ಮದ್ದೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯರಿಗೆ ‘ಮದ್ದಿನ ಮನೆ ನೆರವಿಗರ ಕೂಟ’ದ ವತಿಯಿಂದ ವಿಶ್ವ ವೈದ್ಯರ ದಿನಾಚರಣೆಯ ಅಂಗವಾಗಿ ಶುಭಾಶಯಗಳನ್ನು ಕೋರಲಾಯಿತು.
ಮದ್ದಿನಮನೆ ನೆರವಿಗರಕೂಟ ಮದ್ದೂರು ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ರಚಿಸಲಾಗಿರುವ ಸ್ವಯಂ ಸೇವಾ ತಂಡವಾಗಿದೆ.
ಈ ತಂಡದ ಸದಸ್ಯರಾದ ತೊರೆಶೆಟ್ಟಹಳ್ಳಿ ಪ್ರಸನ್ನಕುಮಾರ್, ನಳಿನಾ, ಹುಲಿಗೆರೆಪುರ ರವಿ, ದೇಶಹಳ್ಳಿ ಬೋರಣ್ಣ, ಕೆ ಟಿ ಶಿವಕುಮಾರ್, ರಮೇಶ್ ವಳಗೆರೆಹಳ್ಳಿ, ಕೊತ್ತನಹಳ್ಳಿ ಉಮೇಶ್, ಸೊ ಶಿ ಪ್ರಕಾಶ್, ಉಮಾಶಂಕರ್ ಈ ಸಂದರ್ಭದಲ್ಲಿ ಹಾಜರಿದ್ದರು.




