‘ಬಡವರ ಮಕ್ಕಳು ಬೆಳಿಬೇಕು, ಮಿಂಚಬೇಕು!. ಹೇ ಗಿಲ್ಲಿ, ಅಭಿನಂದನೆಗಳು ಕಣೋ☺️
ನೀನು ಅದಕ್ಕೆ (ಗೆಲುವಿಗೆ) ಅರ್ಹ….’ ಎಂದು ಬಿಗ್ ಬಾಸ್ ರಿಯಾಲಿಟಿ ಶೋ ನ ಸಹಸ್ಪರ್ಧಿ ಕಾವ್ಯ ಹಾಗೂ ಗಿಲ್ಲಿನಟನ ಪ್ರೀತಿಯ ‘ಕಾವು’ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ಧಾರೆ.
ಜೀರೋ ಟು ಹೀರೋ.. ಆಗಿ ಇನ್ನಷ್ಟು ಬೆಳೆಯಬೇಕಿದೆ. ಬೇಗ ಆ್ಯಕ್ಷನ್ ಕಟ್ ಹೇಳೋ ಹಾಗಾಗ್ಲಿ.. ತುಂಬಾ ತುಂಬಾ ಒಳ್ಳೇದಾಗ್ಲಿ… ಎಂದು ಬರೆದು ಗಿಲ್ಲಿ ವಿನ್ನರ್ ಎಂದು ಘೋಷಿಸಿದ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಸಹಸ್ಪರ್ಧಿ ಅಶ್ವಿನಿಗೌಡ ಅವರು ನೀಡಿದ್ದ ‘ಬಡವನಲ್ಲ’ ಹೇಳಿಕೆಗೆ ತಮ್ಮದೇ ದಾಟಿಯಲ್ಲಿ ತಿರುಗೇಟು ನೀಡಿದ್ದಾರೆ.
View this post on Instagram
“>
ಗಿಲ್ಲಿ ನಟನ ಗೆಲುವನ್ನು ಅವರ ಅಭಿಮಾನಿಗಳು ರಾಜ್ಯಾದ್ಯಂತ ಸಂಭ್ರಮಿಸುತ್ತಿದ್ದು, ಗಿಲ್ಲಿಗೆ ಎಲ್ಲೆಡೆ ಅದ್ಧೂರಿ ಸ್ವಾಗತ ಸಿಗುತ್ತಿದೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ವಿನ್ನರ್ ಈ ಮಟ್ಟಿನ ಪ್ರೀತಿ, ವಿಶ್ವಾಸ ಗಳಿಸಿಕೊಂಡಿದ್ದಾರೆ.ಇನ್ನು ಈ ಗೆಲುವನ್ನು ಗಿಲ್ಲಿ ಅಭಿಮಾನಿಗಳು ಮಾತ್ರವಲ್ಲ, ಪ್ರತಿಸ್ಪರ್ಧಿಯಾಗಿ ಭಾರಿ ಗಮನಸೆಳೆದಿದ್ದ ಕಾವ್ಯ ಕೂಡ ಸಂಭ್ರಮಿಸಿದ್ದಾರೆ.
ಬಿಗ್ ಬಾಸ್ ಶೋ ಮುಕ್ತಾಯದ ಬೆನ್ನಲ್ಲೇ ಮನೆಗೆ ವಾಪಸ್ ಆಗಿರುವ ಕಾವ್ಯಾ ಇದೀಗ ಗಿಲ್ಲಿಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ ಅದೇ ಪೋಸ್ಟ್ ಮೂಲಕ ಗಿಲ್ಲಿ ಬಡವನಲ್ಲ ಎಂಬ ಅಶ್ವಿನಿಗೌಡ ಅವರ ಟೀಕೆಗೂ ಪರೋಕ್ಷ ಉತ್ತರ ನೀಡಿದಂತಿದೆ.




