ಮಿಸ್ಟರ್ ಕುಮಾರಸ್ವಾಮಿ, ಕೇಂದ್ರದ ಬಳಿ ಅನುದಾನ ನಾನೇಕೆ ಕೇಳಲಿ ಎಂಬ ನಿಮ್ಮ ಈ ಮಾತು, ಕನ್ನಡಿಗರು ಅದರಲ್ಲೂ ನಿಮ್ಮನ್ನು ನಂಬಿ ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿರುವ ಮಂಡ್ಯ ಮತದಾರರಿಗೆ ಮಾಡಿರುವ ಅಪಮಾನ ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.
ಸಂಸದ, ಕೇಂದ್ರ ಸಚಿವ ಎಂದರೆ, ವೀಕೆಂಡಲ್ಲಿ ರಾಜ್ಯಕ್ಕೆ ಬಂದು ರಾಜ್ಯ ಸರ್ಕಾರ ಹಾಗೂ ಸಚಿವರ ಮೇಲೆ ಸುಳ್ಳು ಆರೋಪ ಮಾಡಿ ಹಿಟ್ ಅಂಡ್ ರನ್ ಮಾಡುವುದಲ್ಲ ಎಂದು ‘ಎಕ್ಸ್’ ನಲ್ಲಿ ತಿರುಗೇಟು ನೀಡಿದೆ.
ಮಿಸ್ಟರ್ ಕುಮಾರಸ್ವಾಮಿ, ಕೇಂದ್ರದ ಬಳಿ ಅನುದಾನ ನಾನೇಕೆ ಕೇಳಲಿ ಎಂಬ ನಿಮ್ಮ ಈ ಮಾತು, ಕನ್ನಡಿಗರು ಅದರಲ್ಲೂ ನಿಮ್ಮನ್ನು ನಂಬಿ ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿರುವ ಮಂಡ್ಯ ಮತದಾರರಿಗೆ ಮಾಡಿರುವ ಅಪಮಾನ.
ಸಂಸದ, ಕೇಂದ್ರ ಸಚಿವ ಎಂದರೆ, ವೀಕೆಂಡಲ್ಲಿ ರಾಜ್ಯಕ್ಕೆ ಬಂದು ರಾಜ್ಯ ಸರ್ಕಾರ ಹಾಗೂ ಸಚಿವರ ಮೇಲೆ ಸುಳ್ಳು ಆರೋಪ ಮಾಡಿ ಹಿಟ್ ಅಂಡ್ ರನ್… pic.twitter.com/KzZo47HPng
— Karnataka Congress (@INCKarnataka) October 28, 2025
“>
ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ತೆರಿಗೆ, ಅನುದಾನ, ಪರಿಹಾರ, ನೀರಾವರಿ ಯೋಜನೆ ಸೇರಿದಂತೆ ಪ್ರತಿ ಹಂತದಲ್ಲೂ ಅನ್ಯಾಯ ಆಗುತ್ತಲೇ ಇದೆ. ಆದರೂ ಇವುಗಳ ಬಗ್ಗೆ ಮಾತನಾಡದೇ ನಾನೇಕೆ ಅನುದಾನ ಕೇಳಲಿ ಎಂಬ ನಿಮ್ಮ ಮಾತು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನಿಮ್ಮ ಗುಲಾಮಗಿರಿತನಕ್ಕೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ತಿವಿದಿದೆ.
ನಿಮ್ಮನ್ನು ಆರಿಸಿದ ಮಂಡ್ಯ ಜನರ ಸ್ವಾಭಿಮಾನವನ್ನು ಮತ್ತೊಬ್ಬರ ಗುಲಾಮಗಿರಿಗೆ ಬಳಸಿಕೊಳ್ಳುತ್ತಿರುವುದು ಆ ಜನರ ದೌರ್ಭಾಗ್ಯವೇ ಸರಿ. ಇಂತಹ ಉಡಾಫೆ ಮಾತಿನ ಮೂಲಕ ನೀವೊಬ್ಬ “ತುಕ್ಕು ಸಚಿವ” ಎಂಬುದನ್ನು ಸಾಬೀತುಪಡಿಸಿದ್ದೀರಿ ಎಂದು ವ್ಯಂಗ್ಯವಾಡಿದೆ.




