Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಾಧಕ-ಬಾಧಕ ನೋಡಿಯೇ ಮಂಡ್ಯದಲ್ಲಿ ರಾಮಚಂದ್ರು ಅಭ್ಯರ್ಥಿ ಮಾಡಿದೆ : ಹೆಚ್.ಡಿ.ಕೆ

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಸಾಧಕ- ಬಾಧಕಗಳನ್ನು ಚರ್ಚಿಸಿಯೇ ಮನ್ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರು ಅವರನ್ನು ಪಕ್ಷ ಅಭ್ಯರ್ಥಿ ಮಾಡಿ, ಬಿ. ಫಾರಂ ನೀಡಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ. ಕುಮಾರಸ್ವಾಮಿ ಸಮರ್ಥಿಸಿಕೊಂಡರು.

ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡ ಗುರುಚರಣ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಎಂ. ಶ್ರೀನಿವಾಸ್ ಅವರ ಹೆಸರನ್ನು ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವ ಸಂದರ್ಭದಲ್ಲಿ ಮಾಡಿದ್ದು ನಿಜ. ಎಂ. ಶ್ರೀನಿವಾಸ್ ರವರಿಗೆ ಅವಮಾನ ಆಗಬಾರದೆಂಬ ಹಿನ್ನೆಲೆಯಲ್ಲಿ ಅವರ ಹೆಸರನ್ನು ಘೋಷಣೆ ಮಾಡಲಾಗಿತ್ತು‌.ಆದರೆ ಅವರ ವಯಸ್ಸಿನ ಹಿನ್ನಲೆಯಲ್ಲಿ ಶ್ರೀನಿವಾಸ್ ಅವರಿಗೆ ನಿಮ್ಮ ಕೈಲಿ ಆಗಲ್ಲ. ನೀವೆಲ್ಲಾ ಸೇರಿ ಒಮ್ಮತದ ಅಭ್ಯರ್ಥಿಯನ್ನು ತೀರ್ಮಾನಿಸಿ ಕಣಕ್ಕಿಳಿಸಿ ಎಂದು ಹೇಳಿದ್ದೆ. ಆದರೆ ಅವರು ಹಾಗೆ ಮಾಡಲಿಲ್ಲ. ರಾಮಚಂದ್ರು ಅವರಿಗೆ ಟಿಕೆಟ್ ಘೋಷಣೆಯಾದ ನಂತರ ಉಳಿದ ಆಕಾಂಕ್ಷಿಗಳೆಲ್ಲ ಕೈ ಕೈ ಹಿಡಿದುಕೊಂಡು ನಿಂತಿರುವ ಫೋಟೋ ನೋಡಿದ್ದೇನೆ. ಅವರು ನಿನ್ನೆ ಮಾಡಿದ ಕೆಲಸವನ್ನು ಬಹಳ ಹಿಂದೆಯೇ ಮಾಡಿ ಒಮ್ಮತದ ಅಭ್ಯರ್ಥಿಯನ್ನು ಶ್ರೀನಿವಾಸ್ ಅವರು ಸೂಚಿಸಿದ್ದರೆ ಅವರನ್ನೇ ಅಭ್ಯರ್ಥಿ ಮಾಡುತ್ತಿದ್ದೆ ಎಂದರು.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಯಾರನ್ನು ಅಭ್ಯರ್ಥಿ ಮಾಡಿದರೆ ಸೂಕ್ತ ಎಂಬುದನ್ನು ಜಿಲ್ಲೆಯ ನಾಯಕರಿಂದ ಮಾಹಿತಿ ಪಡೆದು ಮಾಡಲಾಗಿದೆ. ಎಲ್ಲಾ ರೀತಿಯ ಸಾಧಕ- ಬಾಧಕಗಳನ್ನು ತೀರ್ಮಾನಿಸಿ ಮಂಡ್ಯದಲ್ಲಿ ರಾಮಚಂದ್ರು ಅವರಿಗೆ ಪಕ್ಷ ಬಿ. ಫಾರಂ ನೀಡಿದೆ. ಯಾರೂ ಕೂಡ ಪಕ್ಷದ ನಿರ್ಣಯದ ವಿರುದ್ಧ ನಡೆದುಕೊಳ್ಳಬಾರದು.ಎಂ.ಶ್ರೀನಿವಾಸ್ ಅವರನ್ನು ಮೂರು ಬಾರಿ ಶಾಸಕರನ್ನಾಗಿ ಮಾಡಿ ಪಕ್ಷ ಎಲ್ಲಾ ರೀತಿಯ ಸ್ಥಾನಮಾನ ನೀಡಿದ್ದು,ಅವರು ಪಕ್ಷದ ವಿರುದ್ಧ ಹೋಗಬಾರದು ಎಂದು ಮನವಿ ಮಾಡಿದರು.

ನಾನು ರಾಜ್ಯದ ವಿವಿಧ ಕ್ಷೇತ್ರಗಳಿಗೆ ಪ್ರಚಾರಕ್ಕೆ ಇಂದು ತೆರಳಬೇಕಿದ್ದು, ನಾನೇ ಬಂಡಾಯ ಶಮನ ಮಾಡುತ್ತೇನೆ. ಬಂಡಾಯ ವಾಗಿ ಸ್ವಾಭಿಮಾನದ ಅಭ್ಯರ್ಥಿಯನ್ನು ಹಾಕುತ್ತೇನೆ ಎಂದು ಆ ಕ್ಷಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಗೊಂದಲವನ್ನು ಸರಿಪಡಿಸಿ ಪಕ್ಷದ ಅಭ್ಯರ್ಥಿಯ ಕೆಲಸ ಮಾಡುವಂತೆ ಅವರ ಮನವೊಲಿಸುತ್ತೇನೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!