ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಕ್ಷೇತ್ರದ ವೀರ ಆಂಜನೇಯ ದೇವಸ್ಥಾನದಲ್ಲಿ ಅರ್ಚಕರಾದ ಚಂದು ಭಾರದ್ವಾಜ್ ನೇತೃತ್ವದಲ್ಲಿ ಒಂಬತ್ತನೇ ವರ್ಷದ ಹನುಮ ಜಯಂತಿ ವಿಜೃಂಭಣೆಯಿಂದ ನಡೆಯಿತು.
ದೇವಾಲಯದಲ್ಲಿ ಹಸಿರು ತೋರಣವನ್ನು ಕಟ್ಟಿ, ವಿದ್ಯುತ್ ದ್ವೀಪಗಳ ಅಲಂಕಾರ ಮಾಡಲಾಗಿತ್ತು ವಿಶೇಷವಾಗಿ ಆಂಜನೇಯ ಮೂರ್ತಿಗೆ ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿತ್ತು, ಹಾಗೆಯೇ ಕಡಲೆಕಾಯಿ ಹಾರ ಗಮನ ಸೆಳೆಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಅರ್ಚಕರಾದ ಚಂದು ಭಾರದ್ವಾಜ್ ಅವರು, ವೈರಮುಡಿ, ರಾಜಮುಡಿಗೆ ಮೊದಲ ಪೂಜೆ ವೀರ ಆಂಜನೇಯ ದೇವಾಲಯದಲ್ಲಿ ನೆರವೇರಲಿದೆ, ಕಳೆದ 9 ವರ್ಷಗಳಿಂದ ಹನುಮ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ, ಮೂರ್ತಿಗೆ ಪಂಚಾಮೃತ ಅಭಿಷೇಕ, ಲೋಕದ ಕಲ್ಯಾಣಕ್ಕಾಗಿ ಶ್ರೀರಾಮ ತಾರಕ ಹೋಮ ಮಾಡಲಾಗಿದೆ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದು, ಭಕ್ತಿ ಗೀತೆಗಳ ರಸದ ಸಂಜೆ ಏರ್ಪಡಿಸಲಾಗಿದೆ, ಭಕ್ತರು ಸಂಕಲ್ಪ ಮಾಡಿಕೊಂಡರೆ ತಕ್ಷಣ ನೆರವೇರಲಿದೆ ಎಂದರು.
ಇದೇ ಸಂದರ್ಭದಲ್ಲಿ ವಿವೇಕ್, ಕೀರ್ತಿ ಕುಮಾರ್, ಚೇತನ್ ಕಶ್ಯಪ್, ದೇವರಹಳ್ಳಿ ಶಿವು ಅವರು ಭಾಗವಹಿಸಿದ್ದರು.




