Saturday, May 18, 2024

ಪ್ರಾಯೋಗಿಕ ಆವೃತ್ತಿ

”ಗೃಹಜ್ಯೋತಿ” ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ : ಕಾಂಗ್ರೆಸ್ ಘೋಷಣೆ

ರಾಜ್ಯದ ಪ್ರತಿ ಮನೆಗೆ, ಪ್ರತಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಪಕ್ಷವು ತನ್ನ ಮೊದಲ ಭರವಸೆಯನ್ನು ರಾಜ್ಯದ ಜನತೆಗೆ ತಿಳಿಸಿದೆ.

ಕಾಂಗ್ರೆಸ್ ಗ್ಯಾರಂಟಿ ನಂ.1 ‘ಗೃಹಜ್ಯೋತಿ’ ಯೋಜನೆ! ಬಿಜೆಪಿ ಸರ್ಕಾರದ ದುರಾಡಳಿತದಿಂದ, ಬೆಲೆಯೇರಿಕೆಯಿಂದ ದುಬಾರಿಯಾಗಿರುವ ಜನರ ಜೀವನ ನಿರ್ವಹಣೆಗೆ ಪರಿಹಾರವಾಗಿ ಕಾಂಗ್ರೆಸ್ ಪಕ್ಷವು ಮೊದಲ ಭರವಸೆಯನ್ನು ಇಂದು ಘೋಷಿಸುತ್ತಿದೆ. ಪ್ರತಿ ಮನೆಗೆ, ಪ್ರತಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ – ಇದು ಕಾಂಗ್ರೆಸ್ ಭರವಸೆ ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ.

ಬೆಲೆಯೇರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ನೆಮ್ಮದಿ ನೀಡುವ ಯೋಜನೆಯನ್ನು ನಾವು ಘೋಷಿಸುತ್ತಿದ್ದೇವೆ. ರಾಜ್ಯದ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ಒದಗಿಸುವ ‘ಗೃಹಜ್ಯೋತಿ’ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲಿದೆ. ನಿಮ್ಮ ವಿದ್ಯುತ್ ಬಿಲ್ ಇನ್ಮುಂದೆ ಕಾಂಗ್ರೆಸ್ ಜವಾಬ್ದಾರಿ. ಇದು ಕಾಂಗ್ರೆಸ್ ಗ್ಯಾರಂಟಿ ಎಂದು ಘೋಷಣೆ ಮಾಡಿದೆ.

ಕಾಂಗ್ರೆಸ್ ಗ್ಯಾರಂಟಿ ನಂ.1 ‘ಗೃಹಜ್ಯೋತಿ’ ಯೋಜನೆ! ಬಿಜೆಪಿ ಸರ್ಕಾರದ ದುರಾಡಳಿತದಿಂದ, ಬೆಲೆಯೇರಿಕೆಯಿಂದ ದುಬಾರಿಯಾಗಿರುವ ಜನರ ಜೀವನ ನಿರ್ವಹಣೆಗೆ ಪರಿಹಾರವಾಗಿ ಕಾಂಗ್ರೆಸ್ ಪಕ್ಷವು ಮೊದಲ ಭರವಸೆಯನ್ನು ಇಂದು ಘೋಷಿಸುತ್ತಿದೆ. ಪ್ರತಿ ಮನೆಗೆ, ಪ್ರತಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ – ಇದು ಕಾಂಗ್ರೆಸ್ ಭರವಸೆ ಎಂದು ಪಕ್ಷವು ಭರವಸೆ ನೀಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!