Tuesday, June 25, 2024

ಪ್ರಾಯೋಗಿಕ ಆವೃತ್ತಿ

ನಾಳೆ ಹಾಲಹಳ್ಳಿ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

ಸಂಘಟನೆ ಹಾಗೂ ಹೋರಾಟದ ಕಾರಣದಿಂದ ಹಾಲಹಳ್ಳಿಯ ಕೊಳಗೇರಿ ನಿವಾಸಿಗಳಿಗೆ ಕೊನೆಗೂ ಸುಸಜ್ಜಿತ ಮನೆ ಹಾಗೂ ಹಕ್ಕುಪತ್ರವನ್ನು ನಾಳೆ ಸರ್ಕಾರ ವಿತರಣೆ ಮಾಡಲಿದೆ.

ರಾಜೀವ್ ಆವಾಸ್ ಯೋಜನೆ (ಪ್ರಸ್ತುತ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ವಿಲೀನಗೊಂಡಿರುವ) ಅಡಿಯಲ್ಲಿ ಮಂಡ್ಯ ನಗರದ ಹಾಲಹಳ್ಳಿ ಸರ್ವೇ ನಂ.14 ಮತ್ತು 16 ರಲ್ಲಿ ನಿರ್ಮಿಸಿರುವ 632(ಜಿ+1) ಮಾದರಿಯ ಮನೆಗಳ ಉದ್ಘಾಟನೆ, ಹಂಚಿಕೆ ಮತ್ತು ಕೊಳಗೇರಿ ನಿವಾಸಿಗಳಿಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ವಿ.ಸೋಮಣ್ಣ ಅವರು ಜುಲೈ 02 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಹಾಲಹಳ್ಳಿ ಸ್ಲಂ ಬೋರ್ಡ್ ಬಡಾವಣೆಯಲ್ಲಿ ಹಕ್ಕು ಪತ್ರ ವಿತರಿಸಲಿದ್ದಾರೆ.

ಕಳೆದ ಒಂದು ದಶಕದಿಂದ ಕರ್ನಾಟಕ ಜನಶಕ್ತಿ ನಡೆಸಿದ ನಿರಂತರ ಹೋರಾಟದ ಫಲವಾಗಿ ಹಾಲಹಳ್ಳಿಯ ಕೊಳಗೇರಿಯಲ್ಲಿ ಮನೆಗಳ ನಿರ್ಮಾಣವಾಗಿ ಜನರು ವಸತಿ ಮತ್ತು ಹಕ್ಕುಪತ್ರ ಪಡೆಯುತ್ತಿದ್ದಾರೆ.

ಜಿ+3 ಇದ್ದ ನಿವೇಶನವನ್ನು ಕರ್ನಾಟಕ ಜನಶಕ್ತಿಯ ಹೋರಾಟದ ಮೂಲಕ ಮೊದಲಿದ್ದ ಜಿ+1 ಮಾಡಿಸಿ ಮನೆಗಳ ನಿರ್ಮಾಣ ಕಾರ್ಯ ಶುರುವಾಗಿ,ಐದು ವರ್ಷಗಳ ನಂತರ ಮುಕ್ತಾಯವಾಗಿದೆ.ನಾಳೆ ನಿವೇಶನ ಮತ್ತು ಹಕ್ಕು ಪತ್ರ ಪಡೆಯುವುದಕ್ಕೆ ಅಲ್ಲಿಯ ಜನ ಸಂಘಟಿತರಾಗಿ, ಒಗ್ಗೂಡಿ ಹೋರಾಟ ನಡೆಸಿದ್ದೆ ಕಾರಣವಾಗಿದೆ. ಮನೆ ನಿರ್ಮಾಣಗೊಂಡು ವರ್ಷವಾದರೂ ನಿವೇಶನ ಹಂಚಿಕೆ ಕಾರಣಾಂತರಗಳಿಂದ ಮುಂದೂಡಿಕೊಂಡೇ ಬರುತ್ತಿತ್ತು.ಈಗ ಕೊನೆಗೂ ನಾಳೆ ಇಲ್ಲಿಯ ಆರುನೂರಕ್ಕೂ ಹೆಚ್ಚು ಫಲಾನುಭವಿಗಳಿಗೆ ವಸತಿ ಮತ್ತು ಹಕ್ಕುಪತ್ರ ನೀಡುತ್ತಿರುವುದು ಸಂತಸದ ವಿಚಾರವಾಗಿದೆ.

ನಾಳೆ ಮಧ್ಯಾಹ್ನ 3ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಅಬಕಾರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ,ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ, ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷರು ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಹೇಶ್ ಕುಮಠಳ್ಳಿ ರವರು ಘನ ಉಪಸ್ಥಿತಿ ವಹಿಸಲಿದ್ದಾರೆ.

ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಶ್ರೀನಿವಾಸ್ ಅವರು ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮದಲ್ಲಿ ಮಂಡ್ಯ ಲೋಕಸಭಾ ಸದಸ್ಯರಾದ ಸುಮಲತಾ ಅಂಬರೀಶ್, ನಗರಸಭೆ ಅಧ್ಯಕ್ಷ ಹೆಚ್.ಎಸ್.ಮಂಜು,ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿ. ರಾಮ್ ಪ್ರಸಾಥ ಮನೋಹರ್, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್.ಜೆ ದಿವ್ಯಪ್ರಭು ಸೇರಿದಂತೆ ಇತರ ಮುಖ್ಯ ಅತಿಥಿಗಳು ಭಾಗವಹಿಸಲಿದ್ದಾರೆ‌.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!