Friday, November 20, 2026

ಪ್ರಾಯೋಗಿಕ ಆವೃತ್ತಿ

ಹನುಮಂತರಾಯಸ್ವಾಮಿ ದೇವಾಲಯ ಕಳಸ ಪ್ರತಿಷ್ಠಾಪನೆ : ಮಹಾಲಿಂಗೇಗೌಡ

ಮಂಡ್ಯ ತಾಲ್ಲೂಕಿನ ಮುದ್ದನಘಟ್ಟ ಗ್ರಾಮದಲ್ಲಿ ಪುರಾತನ ಶ್ರೀಬಾಲದಂಡೆ ಹನುಮಂತರಾಯಸ್ವಾಮಿ ದೇವಾಲಯವನ್ನು ನೂತನವಾಗಿ ಜೀರ್ಣೋದ್ಧಾರ ಮಾಡಿದ್ದು, ನ.೨೮ ರಿಂದ ೩೦ವರೆಗೆ ವಿವಿಧ ಧಾರ್ಮಿಕ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಆಂಜನೇಯಸ್ವಾಮಿ ದೇವಾಲಯ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಈ ದೇವಾಲಯವು ಹೊಯ್ಸಳ ದೊರೆ ೨ನೇ ವೀರ ನರಸಿಂಹ ಅವರ ದಂಡನಾಯಕ ಹರಿಹರ ಅವರಿಂದ ಸ್ಥಾಪಿತವಾಗಿತ್ತು ಎಂಬುದು ಗ್ರಾಮದ ಸುತ್ತಮುತ್ತಲ ಜಾನಪದರ ಹಾಡುಗಳಲ್ಲಿ ತಿಳಿಯುತ್ತದೆ ಎಂದರು.

ನ.೨೮ರಿಂದ ದೇವಾಲಯದಲ್ಲಿ ಬಿಂಬಪ್ರಾಣ ಪ್ರತಿಷ್ಠಾಪನೆ, ವಿಮಾನಗೋಪುರ, ಕಳಸ ಪ್ರತಿಷ್ಠಾಪನೆ, ಕುಂಭಾಭಿಷೇಕ, ಸಂಪ್ರೋಷಣಾ ಮಹೋತ್ಸವ ಸೇರಿದಂತೆ ಹಲವು ಕಾರ್‍ಯಕ್ರಮಗಳನ್ನು ಆಯೋಜಿಸಲಾಗಿದೆ. ನ.೩೦ರಂದು ಮಧ್ಯಾಹ್ನ ೧ ಗಂಟೆಗೆ ಆದಿಚುಂಚನಗಿರಿ ಪೀಠಾಧಿಪತಿ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರ ದಿವ್ಯಸಾನಿಧ್ಯದಲ್ಲಿ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ, ಲೋಕಾರ್ಪಣೆ ಮಾಡಲಿದ್ದಾರೆ. ನಂತರ ಕಾರ್‍ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ಹೇಳಿದರು.

ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಭಾನುಪ್ರಕಾಶ್ ಶರ್ಮ, ಮೇಲುಕೋಟೆ ಚಲುವರಾಯಸ್ವಾಮಿ ದೇವಾಲಯದ ಸ್ಥಾನಿಕ ಶ್ರೀಗಳಾದ ಶ್ರೀನಿವಾಸ ನರಸಿಂಹನ್ ಗುರೂಜಿ ಹಾಗೂ ಪಾಂಚರಾತ್ರ ಆಗಮ ಪುರೋಹಿತರಾದ ಕೃಷ್ಣಮೂರ್ತಿ ತಂಡದಿಂದ ಪೂಜಾ ವಿಧಿವಿಧಾನಗಳು ನೆರವೇರಲಿವೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ ಸಾಂಸ್ಕೃತಿಕ ಕಾರ್‍ಯಕ್ರಮ, ಶಿವಾರ ಉಮೇಶ್ ತಂಡದಿಂದ ಗೀತಗಾಯನ ಕಾರ್‍ಯಕ್ರಮಗಳು ನೆರವೇರಲಿದೆ. ಇದೇ ವೇಳೆ ಕೆಂಪೇಗೌಡ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ದೇವಾಲಯದ ಕಾರ್‍ಯಕ್ರಮಕ್ಕಾಗಮಿಸುವ ಎಲ್ಲರಿಗೂ ಅನ್ನಸಂತರ್ಪನೆ ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಗ್ರಾಮದ ಪರಮೇಶ್ವರ್, ಶಶಿಕುಮಾರ್, ತೇಜಸ್‌ಗೌಡ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ