸೋಲು- ಗೆಲುವು ಸಹಜ. ಆದರೆ ಕೊಟ್ಟ ಭರವಸೆಗಳನ್ನು ಈಡೇರಿಸುವುದು ನನ್ನ ಕರ್ತವ್ಯವಾಗಿರುವುದರಿಂದ ಅತೀ ಶೀಘ್ರದಲ್ಲಿಯೇ ಬ್ಯಾಂಕ್ ಆರಂಭಗೊಳ್ಳಲಿದೆ. ಬ್ಯಾಂಕ್ ಮೂಲಕ ಪ್ರತಿಯೊಂದು ಗ್ರಾಮಪಂಚಾಯಿತಿ ಮಟ್ಟದಲ್ಲಿ ಒಬ್ಬರಿಗೆ ಉದ್ಯೋಗ ನೀಡಬೇಕೆಂಬ ಉದ್ದೇಶವನ್ನು ಹೊಂದಲಾಗಿದೆ ಎಂದರು.
ಚುನಾವಣೆಯಲ್ಲಿ ಸೋತಿರುವ ಬಗ್ಗೆ ಚಿಂತೆ ಇಲ್ಲ.ಇನ್ನೂ ಯುವಕನಿದ್ದೇನೆ, ಚುನಾವಣೆ ಹಲವಾರು ಪಾಠಗಳನ್ನು ಕಲಿಸಿದೆ. ಪದವೀಧರ ವೇದಿಕೆ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಸೇವೆಯ ಮೂಲಕ ಪದವೀಧರರ ಜೊತೆಗೆಯಲ್ಲಿರುತ್ತೇನೆಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ರವಿ, ಸಂದೇಶ್ ಸೇರಿದಂತೆ ಇತರರಿದ್ದರು