Friday, November 20, 2026

ಪ್ರಾಯೋಗಿಕ ಆವೃತ್ತಿ

‘ಕೆಪಿಎಸ್ ಮ್ಯಾಗ್ನೆಟ್’ ಯೋಜನೆ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ : ಸ್ವಾತಿ

ರಾಜ್ಯ ಸರಕಾರವು `ಕೆಪಿಎಸ್ ಮ್ಯಾಗ್ನೆಟ್’ ಯೋಜನೆಯ ಮೂಲಕ ರಾಜ್ಯ ೪೦,೦೦೦ ಸರಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದ್ದು, ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಡ್ಸ್ ಆರ್ಗನೈಜೇಷನ್(ಎಐಡಿಎಸ್‌ಓ) ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತದೆ ಎಂದು ಎಐಡಿಎಸ್‌ಓ ರಾಜ್ಯ ಕಾರ್‍ಯದರ್ಶಿ ಸ್ವಾತಿ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಈ`ಕೆಪಿಎಸ್ ಮ್ಯಾಗ್ನೆಟ್’ ಯೋಜನೆಯು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿಯುವ ಯೋಜನೆಯಾಗಿದೆ. ಈ ಮೂಲಕ ಬಡವರ್ಗದ ಶಿಕ್ಷಣ ಹಕ್ಕಿನ ಮೇಲೆ ಪ್ರಹಾರ ನಡೆಸಲಾಗುತ್ತಿದೆ ಎಂದು ಖಂಡಿಸಿದರು.

ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್) ಮೂಲಕ ಹೆಚ್ಚಿನ ಶಿಕ್ಷಣಕ್ಕೆ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಆದರೆ `ಕೆಪಿಎಸ್ ಮ್ಯಾಗ್ನೆಟ್’ ಯೋಜನೆಯನ್ನು ತಂದು ಪ್ರತಿ ಗ್ರಾಮ ಪಂಚಾಯಿತಿಯ ೧ರಿಂದ ೬ ಕಿ.ಮೀ ವ್ಯಾಪ್ತಿಯಲ್ಲಿನ ಶಾಲೆಗಳನ್ನು ವಿಲೀನಗೊಳಿಸುವುದು ಬಡವರನ್ನು ಶಿಕ್ಷಣದಿಂದ ವಿಮುಖ ಮಾಡಿದಂತಾಗುತ್ತದೆ. ಗ್ರಾ.ಪಂ ಒಂದರಂತೆ ೬೦೦೦ `ಕೆಪಿಎಸ್ ಮ್ಯಾಗ್ನೆಟ್” ಶಾಲೆಗಳನ್ನು ತೆರೆಯುವ ಗುರಿ ನಿಗದಿಪಡಿಸಿದೆ. ಮೊದಲ ಹಂತದಲ್ಲಿ ರಾಜ್ಯದ ೮೦೦ ಶಾಲೆಗಳನ್ನು `ಕೆಪಿಎಸ್ ಮ್ಯಾಗ್ನೆಟ್’ ಶಾಲೆಗಳೆಂದು ಗುರುತಿಸಿ ಇದೇ ಅ.೧೫ರಂದು ಸುತ್ತೇಲೆ ಹೊರಡಿಸಿದೆ ಎಂದು ಹೇಳಿದರು.

ಚನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮದ ಶಾಲೆಯನ್ನು`ಕೆಪಿಎಸ್ ಮ್ಯಾಗ್ನೆಟ್’ ಶಾಲೆಯೆಂದು ಗುರುತಿಸಿ, ೬ ಕಿ.ಮೀ ವ್ಯಾಪ್ತಿಯ ಶಾಲೆಗಳನ್ನು ತುರ್ತಾಗಿ ವಿಲೀನಗೊಳಿಸಲು ಅ.೨೩ರಂದು ಆದೇಶ ನೀಡಲಾಗಿದೆ. ಈ ರೀತಿ ಮುಂದುವರೆದರೆ ರಾಜ್ಯದ ೪೦ ಸಾವಿರಕ್ಕೂ ಅದಿಕ ಶಾಲೆಗಳು ವಿಲೀನಗೊಂಡು ಮುಚ್ಚಲ್ಪಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿಯೂ`ಕೆಪಿಎಸ್ ಮ್ಯಾಗ್ನೆಟ್’ ಶಾಲೆಯನ್ನು ಆರಂಭಿಸಿ ಇತರ ಸರಕಾರಿ ಶಾಲೆಗಳ ೯೦೦ ವಿದ್ಯಾರ್ಥಿಗಳನ್ನು ವಿಲೀನಗೊಳಿಸಲಾಗಿದೆ. ಶಿಕ್ಷಕರ ನೇಮಕಕ್ಕೆ ಶಾಲೆಗಳಲ್ಲಿ ಪ್ರತಿ ವಿದ್ಯಾರ್ಥಿಯಿಂದ ೫೦೦೦ ರೂ ಪಡೆಯಲಾಗುತ್ತಿರುವುದಾಗಿ ಎಐಡಿಎಸ್‌ಓಗೆ ಮಾಹಿತಿ ದೊರೆತಿದೆ ಎಂದು ಗಂಭೀರ ಆರೋಪ ಮಾಡಿದರು.

ಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ವಿ.ಚಂದ್ರಿಕ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ