Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ವೃತ್ತಿ ಶಿಕ್ಷಣ ಕಲಿಕೋತ್ಸವ ವಸ್ತು ಪ್ರದರ್ಶನ

ಮಂಡ್ಯ ನಗರದ ರೋಟರಿ ಪ್ರೌಢಶಾಲೆಯ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಮಂಡ್ಯ, ಇವರ ಆಶ್ರಯದಲ್ಲಿ 2023ನೇ ಹಾಗೂ 24ನೇ ಸಾಲಿನ ಜಿಲ್ಲಾಮಟ್ಟದ ಶೈಕ್ಷಣಿಕ ಹಾಗೂ ವೃತ್ತಿ ಶಿಕ್ಷಣ ಕಲಿಕೋತ್ಸವ ವಸ್ತು ಪ್ರದರ್ಶನದ ಕಾರ್ಯಕ್ರಮವನ್ನು ಶಾಸಕ ಗಣಿಗ ರವಿಕುಮಾರ್ ಗೌಡ ಉದ್ಘಾಟಿಸಿದರು.

ನಂತರ ಮಾತನಾಡಿ ಅವರು, ‘ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣ ಎನ್ನುವುದು ಬಹು ಪ್ರಮುಖವಾದ ಅಂಶ. ವಿದ್ಯಾರ್ಥಿಗಳೆಲ್ಲರೂ ಸಹ ಕ್ರೀಡೆಗೆ ಒತ್ತು ನೀಡುವಂತೆ, ವಿದ್ಯಾಭ್ಯಾಸಕ್ಕೂ ಸಹ ಹೆಚ್ಚಿನ ಆದ್ಯತೆಯನ್ನು ನೀಡುವುದು ಬಹಳ ಮುಖ್ಯ. ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ಸಹಬಾಳ್ವೆ, ವೃತ್ತಿ ಕೌಶಲ್ಯ, ಸಮಾನತೆ, ಶ್ರಮಪಡಲು ಸಹಕಾರಿಯಾಗಿದೆ’ ಎಂದರು. ನಂತರ ಜಿಲ್ಲೆಯ ವಿವಿಧ ಭಾಗಗಳಿಂದ ಹೊಲಿಗೆ ಹಾಗೂ ತೋಟಗಾರಿಕೆ ವಿಭಾಗದಲ್ಲಿ ಸಿದ್ಧಪಡಿಸಿದ್ದ ವಸ್ತು ಪ್ರದರ್ಶನವನ್ನು ವೀಕ್ಷಿಸಿ, ವಿದ್ಯಾರ್ಥಿಗಳ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ. ನಾಗೇಶ್, ರೋಟರಿ ಸಂಸ್ಥೆಯ ಅಧ್ಯಕ್ಷ ಮಾದಪ್ಪ, ಶಿಕ್ಷಣಾಧಿಕಾರಿ ಚಂದ್ರಕಾಂತ, ಬಿಇಓ ಮಹದೇವ ಹಾಗೂ ಸೌಭಾಗ್ಯ, ವೃತ್ತಿ ಶಿಕ್ಷಣ ಸಂಘದ ಅಧ್ಯಕ್ಷ ಜಯಶಂಕರ್, ಕಾರ್ಯದರ್ಶಿಗಳಾದ ರಾಮಲಿಂಗೇಗೌಡ, ಎಸ್. ಸುರೇಶ್, ಸಿ.ಕೆ. ವಿಜಯ್, ಪ್ರಾರ್ಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಕೆ. ರವಿಶಂಕರ್, ಕಾರ್ಯದರ್ಶಿ ಚಿಕ್ಕೇಗೌಡ, ಎಸ್.ಸಿ/ಎಸ್.ಟಿ ಸಂಘದ ಅಧ್ಯಕ್ಷ ಶಂಕರ್, ವಿಷಯ ಪರಿವೀಕ್ಷಕರಾದ ಹೆಚ್.ಎಂ. ನಾಗೇಂದ್ರ ಮೂರ್ತಿ, ಸಿ.ಎಲ್. ನಂಜರಾಜು, ಬಿ.ಎನ್. ನಾಗರಾಜು, ರಾಜೇಂದ್ರ, ವೆಂಕಟೇಶ್, ಇನ್ನಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ