ಧನಗೂರು ಷಡಕ್ಷರ ಪೀಠ, ಮಳವಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಸಂಸ ಥಿಯೇಟರ್ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಹಳಗನ್ನಡ ಕಾವ್ಯ ಕಮ್ಮಟ ಕಾರ್ಯಕ್ರಮವನ್ನು ನವೆಂಬರ್ ೦೯, ೧೦ರಂದು ಮಳವಳ್ಳಿ ತಾಲೂಕಿನ ಡಿ.ಹಲಸಹಳ್ಳಿ ಗ್ರಾಮದ ಷಡಕ್ಷರಿ ಗವಿಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಧನಗೂರು ಷಡಕ್ಷರ ಪೀಠದ ಅಧ್ಯಕ್ಷ ಡಾ.ಕೂಡ್ಲೂರು ವೆಂಕಟಪ್ಪ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಉದ್ಘಾಟನೆಯು ಅಂದು ಬೆಳಿಗ್ಗೆ ೧೦.೩೦ಕ್ಕೆ ಕನಕಪುರದ ದೇಗುಲ ಮಠದ ಚನ್ನಬಸವ ಸ್ವಾಮೀಜಿ, ಡಿ.ಹಲಸಹಳ್ಳಿಯ ಷಡಕ್ಷರಿ ಗವಿಮಠದ ಷಡಕ್ಷರಿ ಸ್ವಾಮೀಜಿ, ಧನಗೂರು ಷಡಕ್ಷರ ಮಠದ ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ನಡೆಯಲಿದೆ ಎಂದು ಹೇಳಿದರು.
ಧನಗೂಡು ಷಡಕ್ಷರ ಪೀಠದ ಅಧ್ಯಕ್ಷ ಡಾ.ಕೂಡ್ಲೂರು ವೆಂಕಟಪ್ಪ ಅಧ್ಯಕ್ಷತೆಯಲ್ಲಿ ಷಡಕ್ಷರ ಪೀಠವನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ಗೌಡ ಉದ್ಘಾಟಿಸುವರು, ಮುಕ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಶಿಕ್ಷಕ ಡಿ.ರಾಮು, ಮುಖ್ಯ ಶಿಕ್ಷಕಿ ಜಿ.ಬಿ.ಶೈಲಜ, ಅಂತರಾಷ್ಟಿೀಯ ಜಾನಪದ ಕಲಾವಿದ ಸಿ.ಎಂ.ನರಸಿಂಹಮೂರ್ತಿ, ಸಂಸ ಥಿಯೇಟರ್ನ ಗೌರವಾಧ್ಯಕ್ಷ ಜಯರಾಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಅಂದು ಮಧ್ಯಾಹ್ನ ೨.೧೫ಕ್ಕೆ ಭಾರತಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ಅಧ್ಯಕ್ಷತೆಯಲ್ಲಿ ಮೊದಲ ಗೋಷ್ಠಿ ನಡೆಯಲಿದ್ದು, ಷಡಕ್ಷರ ಕವಿಯ ಕವಿ-ಕಾವ್ಯ-ಪರಿಚರ ಕುರಿತು ಗೋಷ್ಠಿ ನಡೆಯಲಿದ್ದು, ಷಡಕ್ಷರ ಕವಿಯ ಪರಿಚಯವನ್ನು ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಹಾಯಕರ ನಿರ್ದೇಶಕ ಎನ್.ಆರ್.ವೇಣುಗೋಪಾಲ್, ರಾಜಶೇಕರ ವಿಳಾಸಂ ಅನ್ನು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಡಿ.ದೊಡ್ಡಲಿಂಗೇಗೌಡ, ಶಬರ ಶಂಕರ ವಿಳಾಸಂ ಅನ್ನು ವಿಶ್ರಾಂತ ಪ್ರಾಂಶುಪಾಲ ಚಂದ್ರಶೇಖರ ನಾದೂರು, ವೃಷಭೇಂದ್ರ ವಿಜಯಂ ಅನ್ನು ಕನ್ನಡ ಸಹಾಯಕ ಪ್ರಾಧ್ಯಾಪಕಿ ಮಮತಾ ನಾಗ್ ಮಂಡನೆ ಮಾಡುವರು ಎಂದು ತಿಳಿಸಿದರು.
ಸಂಜೆ.೬ಕ್ಕೆ ಶಿಬಿರಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಧನಗೂರು ಷಡಕ್ಷರ ಪೀಠದ ಸದಸ್ಯ ಕೆ.ಪುಟ್ಟಸ್ವಾಮಿ ನಡೆಸಿಕೊಡಲಿದ್ದಾರೆ. ಸಂಜೆ ೭ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೮ಕ್ಕೆ ದೃಶ್ಯ ಮೇಲುಕೋಟೆ ಸುಗ್ಗಿ ರಂಗ ಅಭಿನಯಿಸುವ ಕರ್ಣಭಾರ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ನ. 10ರ ಬೆಳಿಗ್ಗೆ 6ಕ್ಕೆ ಯೋಗ ಗುರು ಎಂ.ಮಲ್ಲಿಕಾರ್ಜುನ ಸ್ವಾಮಿ ಅವರಿಂದ ಯೋಗ ಉಪನ್ಯಾಸ ನಡೆಯಲಿದ್ದು, ಬೆಳಿಗ್ಗೆ 7ಕ್ಕೆ ಷಡಕ್ಷರ ಕವಿಯ ಹುಟ್ಟೂರು, ಧನಗೂರಿನ ಜನ್ಮಸ್ಥಳ ಹಾಗೂ ಷಡಕ್ಷರ ಮಂಟಪ ವೀಕ್ಷಣೆ ಕಾರ್ಯಕ್ರಮ ನಡೆಯಲಿದೆ ಎಂದರು.
ಬೆಳಿಗ್ಗೆ 9.45 ಕ್ಕೆ ಭಾರತಿ ಕಾಲೇಜಿನ ಪ್ರಿನ್ಸಿಪಾಲರು ಹಾಗೂ ಧನಗೂರು ಷಡಕ್ಷರ ಪೀಠದ ಸದಸ್ಯರಾದ ಡಾ.ಎಂ.ಎಸ್. ಮಹದೇವಸ್ವಾಮಿ ಅದ್ಯಕ್ಷತೆಯಲ್ಲಿ ಶಿಬಿರಾರ್ಥಿಗಳಿಂದ ರಾಜಶೇಖರ ವಿಳಾಸಂ ಕೃತಿಯ ಆಯ್ದ ಪದ್ಯಗಳ, ಓದು, ಅರ್ಥ ವಿವರಣೆ, ಕಥಾ ನಿರೂಪಣೆ ಮೂರನೇ ಗೋಷ್ಠಿ ನಡೆಯಲಿದೆ. ಬೆಳಿಗ್ಗೆ 11:30ಕ್ಕೆ ನಂಜನಗೂಡಿನ ಸ.ಪ್ರದ.ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಜಯಶಂಕರ್ ಹಲಗೂರು ಅಧ್ಯಕ್ಷತೆಯಲ್ಲಿ ಶಿಬಿರಾರ್ಥಿಗಳಿಂದ ಶಬರ ಶಂಕರ ವಿಳಾಸಂ ಕೃತಿಯ ಆಯ್ದ ಪದ್ಯಗಳ, ಓದು, ಅರ್ಥ ವಿವರಣೆ, ಕಥಾ ನಿರೂಪಣೆ ವಿಷಯದ ಕುರಿತು ನಾಲ್ಕನೇ ಗೋಷ್ಠಿ ನಡೆಯಲಿದೆ ಎಂದು ವಿವರಿಸಿದರು.
ಮಧ್ಯಾಹ್ನ 2-45ಕ್ಕೆ ಡಿ.ಹಲಸಹಳ್ಳಿಯ ಷಡಕ್ಷರಿ ಗವಿಮಠದ ಷಡಕ್ಷರಿ ಸ್ವಾಮೀಜಿ, ಧನಗೂರು ಷಡಕ್ಷರ ಮಠದ ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಹಾಗೂ ಧನಗೂರು ಷಡಕ್ಷರ ಪೀಠದ ಅಧ್ಯಕ್ಷ ಡಾ.ಕೊಣ್ಣೂರು ವೆಂಕಟಪ್ಪ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಬಿ.ಎಂ.ಶ್ರೀ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಶಾಂತರಾಜು ಸಮಾರೋಪ ನುಡಿಗಳನ್ನಾಡುವರು ಎಂದರು.
ಕಾರ್ಯಕ್ರಮದಲ್ಲಿ ಧನಗೂರು ಷಡಕ್ಷರ ಪೀಠದ ಉಪಾಧ್ಯಕ್ಷ ಕೆ. ಕೆಂಡಗಯ್ಯ ಪ್ರಮಾಣ ಪತ್ರ ವಿತರಣೆ ಮಾಡಲಿದ್ದು, ಮಂಡ್ಯ ಜಿಲ್ಲಾ ಕಸಾಪ ಕಾರ್ಯದರ್ಶಿ ಡಾ.ಹುಸ್ಕೂರು ಕೃಷ್ಣೆೀಗೌಡ, ಡಿ.ಹಲಸಹಳ್ಳಿ ಗ್ರಾ.ಪಂ ಅಧ್ಯಕ್ಷೆ ಕೆ. ಸುಜಾತ ಪತ್ರಕರ್ತ ಪರಶಿವ ಧನಗೂರು ಧನಗೂರು ಷಡಕ್ಷರ ಪೀಠದ ಸದಸ್ಯ ಚಿಕ್ಕಯ್ಯ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.
ಸಂಜೆ ೪.೪೫ಕ್ಕೆ ಕವಿಗೋಷ್ಠಿ ನಡೆಯಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಚೇತನ್ಕುಮಾರ್ ಉದ್ಘಾಟಿಸುವರು, ಕನ್ನಡ ಪ್ರಾಧ್ಯಾಪಕ ಡಾ.ಎನ್.ಎಸ್.ಶಂಕರೇಗೌಡ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಸಿದ್ದನಾಗ್ ಸಂಸ್ಥೆಗಳ ಲಿಂಗೇಶ್ ಹೆಚ್.ಎಸ್, ಕಸಬಾ ಹೋಬಳಿ ಕಸಾಪ ಅಧ್ಯಕ್ಷ ಕೃಷ್ಣ ಅಗಸನಪುರ ಭಾಗವಹಿಸಲಿದ್ದು, ಹಲವು ಕವಿಗಳು ಉಪಸ್ಥಿತರಿರುವರು ಎಂದರು.
ಗೋಷ್ಠಿಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ಗೌಡ, ಉಮೇಶ್, ರಾಮಕೃಷ್ಣ, ಚೇತನ್ಕುಮಾರ್, ಸುರೇಶ್ ಉಪಸ್ಥಿತರಿದ್ದರು




