Thursday, September 19, 2024

ಪ್ರಾಯೋಗಿಕ ಆವೃತ್ತಿ

ಹೆದ್ಧಾರಿ ಪ್ರಾಧಿಕಾರದ ಅಧಿಕಾರಿಗೆ ಸಂಸದೆ ಸುಮಲತಾ ತೀವ್ರ ತರಾಟೆ  

ಬೆಂಗಳೂರು-ಮೈಸೂರು ರಾಷ್ಟೀಯ ಹೆದ್ದಾರಿಯ ಅವ್ಯವಸ್ಥೆ ಕುರಿತು ಸಂಸದೆ ಸಮಲತಾ ಅಧಿಕಾರಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.

ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಬಳಿ ಹೆದ್ದಾರಿಯ ಅವ್ಯವಸ್ಥೆ ವೀಕ್ಷಣೆ ಮಾಡಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆ ಬಂದಾಗಲೆಲ್ಲಾ ಪರಿಸ್ಥಿತಿ ಹದಗೆಡುತ್ತದೆ ಎಂದು ಸ್ಥಳೀಯರು ದೂರಿದರು, ಆಗ ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರದ ಅಧಿಕಾರಿ ಸ್ಥಳಕ್ಕೆ ಬಾರದಿದ್ದಕ್ಕೆ ಸಂಸದೆ ಸುಮಲತಾ ಕೆಂಡಾಮಂಡಲವಾದರು. ಈ ವೇಳೆ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಅವರಿಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.

ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಯ ಸಿಬ್ಬಂದಿ ನಿರಂಜನ್ ಎಂಬುವರು ಬಂದಿದ್ದರು. ನಿರಂಜನ್ ಗೆ  ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡ ಸಂಸದೆ ಸುಮಲತಾ. ಏನ್ರಿ ಇದು ಬಂದಾಗಲೆಲ್ಲಾ ಇದೇ ಸಮಸ್ಯೆ ಇರುತ್ತೆ, ನಾ ಇನ್ನ ಎಷ್ಟು ಸಲ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಪ್ರಶ್ನಿಸಿದರು. ಈ ವೇಳೆ ಇಲ್ಲ‌ಮೇಡಮ್ ಸರ್ ಗೆ ಹೇಳ್ತಿನಿ ಎಂದ ನಿರಂಜನ್ ಗೆ , ಯಾರು ಸರ್ ಅದು ಎಂದು ತಮ್ಮ ಪಿಎ ಮೂಲಕ ಶ್ರೀಧರ್ ಗೆ ಪೋನ್ ಮಾಡಿದ ಸಂಸದೆ ಏನ್ ಸರ್ ಇದು ನೀವು ಜನರ ಜೊತೆ ಆಟ ಆಡ್ತಿದ್ದೀರಾ, ನಾವಿನ್ನು ಎಷ್ಟು ಸರಿ ಬರಬೇಕು‌, ನಾವು ಸ್ಥಳಕ್ಕೆ ಬಂದರೂ ಬಾರದೇ,  ಏನ್ ಮಾಡ್ತಿದ್ದೀರಿ ನೀವೆಲ್ಲಾ? ನಿಮಗೆ ಜವಾಬ್ದಾರಿ ಇಲ್ವಾ ಎಂದೆಲ್ಲಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಂಡ್ಯ ಎಂಪಿ ಅಂದ್ರೆ ಅಧಿಕಾರಿಗಳಿಗೆ ಲೆಕ್ಕಾ ಇಲ್ಲ, ಭಾರಿ ಮಳೆಗೆ ಜಮೀನಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ.
ಜನ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಕಳೆದ ಬಾರಿಯೂ ಸಹ ಪರಿಶೀಲನೆ ನಡೆಸಲಾಗಿತ್ತು. ಸಮಸ್ಯೆ ಬಗೆಹರಿಸುವ ಬಗ್ಗೆ ಸೂಚನೆ ಕೊಡಲಾಗಿತ್ತು. ಇದುವರೆವಿಗೂ ಏನೂ ಮಾಡಿಲ್ಲ, ಮತ್ತೆ ಯಡವಟ್ಟಾಗಿದೆ.
ಬೇಜಾವಬ್ದಾರಿ ಅಧಿಕಾರಿಗಳ ಜೊತೆ ಹೋರಾಟ ಮಾಡಿ ಸಾಕಾಗಿದೆ. ಲೆಟರ್ ಕೂಡ ಬರೆದಿದ್ದೇನೆ, ಯಾವ ಸ್ಪಂದನೆ ಕೂಡಾ ಇಲ್ಲ. ಯಾವ ಅಧಿಕಾರಿನೂ ಬಂದಿಲ್ಲ, ಯಾರನ್ನೋ ಕಳುಹಿಸಿದ್ದಾರೆ. ಮಿನಿಸ್ಟರ್ ಬಂದರೆ ಮಾತ್ರ ಕಾಟಚಾರಕ್ಕೆ ಅಧಿಕಾರಿಗಳು ಬರ್ತಾರೆ. ಅಪ್ರುವಲ್ ಗೆ ಕಳುಹಿಸಿದ್ದೇವೆ ಎಂದು ಬರಿ ನೆಪ ಹೇಳ್ತಾರೆ ಎಂದು ಕಿಡಿಕಾರಿದರು.

ನಮ್ಮ ಕರ್ತವ್ಯ ಮಾಡ್ತಿದ್ದೇವೆ, ಮುಂದೆ ಜನ ರೊಚ್ಚಿಗೆಳ್ತಾರೆ. ರೈತರು ಬೇಸತ್ತು ಹೋಗಿದ್ದಾರೆ. ಮಳೆ ಬಂದರೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ, ಸಾವಿರಾರು ಕೋಟಿ ರೂ.ಗಳ ಕಾಮಗಾರಿಗೆ ಈ ಗತಿಯಾಗಿದೆ. ಸಿಎಂ ಜೊತೆ ಚರ್ಚಿಸಿ ಪತ್ರ ಕೊಟ್ಟಿದ್ದೇನೆ. ಸಭೆ ಕರೆದು ಸೂಚನೆ ಕೊಡುವುದಾಗಿ ತಿಳಿಸಿದ್ದಾರೆ. ಎಂಪಿ ಅಂದ್ರೆ ಅಧಿಕಾರಿಗಳಿಗೆ ಲೆಕ್ಕಾ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಸರಿಯಾಗಿ ಬರ್ತಿಲ್ಲ, ಗೌರವ ಕೊಡ್ತಿಲ್ಲ. ಮೂರು ತಿಂಗಳು ಕೂಡ  ಆಗಿಲ್ಲಾ, ಕಮಿಷನ್ ಯಾರ್ ಯಾರಿಗೆ ತಲುಪಬೇಕೊ ಗೊತ್ತಿಲ್ಲ!. ಅವೈಜ್ಞಾನಿಕ ಕೆಲಸ ಇದು. ಮಂಡ್ಯ ಜನಕ್ಕೆ ಅನುಕೂಲವಾಗುತ್ತೆ ಅನ್ಕೊಂಡಿದ್ದೆ. ನನಗೆ ಹುಚ್ಚು ಅನ್ಕೊಂಡಿದ್ರು, ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಮಾತನಾಡಿದ್ದೆ.
ಮೊದಲೇ ಕ್ರಮ ತೆಗೆದುಕೊಂಡಿದ್ರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಶಾಲಾ ಮಕ್ಕಳಿಗೆ ತೊಂದರೆಯಾಗ್ತಿದೆ, ಎಂಟ್ರಿ, ಎಕ್ಸಿಟ್, ಪುಟ್ಪಾತ್, ಸರ್ವಿಸ್ ರೋಡ್ ಮಾಡಿಲ್ಲ. ಅವೈಜ್ಞಾನಿಕವಾಗಿದೆ ಈ  ಹೆದ್ದಾರಿ ಕಾಮಗಾರಿ.
ಹೆದ್ದಾರಿ ಅಂದ್ರೆ ಮೈಸೂರು-ಬೆಂಗಳೂರಿನವರಿಗೆ ಮಾತ್ರನಾ, ಉಳಿದವರ ಗತಿ ಏನು ಎಂದು ಪ್ರಶ್ನಿಸಿದರು.

ನೀವು ಇಷ್ಟು ಬೇಜವಾಬ್ದಾರಿಯಿಂದ ವರ್ತಿಸಿದರೆ ಮಂಡ್ಯದ ಜನರ ರಸ್ತೆತಡೆ ಮಾಡಿ ಪ್ರತಿಭಟನೆ ನಡೆಸುತ್ತಾರೆ, ಇಡೀ ಯೋಜನೆ ವ್ಯರ್ಥವಾಗುತ್ತೆ. ಇದನ್ನು ಇಲ್ಲಿಗೆ ಬಿಡಲ್ಲ, ಮೇಲಿನವರ ಗಮನಕ್ಕೆ ತರ್ತೀನಿ ಮಿಸ್ಟರ್ ಶ್ರೀಧರ್ ಎಂದು ಎಂಜಿನಿಯರ್​ ವಿರುದ್ದ ಹರಿಹಾಯ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!