ಎಸ್.ಡಿ. ಜಯರಾಮ್ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಮಾ.25ರಂದು ಸಂಜೆ 4 ಗಂಟೆಗೆ ಮಂಡ್ಯ ತಾಲ್ಲೂಕಿನ ಬಸರಾಳು ಗ್ರಾಮದ ಕಾಲಭೈರವೇಶ್ವರ ದೇವಸ್ಥಾನದ ಆವರಣದಲ್ಲಿ ಬಸರಾಳು ಯುಗಾದಿ ಉತ್ಸವ – ಸಂಗೀತ ರಸ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿಜೆಪಿ ಮುಖಂಡ ಅಶೋಕ್ ಜಯರಾಂ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಜಿಲ್ಲೆಯ ಜನಪರ ರಾಜಕಾರಣಿ ಎಸ್.ಡಿ. ಜಯರಾಮ್ – ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ವಾಣಿ ಜಯರಾಮ್ ರವರ ನನಪಿನಲ್ಲಿ ‘ಬಸರಾಳು ಯುಗಾದಿ ಉತ್ಸವ ಸಂಗೀತ ರಸ ಸಂಜೆ ಕಾರ್ಯಕ್ರಮ’ ಹಾಗೂ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಗುರುರಾಜ್, ಸ ರಿ ಗ ಮ ಪ ಕಾರ್ಯಕ್ರಮದ ಪ್ರತಿಭಾವಂತ ಗಾಯಕರಾದ ವೆಂಕಟೇಶ್, ಸುಬ್ರಮಣ್ಯ, ಶಶಿಕಲಾ, ಅಂಕಿತ ಕುಂಡು ಮತ್ತು ಮಂಡ್ಯದ ಜೂನಿಯರ್ ಜೇಸುದಾಸ್ ಡಾ.ಮಾದೇಶ್ ಗಾಯನ ಮಾಡುವರು. ದಿವ್ಯಾ ಆಲೂರು ನಿರೂಪಣೆ ಮಾಡುವರು ಎಂದರು.
ಇದೇ ಸಂದರ್ಭದಲ್ಲಿ ಬಸರಾಳು ಹೋಬಳಿಯ 8 ಗ್ರಾ.ಪಂ.ಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರನ್ನು ಸನ್ಮಾನಿಸಲಾಗುವುದು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪ್ರತಿಭಾವಂತ ಸಾಧಕರನ್ನ ಅಭಿನಂದಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಡಾ.ಮಾದೇಶ್, ಕಾರಸವಾಡಿ ಮಹದೇವ, ಪ್ರತಿಭಾಂಜಲಿ ಡೇವಿಡ್ ಮತ್ತಿತರರು ಉಪಸ್ಥಿತರಿದ್ದರು.




