Friday, September 20, 2024

ಪ್ರಾಯೋಗಿಕ ಆವೃತ್ತಿ

RSS ಶಾಖೆಯಲ್ಲಿ ನೀಲಿ ಚಿತ್ರ ನೋಡವುದಕ್ಕೆ ಹೋಗಬೇಕಾ ? ಎಂದಿದ್ದ HDK ವಿಡಿಯೋ ವೈರಲ್

RSS ಶಾಖೆಯಲ್ಲಿ ನೀಲಿ ಚಿತ್ರ ನೋಡವುದನ್ನು ಕಲಿಯುವುದಕ್ಕೆ ಎಂದು ಪ್ರಶ್ನೆ ಮಾಡಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹಳೆಯ ವಿಡಿಯೋ ಈಗ ವೈರಲ್ ಆಗಿ ಎಲ್ಲೆಡೆ ಹರಿದಾಡುತ್ತಿದೆ.

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ, ಆರ್.ಎಸ್.ಎಸ್ ಪರ ಹೋರಾಟದಲ್ಲಿ ಪಾಲ್ಗೊಂಡಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು, ಕೇಸರಿ ಶಾಲು ಹಾಕಿ ಸರ್ಕಾರದ ವಿರುದ್ದ ಹೇಳಿಕೆ ನೀಡಿದ್ದರು.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷವು, ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಅವರು ಆರ್ ಎಸ್ ಎಸ್ ಬಗ್ಗೆ ಅತ್ಯಂತ ಹೀನಾಮಾನವಾಗಿ ತೆಗಳಿದ್ದ ವಿಡಿಯೋವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡು ಟೀಕಿಸಿದೆ.

“>

ಹೆಚ್.ಡಿ.ಕುಮಾರಸ್ವಾಮಿ ಅವರು ಈಗ ಶಾಖ ಹೆಚ್ಚಾಗಿ ಶಾಖೆಯ ಟ್ರೈನಿಂಗ್ ಗೆ ಹೋಗುತ್ತಿದ್ದಾರೆ! ಹೆಚ್ ಡಿ ಕುಮಾರಸ್ವಾಮಿಯವರಿಗೆ HD ಸಿನೆಮಾ ನೋಡುವ ಮನಸಾಗಿ ಶಾಖೆಯ ಕಡೆ ಮುಖ ಮಾಡಿದ್ದಾರೆ. ಸ್ವಾಭಿಮಾನಿ ಪಕ್ಷ ನಮ್ಮದು ಎನ್ನುತ್ತಿದ್ದವರು ಈಗ ಬಿಜೆಪಿ ಹೈಕಮಾಂಡ್ ನಾಯಕರ ಮನೆ ಮುಂದೆ ವಯೋವೃದ್ಧ ತಂದೆಯನ್ನು ನಿಲ್ಲಿಸಿ ದೇಹಿ ಎನ್ನುತ್ತಿರುವುದು ಕನಿಕರ ಮೂಡಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷವು ಲೇವಡಿ ಮಾಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!