Thursday, September 19, 2024

ಪ್ರಾಯೋಗಿಕ ಆವೃತ್ತಿ

ಹೈಕೋರ್ಟ್ ಮೆಟ್ಟಿಲೇರಿದ NEET ಪರೀಕ್ಷಾ ಅಕ್ರಮ| ಅಫಿಡವಿಟ್ ಸಲ್ಲಿಸಲು NTAಗೆ ಸೂಚನೆ

ನೀಟ್ (NEET) ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಪ್ರಶ್ನಿಸಿ ಕೊಲ್ಕತ್ತಾ ಹೈಕೋರ್ಟ್ ನಲ್ಲಿ ತನ್ಮೋಯ್ ಚಟ್ಟೋಪಾಧ್ಯಾಯ ಮತ್ತು ಇತರರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ(PIL)ಯನ್ನು ದಾಖಲಿದ್ದು, ನ್ಯಾಯಾಲಯವು ಈ ಕುರಿತಂತೆ ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಗೆ ಸೂಚನೆ ನೀಡಿದೆ.

ಅರ್ಜಿದಾರರು, NEET ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು 720ಕ್ಕೆ 718 ಅಥವಾ 719 ಅಂಕಗಳನ್ನು ಗಳಿಸಲು ಸಾಧ್ಯವಿಲ್ಲ ಎಂಬುದನ್ನು ವಾದಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ತೀರ್ಪನ್ನು ಅವಲಂಬಿಸಿ ಎನ್‌ಟಿಎ ಅಂತಹ ಅಂಕಗಳನ್ನು ನೀಡುತ್ತಿದೆ ಎಂಬ ಅಂಶವನ್ನು ಗಮನಿಸಿದ ನಂತರ ನ್ಯಾಯಮೂರ್ತಿ ಕೌಸಿಕ್ ಚಂದಾ ಮತ್ತು ನ್ಯಾಯಮೂರ್ತಿ ಅಪುರ್ಬಾ ಸಿಂಗ್ ರೇ ಅವರ ವಿಭಾಗೀಯ ಪೀಠವು, ಆರೋಪಗಳಿಗೆ ಸಂಬಂಧಿಸಿದಂತೆ 10 ದಿನಗಳ ಅವಧಿಯಲ್ಲಿ ಅಫಿಡವಿಟ್ ಸಲ್ಲಿಸುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸೂಚಿಸಿದೆ.

ಈ ಪರೀಕ್ಷೆಗೆ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೀಸಲಾತಿ ನೀತಿಯನ್ನು ಹೇಗೆ ಅನುಸರಿಸಲಾಗಿದೆ ಎಂದು ತನ್ನ ಅಫಿಡವಿಟ್‌ನಲ್ಲಿ ಬಹಿರಂಗಪಡಿಸುವಂತೆ ನ್ಯಾಯಾಲಯವು NTA ಗೆ ಕೇಳಿದೆ.

“>

ನ್ಯಾಯಾಲಯದ ಮುಂದಿನ ಆದೇಶದವರೆಗೆ ನೀಟ್ ಪರೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು NTA ಸಂರಕ್ಷಿಸಬೇಕು ಎಂಬ ನಿರ್ದೇಶನದೊಂದಿಗೆ ಪೀಠವು ಮುಂದಿನ ಎರಡು ವಾರಗಳ ನಂತರ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ. “ಸಮಾಲೋಚನೆ ಪ್ರಕ್ರಿಯೆಯ ಫಲಿತಾಂಶವು ರಿಟ್ ಅರ್ಜಿಯ ಫಲಿತಾಂಶಕ್ಕೆ ಬದ್ಧವಾಗಿರುತ್ತದೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನೀಟ್ ಪರೀಕ್ಷಾ ಅಕ್ರಮವು ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಕೌನ್ಸಿಲಿಂಗ್ ಪ್ರಕ್ರಿಯೆಯು ವಿಳಂಬವಾಗುವ ಸಾಧ್ಯತೆ ಇದೆ. ಪರೀಕ್ಷಾ ಅಕ್ರಮದ ಬಗ್ಗೆ ಆತಂಕಕೊಂಡಿರುವ ವಿದ್ಯಾರ್ಥಿಗಳ ಪೋಷಕರಿಂದ ನ್ಯಾಯಾಲಯವು ಯಾವ ಪರಿಹಾರ ನೀಡಲಿದೆ ಎಂದು ಕಾದು ನೋಡಬೇಕಿದೆ.

ಭಾರತದ ಡೆಪ್ಯುಟಿ ಸಾಲಿಸಿಟರ್ ಜನರಲ್ ಧೀರಜ್ ಕುಮಾರ್ ತ್ರಿವೇದಿ ಮತ್ತು ವಕೀಲ ತೀರ್ಥ ಪತಿ ಆಚಾರ್ಯ NTA ಮತ್ತು ಯೂನಿಯನ್ ಆಫ್ ಇಂಡಿಯಾ ಪರವಾಗಿ ವಾದಿಸಿದರು. ಪ್ರತಿವಾದಿಯ ಪರ ವಕೀಲ ಸುನೀತ್ ಕುಮಾರ್ ರಾಯ್ ವಾದ ಮಂಡಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!