Friday, September 13, 2024

ಪ್ರಾಯೋಗಿಕ ಆವೃತ್ತಿ

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಕದಲೂರು ಉದಯ್

ಶುದ್ಧ ಕುಡಿಯುವ ನೀರು, ಶುದ್ದ ಗಾಳಿ,ಶುದ್ಧ ಊಟ ಇದ್ದಾಗ ಮಾತ್ರ ಮನುಷ್ಯ ಆರೋಗ್ಯವಾಗಿರಲು ಸಾಧ್ಯ ಎಂದು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕದಲೂರು ಉದಯ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮದ್ದೂರು ತಾಲ್ಲೂಕಿನ ಕೆಸ್ತೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮಲ್ಲನಾಯಕನಹಳ್ಳಿ ಗ್ರಾಮದಲ್ಲಿ ತಮ್ಮ ಟ್ರಸ್ಟ್‌ ವತಿಯಿಂದ ನಿರ್ಮಾಣ ಮಾಡಲಾದ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

ತಾಲೂಕಿನ ಸುತ್ತ ನದಿಗಳು ಹರಿಯುತ್ತಿದ್ದರೂ ಶುಧ್ಧ ಕುಡಿಯುವ ನೀರಿನ ಅಭಾವ ಇರುವುದು ವಿಷಾದನೀಯ ಸಂಗತಿ.

ಈ ಭಾಗದಲ್ಲಿ ಎಲ್ಲೇ ಬೋರ್ವೆಲ್ ತೆಗೆದರೂ ಬರೀ ಪ್ಲೋರೈಡ್ ನೀರು ಬರುತ್ತಿದೆಯೆಂದೂ ಸಾಕಷ್ಟು ಮಹಿಳೆಯರು ಗ್ರಾಮಕ್ಕೆ ಬಂದಾಗ ನನಗೆ ಅಹವಾಲು ನೀಡಿದ್ದರು.ಅಲ್ಲದೆ ನೀರು ತರಲು ಸಾಕಷ್ಟು ದೂರಕ್ಕೆ ಹೋಗಿ ನೀರು ತರುವ ಅನಿವಾರ್ಯತೆ ಇರುವುದು ಕಂಡು ಬಂದಿತ್ತು.ಅಲ್ಲದೆ ಈ ನೀರು ಕುಡಿಯುವುದರಿಂದ ಮೂಳೆ ಸವೆತ ಹಾಗೂ ವಿವಿಧ ಕಾಯಿಲೆಗಳು ಬರುತ್ತಿರುವುದರ ಬಗ್ಗೆ ಮಾಹಿತಿ ನೀಡಿದ್ದರು.

ಹೀಗಾಗಿ ನಾನು ಉತ್ತಮವಾದ ಜಾಗದಲ್ಲಿ ಬೋರ್ವೆಲ್ ಕೊರೆಯಿಸಿ ಆ ನೀರನ್ನು ಪರೀಕ್ಷೆ ಮಾಡಿಸಿ, ಆ ನೀರು ಕುಡಿಯಲು ಯೋಗ್ಯವಾಗಿದೆ ಎಂಬ ವರದಿಯ ಮೇರೆಗೆ ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ತೆರೆಯಲಾಗಿದೆ ಎಂದರು.

ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ್ದರಿಂದ ಸಂತಸ ವಾಗಿದ್ದು, ಈ ಭಾಗದ ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಇನ್ನು ಹಲವು ಗ್ರಾಮಗಳಲ್ಲಿ ನೀರಿನ ಘಟಕ ನಿರ್ಮಿಸುವಂತೆ ಬೇಡಿಕೆ ಬಂದಿದ್ದು ಮುಂದಿನ ದಿನಗಳಲ್ಲಿ ಅದರ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು, ಯುವಕರು ಬೃಹತ್ ಹಾರ ಹಾಕಿ ಉದಯ್ ಅವರನ್ನು ಅಭಿನಂದಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!