Friday, June 21, 2024

ಪ್ರಾಯೋಗಿಕ ಆವೃತ್ತಿ

ನಾನು ಅವ್ರ ಮನೆ ಬಾಗಿಲಿಗೆ ಹೋಗಿ ಸಹಕಾರ ಕೇಳಿದ್ದೇನೆ: ಹೆಚ್.ಡಿ.ಕುಮಾರಸ್ವಾಮಿ

ನಾನು ಅವ್ರ (ಸುಮಲತಾ) ಮನೆ ಬಾಗಿಲಿಗೆ ಹೋಗಿ ಸಹಕಾರ ಕೇಳಿದ್ದೇನೆ ಇದಕ್ಕಿಂತ ಇನ್ನೇನು ಮಾಡಬೇಕು ನಾನು ಎಂದಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ, ಅಂಬರೀಶ್ ಅಭಿಮಾನಿಗಳು ಸಹ ನನಗೆ ಸಹಾಯ ಮಾಡಿದ್ದಾರೆ ಎಂದಿದ್ದಾರೆ.

ಮದ್ದೂರಿನ ಕೆ ಹೊನ್ನಲಗೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೈಸೂರಿನ ಮೋದಿ ಕಾರ್ಯಕ್ರಮದಲ್ಲೂ ಕೂಡ ಸುಮಲತಾ ಅವರನ್ನ 2 ದಿನ ಪ್ರಚಾರಕ್ಕೆ ಬರುವಂತೆ ಕೋರಿದ್ದೆ, ಆದರೆ ಈ ಬಗ್ಗೆ ಗೊಂದಲ ಮಾಡೋದು ಬೇಡ ಎಂದರು.

ಸುಮಲತಾ ಮಂಡ್ಯದಲ್ಲಿ ಕುಮಾರಸ್ವಾಮಿ ಗೆ ಸಪೋರ್ಟ್ ಮಾಡಿಲ್ಲ ಎಂಬ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರು ಆ ರೀತಿ ಯಾಕೆ ಹೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ. ಸುಮಲತಾ ಅವ್ರ ಪ್ರಶ್ನೆ ಇಲ್ಲಿ ಬರಲ್ಲ. ದೇವೇಗೌಡರು ಯಾಕೆ ಹಾಗೆ ಹೇಳಿದ್ದಾರೆ ಗೊತ್ತಿಲ್ಲ. ದೇವೇಗೌಡರಿಗೆ ಮಾಹಿತಿ ಕೊರತೆ ಆಗಿರಬೇಕು ಅನಿಸುತ್ತೆ ಎಂದರು.

ಪಕ್ಷ ಭೇದ ಮರೆತು ಕಾಂಗ್ರೆಸ್, ಬಿಜೆಪಿಯವ್ರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಯಾರು ವಿರೋಧ ಮಾಡಿಲ್ಲ ಎಲ್ಲರೂ ನನಗೆ ಸಹಾಯ ಮಾಡಿದ್ದಾರೆ. ಬೆಂಗಳೂರಿನಿಂದ ಬಂದು ಸುಮಲತಾ ನನಗೆ ಓಟ್ ಮಾಡಿದ್ದಾರೆ. ಪಕ್ಷ ಭೇದ ಮರೆತು ಕೆಲಸ ಮಾಡಿದ್ದಾರೆ ರಾಜ್ಯದಲ್ಲೆ ಅತ್ಯಂತ ಬಹುಮತಗಳಿಂದ ಗೆಲ್ಲಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಜಯ ನನ್ನದಲ್ಲ ಜಿಲ್ಲೆಯ ಎಲ್ಲಾ ಜನರದ್ದು ಎಂದ ಕುಮಾರಸ್ವಾಮಿ, ನನ್ನ ಪರವಾಗಿ ಮಂಡ್ಯ ಜಿಲ್ಲೆ ಎಲ್ಲಾ ಜನ ಚುನಾವಣೆ ನಡೆಸಿದ್ದಾರೆ. ಈ ಜಯ ನನ್ನದಲ್ಲಾ ಇದು ಎಲ್ಲರ ಜಯ. ಜಿಲ್ಲೆಯ ಎಲ್ಲಾ ಪಕ್ಷದಲ್ಲಿರುವ ನನ್ನ ಅಭಿಮಾನಿಗಳ ಜಯ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!